ಬ್ರಿಡ್ಜ್ ಕಂ ಬ್ಯಾರೇಜ್, ಚೆಕ್ ಡ್ಯಾಂ, ಕೆರೆ ಅಭಿವೃದ್ಧಿಗೆ 34.61 ಕೋಟಿ ಬಿಡುಗಡೆ

| Published : Jun 07 2025, 01:20 AM IST

ಸಾರಾಂಶ

ಯಲಬುರ್ಗಾ, ಕುಕನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 10 ಬ್ರೀಡ್ಜ್ ಕಂ ಬ್ಯಾರೇಜ್, ಒಂದು ಕೆರೆ ಹಾಗೂ ಒಂದು ಚೆಕ್ ಡ್ಯಾಂ ನಿರ್ಮಾಣಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಪ್ರಸ್ತಾವನೆಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುಮೋದನೆ ನೀಡಿದ್ದು ₹ 34.61 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಕುಕನೂರು:

ಯಲಬುರ್ಗಾ, ಕುಕನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 10 ಬ್ರೀಡ್ಜ್ ಕಂ ಬ್ಯಾರೇಜ್, ಒಂದು ಕೆರೆ ಹಾಗೂ ಒಂದು ಚೆಕ್ ಡ್ಯಾಂ ನಿರ್ಮಾಣಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಪ್ರಸ್ತಾವನೆಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುಮೋದನೆ ನೀಡಿದ್ದು ₹ 34.61 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುವ ಹಳ್ಳದಿಂದ ಜನರು ಸಂಚಾರಕ್ಕೆ ತೊಂದರೆ ಪಡುವಂತಾಗಿತ್ತು. ಹಳ್ಳದ ನೀರಿನ ಹರಿವು ತಗ್ಗುವರೆಗೂ ಕಾದು ಹೋಗಬೇಕಾದ ಅನಿವಾರ್ಯತೆ ಇತ್ತು. ಸಂಚಾರಕ್ಕೆ ತೊಂದರೆ ಇರುವ ಹಳ್ಳಗಳಿಗೆ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ರಾಯರಡ್ಡಿ ಪ್ರಸ್ತಾವನೆ ಸಲ್ಲಿಸಿದ್ದರು. ಸದ್ಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ರಾಜ್ಯ ಕಾರ್ಯದರ್ಶಿಗಳು ಅನುದಾನ ಬಿಡುಗಡೆಗೊಳಿಸಿ ಅನುಮೋದನೆ ನೀಡಿದ್ದಾರೆ. ಇದರಿಂದ ಜನರ ಸಂಚಾರಕ್ಕೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹ ಅನುಕೂಲ ಆಗಲಿದೆ.

ತಳಕಲ್ ಗ್ರಾಮದ ಬಾಣಿಕೆರೆಯ ಅಭಿವೃದ್ಧಿಗೆ ₹ 1 ಕೋಟಿ, ಯಲಬುರ್ಗಾ ತಾಲೂಕಿನ ಕರಮುಡಿ-ಹಾಳಕೇರಿ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹3.45 ಕೋಟಿ, ಯಲಬುರ್ಗಾ ತಾಲೂಕಿನ ಸಂಗನಾಳ-ಯಲಬುರ್ಗಾ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹ 3.38 ಕೋಟಿ, ತೊಂಡಿಹಾಳ ಮತ್ತು ನರೇಗಲ್ ಗ್ರಾಮಗಳ ತೊಂಡಿಹಾಳ ಮತ್ತು ನರೇಗಲ್ ಗ್ರಾಮಗಳ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹ 4.95 ಕೋಟಿ, ಯಲಬುರ್ಗಾ ತಾಲೂಕಿನ ತಾಳಕೇರಿ-ಗಾಣದಾಳ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹ 3.26 ಕೋಟಿ ಅನುದಾನ ಬಿಡುಗಡೆಯಾಗಿದೆ.

ಯಲಬುರ್ಗಾ ತಾಲೂಕಿನ ಕಟಗಿಹಳ್ಳಿ-ಗಾಣದಾಳ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹ 2.5 ಕೋಟಿ, ಯಲಬುರ್ಗಾ ತಾಲೂಕಿನ ಕುದ್ರಿಕೋಟಗಿ-ಗದಗೇರಿ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ₹ 2.5 ಕೋಟಿ, ಯಲಬುರ್ಗಾ ತಾಲೂಕಿನ ಮುರಡಿ-ಗೆದಗೇರಿ ಗ್ರಾಮಗಳ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ₹ 2.26 ಕೋಟಿ, ಕುಕನೂರು ತಾಲೂಕಿನ ತಳಕಲ್ಲ ಮತ್ತು ಬನ್ನಿಕೊಪ್ಪ ಗ್ರಾಮಗಳ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ₹ 2.01 ಕೋಟಿ, ಕುಕನೂರು ತಾಲೂಕಿನ ರ್‍ಯಾವಣಕಿ ಮತ್ತು ಬೂದಗುಂಪಿ ಗ್ರಾಮಗಳ ನಡುವಿನ ಗ್ರಾಮಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ₹ 5.07 ಕೋಟಿ, ಕುಕನೂರ ತಾಲೂಕಿನ ಬಿನ್ನಾಳ-ಯರೇಹಂಚಿನಾಳ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ₹ 2.76 ಕೋಟಿ, ಯಲಬುರ್ಗಾ ತಾಲೂಕಿನ ಯಲಬುರ್ಗಾ ಪಟ್ಟಣದ ಸರ್ವೇ ನಂ. 513ರಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲು ₹ 1.5 ಕೋಟಿಯನ್ನು ಸಣ್ಣ ನೀರಾವರಿ ಸಚಿವರು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದ್ದಾರೆ. ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಮಳೆಗಾಲದಲ್ಲಿ ಸಹ ಸುಗಮ ಸಂಚಾರಕ್ಕೆ ಅನುಕೂಲ ಆಗಲು ಹಾಗೂ ಹಳ್ಳದ ನೀರು ಹರಿದು ಹೋಗದೆ ಅಂತರ್ಜಲ ಅಭಿವೃದ್ಧಿ ಆಗುವ ದೃಷ್ಟಿಕೋನದಿಂದ ಬ್ರೀಡ್ಜ್ ಕಂ ಬ್ಯಾರೇಜ್ ಹಾಗೂ ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಸದ್ಯ ಅವುಗಳ ನಿರ್ಮಾಣಕ್ಕೆ ಅನುದಾನ ಸಹ ಬಿಡುಗಡೆಗೊಂಡಿದೆ. ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಜನರಿಗೆ ಅನುಕೂಲ ಆಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.