ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ : ಈ ಬಾರಿ ಮಳೆ ಹೆಚ್ಚು ಬಿದ್ದಿದ್ದು ಹಲವು ಕೆರೆಗಳು ಕೋಡಿ ಬಿದ್ದಿವೆ. ಜಿಲ್ಲೆಯಲ್ಲಿ ೩೪ ಮನೆಗಳು ಸಂಪೂರ್ಣ ಬಿದ್ದಿದ್ದು ಮನೆ ನಷ್ಟ ಹೊಂದಿದವರಿಗೆ ಜಿಲ್ಲಾಧಿಕಾರಿಗಳ ಪರಿಹಾರದಿಂದ ಈಗಾಗಲೇ ೧೧.೫೦ ಲಕ್ಷ ರೂಗಳನ್ನು ಫಲಾನುಭವಿಗಳ ಖಾತೆಗಳಿಗೆ ಹಾಕಲಾಗಿದೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೨ ದಿನಗಳಿಂದ ಸುರಿದ ಭಾರಿಮಳೆಯಿಂದ ಆದ ಅನಾಹುತಗಳ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರಟಗೆರೆ ತಾಲೂಕಿನಲ್ಲಿ ಬೆಳೆದ ಬೆಳೆ ಹಾಳಾಗಿದೆ. ಇದರಿಂದ ರೈತರಿಗೆ ನಷ್ಟವಾಗಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲೂ ಬೆಳೆ ಹಾನಿಯಾಗಿದ್ದು ವರದಿ ನೀಡಲು ಇಲಾಖಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ನೆರೆ ಪರಿಹಾರಕ್ಕೆ ಈಗ ಜಿಲ್ಲಾಧಿಕಾರಿಗಳ ಬಳಿ ೨೧.೯೨ ಕೋಟಿ ಹಣ ಇದೆ, ಕೊರಟಗೆರೆ ತಹಶೀಲ್ದಾರ್ ಬಳಿ ೩೯ ಲಕ್ಷವಿದ್ದು ಪ್ರಕೃತಿ ವಿಕೋಪ ನಿಧಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಬಳಿ ೩.೯೪ ಕೋಟಿ ರೂ ಇದೆ. ನಮ್ಮ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ತಡೆ ಮತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಿದ್ದವಾಗಿದೆ. ಇದರೊಂದಿಗೆ ಭಾರಿ ಮಳೆಯಿಂದ ಏರಿಗಳು ರಸ್ತೆಗಳು ನಾಲೆಗಳು ಹಾಳಾಗಿದ್ದು ಅವುಗಳನ್ನು ಪಟ್ಟಿ ಮಾಡಲು ಎಂಜಿನಿಯರ್ ಗಳಿಗೆ ಆದೇಶಿಸಲಾಗಿದೆ ಎಂದರು.ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿಗಳಿಗೆ ಹಣ ನೀಡಿದ್ದು, ಅಭಿವೃದ್ದಿಗೆ ಕಾಮಗಾರಿಗಳಿಗೂ ಸಾಕಷ್ಟು ಹಣ ನೀಡುತ್ತಿದ್ದೇವೆ. ಈ ಭಾರಿ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದಿಗೆ 3.72 ಲಕ್ಷ ಕೋಟಿ ರು. ಆಯವ್ಯಯ ಮಂಡಿಸಿದ್ದಾರೆ, ಕಳೆದ ಸರ್ಕಾರಕ್ಕಿಂತ ೨೦,೦೦೦ ಸಾವಿರ ಕೋಟಿ ಹಣ ಹೆಚ್ಚಾಗಿ ಅಯವ್ಯಯದಲ್ಲಿ ಮಂಡಿಸಿದ್ದೇವೆ, ನಾವು ವರ್ಷಕ್ಕೆ ೫೬,೦೦೦ ಕೋಟಿ ಬಡವರ ಗ್ಯಾರೆಂಟಿಗಳಿಗೆ ಹಣ ನೀಡಿ ಅಭಿವೃದ್ದಿಗೂ ಹಣ ನೀಡುತ್ತಿದ್ದೇವೆ, ಆದರೆ ನಮಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದ್ದು ರಾಜ್ಯಕ್ಕೆ ಪರಿಹಾರ ನಿಧಿಗಳನ್ನು ನೀಡುತ್ತಿಲ್ಲ ಎಂದರು. ಕಳೆದ ಬಾರಿ ರಾಜ್ಯದಲ್ಲಿ ಬರಗಾಲದ ನಷ್ಟ ೩೬,೦೦೦ ಸಾವಿರ ಕೋಟಿ ಯಾಗಿತ್ತು, ಎನ್.ಡಿ.ಆರ್.ಎಫ್. ಅಡಿಯಲ್ಲಿ ಕೇಂದ್ರದಿಂದ ಬರಗಾಲದ ಪರಿಹಾರ ೧೨,೦೦೦ ಸಾವಿರ ಕೋಟಿ ಕೇಳಿತ್ತು, ಕೇಂದ್ರವು ನಮಗೆ ನಯಾ ಪೈಸೆ ಹಣ ನೀಡದಿದ್ದಾಗ ಉಚ್ಚನ್ಯಾಯಾಲಯಕ್ಕೆ ಸರ್ಕಾರ ದಾವೆ ಹಾಕಿದಾಗ ಕೇಂದ್ರ ಸರ್ಕಾರ ನಮಗೆ ನೀಡಿದ್ದು ೩೨೫೪ ಕೋಟಿ ಮಾತ್ರ. ಕೇಂದ್ರಕ್ಕೆ ಜಿಎಸ್‌ಟಿ ತೆರಿಗೆ ಹೆಚ್ಚು ಕಟ್ಟುತ್ತಿರುವ ಅತಿ ದೊಡ್ಡ ೨ನೇ ರಾಜ್ಯ ಕರ್ನಾಟಕವಾಗಿದೆ ಆದರೆ ನಮಗೆ ಪರಿಹಾರ ಅತಿ ಕಡಿಮೆಯಾಗಿದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ರವರು ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿಗಳನ್ನು ರಾಷ್ಟೀಯ ಕಾಮಗಾರಿಯಲ್ಲಿ ಬಿಡುಗಡೆ ಮಾಡಿ ನೀಡಲೇ ಇಲ್ಲ, ಕೊರಟಗೆರೆ ಕ್ಷೇತ್ರದ ೮ ಭಾಗಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಲು ಕೇಂದ್ರಕ್ಕೆ ೬೫ ಕೋಟಿ ಡಿಪಿಆರ್ ಮಾಡಿಸಿ ಪ್ರಸ್ತಾವನೆ ಸಲ್ಲಿಸದ್ದರೂ ಹಣ ಬರಲಿಲ್ಲ ಇದೆಲ್ಲದರ ನಡುವೆ ರಾಜ್ಯ ಸರ್ಕಾರವು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದರು. ಮಳೆಯಿಂದ ಮನೆ ಹಾನಿಗೊಳಗಾದ ಸಂತ್ರಸ್ತರಾದ ಕೊರಟಗೆರೆ ತಾಲೂಕು ಸಿ.ಎನ್.ದುರ್ಗ ಹೋಬಳಿ ಅಜ್ಜೀಹಳ್ಳಿ ಗ್ರಾಮದ ಶಂಕ್ರಮ್ಮ ಕೋಂ.ಲೇಟ್ ಸಾಕನರಸಯ್ಯ ಹಾಗೂ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮದ ಕೆಂಪಯ್ಯ ಬಿನ್ ದೊಡ್ಡ ಹನುಮಂತಯ್ಯ ಅವರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರವನ್ನು ಸಚಿವರು ವಿತರಿಸಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್ , ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ, ಇಇ ಮೂಡಲಗಿರಿ, ತಹಶೀಲ್ದಾರ್ ಮಂಜುನಾಥ್, ಬೆಂಗಳೂರು ವೃತ್ತದ ಪಿಡಬ್ಲುಡಿ ಅಧೀಕ್ಷಕ ಅಭಿಯಂತ ಜಗದೀಶ್, ತಾಪಂ ಆಡಳಿತಾಧಿಕಾರಿ ದೀಪಶ್ರೀ, ಸಿಪಿಐ ಅನಿಲ್ ಇತರರಿದ್ದರು. ಮಾಡುವಂತೆ ಆದೇಶಿಸಲಾಗಿದೆ ಎಂದರು.ಕೋಟ್ ......ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಡುವೆಯು ರಾಜ್ಯ ಸರ್ಕಾರವು ನೆರೆಹಾವಳಿಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದು ಜಿಲ್ಲಾಧಿಕಾರಿಗಳ ವಿಪತ್ತು ನಿಧಿಗೆ ಸುಮಾರು ೭೦೦ ಕೋಟಿ ರೂಗಳನ್ನು ಕಾಯ್ದಿರಿಸಿದೆ. - ಡಾ. ಜಿ. ಪರಮೇಶ್ವರ್ ಗೃಹ ಸಚಿವ.