ಚಿಕ್ಕಮಗಳೂರುವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 34,198 ಮಂದಿಯನ್ನು ಕರಡು ಮತದಾರ ಪಟ್ಟಿನಿಂದ ಕೈಬಿಡಲಾಗಿದೆ. ಇದರೊಂದಿಗೆ 31,720 ಮಂದಿ ನೋಟಿಸ್‌ ಜಾರಿಗೊಳಿಸಿದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಿ ಅಧಿಕಾರಿ ಗೌರವ್‌ ಕುಮಾರ್ ಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 34,198 ಮಂದಿಯನ್ನು ಕರಡು ಮತದಾರ ಪಟ್ಟಿನಿಂದ ಕೈಬಿಡಲಾಗಿದೆ. ಇದರೊಂದಿಗೆ 31,720 ಮಂದಿ ನೋಟಿಸ್‌ ಜಾರಿಗೊಳಿಸಿದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಿ ಅಧಿಕಾರಿ ಗೌರವ್‌ ಕುಮಾರ್ ಶೆಟ್ಟಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಕ್ಷೇತ್ರದ 1,92,796 ಮತದಾರರ ಕರಡು ಪಟ್ಟಿ ಪ್ರಕಟಿಸ ಲಾಗಿದೆ. ಆಕ್ಷೇಪಣೆ ಸಲ್ಲಿಸಲು ಸೆ.23ರ ಅವಕಾಶ ವಿದೆ. ಜೂ.16ಕ್ಕೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 2,26,934 ಮತದಾರಿದ್ದರು. ಎಸ್‌ಐಆರ್‌ ಆರಂಭಿಸಿ ಎನುಮರೇಶನ್‌ ವಾಪಾಸ್‌ ಪಡೆವ ವೇಳೆ 1,92,736 ಮಂದಿ ಫಾರಂ ವಾಪಾಸ್‌ ನೀಡಿದ್ದಾರೆ. ಅವರನ್ನು ಒಳ ಗೊಂಡ ಕರಡು ಮತದಾರ ಪಟ್ಟಿ ಪ್ರಕಟಿಸಲಾಗಿದೆ. ಈ ಪೈಕಿ 94,724 ಪುರುಷರು, 98,001 ಮಹಿಳೆ, 11 ಇತರೆ ಮತದಾರರಿದ್ದಾರೆ ಎಂದು ತಿಳಿಸಿದರು.

ಎನುಮರೇಶನ್‌ ಫಾರಂ ನೀಡದ ಹಿನ್ನೆಲೆಯಲ್ಲಿ 34,198 ಮಂದಿ ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಪೈಕಿ 6,913 ಮಂದಿ ಮೃತಪಟ್ಟಿದ್ದಾರೆ. 4,789 ಮಂದಿ ಪತ್ತೆಯಾಗಿಲ್ಲ, 18,774 ಮಂದಿ ಶಾಶ್ವತವಾಗಿ ಬೇರೆ ಸ್ಥಳಕ್ಕೆ ತೆರಳಿದ್ದಾರೆ. 3375 ಮಂದಿ ಬೇರೆ ವಿಧಾನಸಭಾ ಕ್ಷೇತ್ರ ಮತದಾರ ಪಟ್ಟಿಯಲ್ಲಿ ಹೆಸರು 347 ಇತರೆ ಕಾರಣದಿಂದ ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ವೆಬ್‌ಸೈಟ್‌ ಮೊದಲಾದ ಕಡೆ ಕರಡು ಮತದಾರ ಪಟ್ಟಿ ಪ್ರಕಟಿಸಿದ್ದು ಪರಿಶೀಲಿಸಿ ಸೆ.23ರ ಒಳಗೆ ಆಕ್ಷೇಪಣೆ ಸಲ್ಲಿಸ ಬಹುದು. ಅ.27 ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

31,720 ಮಂದಿಗೆ ನೋಟಿಸ್‌:

ಮ್ಯಾಪಿಂಗ್‌ ಆಗದ 3990 ಮತದಾರರು, 27,730 ಮತದಾರರು ಮ್ಯಾಪಿಂಗ್‌ ಹೊಂದಾಣಿಕೆ ಆಗದಿರುವುದು ಸೇರಿದಂತೆ ಒಟ್ಟು 31,720 ಮಂದಿಗೆ ನೋಟಿಸ್‌ ನೀಡಲು ತೀರ್ಮಾನಿಸಲಾಗಿದೆ. ಬಿಎಲ್‌ಒಗಳು ಆಯಾ ಮತದಾರರಿಗೆ ನೋಟಿಸ್‌ ನೀಡಲಿದ್ದಾರೆ. ನೋಟಿಸ್‌ ಪಡೆದವರು ಆಯೋಗ ಸೂಚಿಸಿದ 12 ದಾಖಲೆಗಳ ಪೈಕಿ ಒಂದನ್ನು ಫಾರಂ 6, 7 ಹಾಗೂ 8ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ, ವಿಚಾರಣೆ ನಡೆಸಿ ತೀರ್ಮಾನಿಸಲಿದ್ದಾರೆ. ಆ ಪ್ರಕ್ರಿಯೆಗೆ ಅ. 22 ಕೊನೆ ದಿನ ಎಂದು ತಿಳಿಸಿದರು.

ಖುದ್ದು ಮತದಾರರು ದಾಖಲೆಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಿದರೆ, ವಿಚಾರಣೆ ನಡೆಸಲು ಅಧಿಕಾರಿಗಳನ್ನು ಚುನಾವಣಾ ಆಯೋಗ ನಿಯೋಜಿಸಿದೆ. ವಿಚಾರಣೆಗೆ 41 ಹೆಚ್ಚುವರಿ ಎಇಆರ್‌ಒನೇಮಕ ಮಾಡಿಕೊಳ್ಳಲಾಗುವುದು. ಗ್ರಾಪಂ. ನಗರ ಸಭೆ, ತಾಪಂ ಸೇರಿದಂತೆ ವಿವಿಧ ಕಡೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ಎಲ್ಲ ಎಇಆರ್‌ಒಗಳಿಗೆ ಮಂಗಳವಾರ ಇಡೀ ದಿನ ವಿಚಾರಣೆ ನಡೆಸುವ ಸಂಬಂಧ ತರಬೇತಿ ನೀಡಲಾಗುವುದು ಎಂದು ವಿವರಿಸಿದರು. ಇನ್ನೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 9 ಮತಗಟ್ಟೆ ಹೆಚ್ಚಳವಾಗಲಿದ್ದು, ಮತಗಟ್ಟೆ ಸಂಖ್ತೆ 261 ರಿಂದ 270ಕ್ಕೆ ಏರಿಕೆ ಆಗಲಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ತಹಶೀಲ್ದಾರ್‌ ರೇಷ್ಮಾ ಶೆಟ್ಟಿ ಇದ್ದರು.