ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಅ. 23 ರಂದು ಚುನಾವಣೆ ನಡೆಯಲಿದೆ. ಬಿಜೆಪಿಯ ಶಶಿಲ್‌ ನಮೋಶಿ, ಕಾಂಗ್ರಸ್‌ನ ಶರಣಪ್ಪ ಮಟ್ಟೂರ ಸೇರಿದಂತೆ ಚುನಾವಣಾ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಕಲಬುರಗಿ ವಿಭಾಗದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಬರಲಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಅ. 23 ರಂದು ಚುನಾವಣೆ ನಡೆಯಲಿದೆ. ಬಿಜೆಪಿಯ ಶಶಿಲ್‌ ನಮೋಶಿ, ಕಾಂಗ್ರಸ್‌ನ ಶರಣಪ್ಪ ಮಟ್ಟೂರ ಸೇರಿದಂತೆ ಚುನಾವಣಾ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಕಲಬುರಗಿ ವಿಭಾಗದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಬರಲಿವೆ.*144 ಮತಗಟ್ಟೆ ಸ್ಥಾಪನೆ: ಅ.23 ರಂದು ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಕಲಬುರಗಿ-40, ಬೀದರ-33, ರಾಯಚೂರು-16, ಬಳ್ಳಾರಿ-9, ಕೊಪ್ಪಳ-20, ಯಾದಗಿರಿ-8, ವಿಜಯನಗರ-18 ಮತಗಟ್ಟೆಗಳು ಸಹಿತ ಕ್ಷೇತ್ರದಾದ್ಯಂತ ಒಟ್ಟು 144 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಅ. 27ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಹಾಲ್‌ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.*ಡಿ.ಸಿ ಕಚೇರಿಯಿಂದಲೇ ಪರವಾನಗಿ: ಚುನಾವಣೆ ಸಂಬಂಧಪಟ್ಟಂತ ಎಲ್ಲ ಪರವಾನಗಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮುಖಾಂತರವೇ ನೀಡಲಾಗುತ್ತದೆ. ಕ್ಷೇತ್ರಕ್ಕೆ ಅನ್ವಯಿಸುವಂತೆ ಪ್ರಚಾರಕ್ಕೆ ಮಾತ್ರ ವಾಹನ ಪರವಾನಗಿಯನ್ನು ಚುನಾವಣಾಧಿಕಾರಿ ಕಾರ್ಯಾಲಯದಿಂದ ನೀಡಲಾಗುವುದು. ಅ. 23ರಂದು ನಡೆಯುವ ಮತದಾನ ಮತ್ತು ಅ, 27 ರಂದು ನಡೆಯುವ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇಲ್ಲ. ಹಾಗಂತ ಮತದಾರರಿಗೆ ಹಣದ ಆಮೀಷ ನೀಡುವಂತಿಲ್ಲ. ಆಯಾ ಜಿಲ್ಲೆಗಳಲ್ಲಿ ಎಂ.ಸಿ.ಸಿ ಕಟ್ಟುನಿಟ್ಟಾಗಿ ಪಾಲನೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ, ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ, ವಿಡಿಯೋ ಸರ್ವೇಲೆನ್ಸ್ ತಂಡ, ವಿಡಿಯೋ ವೀಕ್ಷಣೆ ತಂಡ, ಎಂ.ಸಿ.ಸಿ ತಂಡ, ಎಂ.ಸಿ.ಎಂ.ಸಿ ಸಮಿತಿ, ದೂರು ಮೇಲ್ವಿಚಾರಣಾ ತಂಡ, ಮಾಧ್ಯಮ ಮೇಲ್ವಿಚಾರಣೆ ತಂಡ ರಚಿಸಲಾಗಿದೆ ಎಂದು ಚುನಾವಣಾಧಿಕಾರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಮಾಹಿತಿ ನೀಡಿದರು.

ಈ ಚುನಾವಣೆಯಲ್ಲಿ ಮತದಾನವು ಮತಪತ್ರ ಮುಖಾಂತರ ಪ್ರಾಶಸ್ತ ಮತ ನೀಡಲು ಅವಕಾಶವಿದ್ದು, ನೋಟಾಗೆ ಅವಕಾಶ ಇಲ್ಲ. ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗೂ ಪ್ರಾಶಸ್ತ್ಯದ ರೂಪದಲ್ಲಿ ಮತದಾರ ಮತ ನೀಡಬಹುದು. ಮತಪತ್ರದಲ್ಲಿ ಆಯೋಗದಿಂದ ನೀಡಲಾಗಿರುವ ನೆರಳೆ ಬಣ್ಣದ ಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ ಮತ ಚಲಾಯಿಸಬೇಕು. ಬೇರೆ ಇತರೆ ಬಣ್ಣದ ಪೆನ್ನಿನಿಂದ ಮತ ಚಲಾಯಿಸಿದ್ದಲ್ಲಿ ಹಾಗೂ ಗುರುತುಗಳನ್ನೊಳಗೊಂಡ ಚಲಾಯಿಸಲಾದ ಮತಗಳು ಅಮಾನ್ಯಗೊಳ್ಳಲಿವೆ ಎಂದು ಚುನಾವಣಾಧಿಕಾರಿ ಜಹೀರಾ ನಸೀಮ್ ಸ್ಪಷ್ಟಪಡಿಸಿದರು.

ಕ್ಷೇತ್ರಾದ್ಯಂತ 34,784 ಮತದಾರರು, ಕಲಬುರಗಿಯಲ್ಲಿಯೆ ಹೆಚ್ಚು ಮತದಾರರು ಇದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದಾದ್ಯಂತ ಪುರುಷರು 20,040 ಹಾಗೂ ಮಹಿಳೆಯರು14,744 ಸೇರಿದಂತೆ ಒಟ್ಟು 34,784 ಮತದಾರರು ಮತ ಚಲಾವಣೆಗೆ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ.ಸಹಾಯವಾಣಿ ಸ್ಥಾಪನೆ: ಚುನಾವಣೆ ವಿಷಯದ ಕುರಿತು ಯಾವುದೇ ದೂರುಗಳನ್ನು ಸಾರ್ವಜನಿಕರು, ರಾಜಕೀಯ ಪಕ್ಷಗಳು ಸಲ್ಲಿಸಬಹುದಾಗಿದ್ದು, 24 ತಾಸೂ ಕಾರ್ಯನಿರ್ವಹಿಸುವ ಚುನಾವಣಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ 08472-200255ನ್ನು ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿ ಜಹೀರಾ ನಸೀಮ್ ತಿಳಿಸಿದರು. -

ವಿಭಾಗಪುರುಷಮಹಿಳೆಒಟ್ಟು ಮತದಾರ

ಕಲಬುರಗಿ5,6724,98010,652 ಬಳ್ಳಾರಿ1,8131,580 3,393

ವಿಜಯನಗರ2,1901,1363,326

ಬೀದರ್‌3,7943,2447,038 ಮತದಾರರು

ಯಾದಗಿರಿ1,5487112,259 ಮತದಾರರು

ಕೊಪ್ಪಳ1,8458692,714

ರಾಯಚೂರು3,1782,2245,402