ಸಾರಾಂಶ
-ಕುಡಿವ ನೀರಿನ ಘಟಕಕ್ಕೆ ಶಾಸಕ ಬಿಜಿ ಗೋವಿಂದಪ್ಪ ಭೂಮಿ ಪೂಜೆ
-----ಕನ್ನಡಪ್ರಭ ವಾರ್ತೆ ಹೊಸದುರ್ಗ
ಖನಿಜ ನಿಗಮದಿಂದ ಗಣಿಗಾರಿಕೆ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ತಲಾ 10 ಲಕ್ಷ ರು. ವೆಚ್ಚದಲ್ಲಿ ತಾಲೂಕಿನ 7 ಗ್ರಾಮಗಳಲ್ಲಿ 70 ಲಕ್ಷ ರು. ಅನುದಾನದಲ್ಲಿ ಕುಡಿವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಆಹಾರ ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ ತಿಳಿಸಿದರು.ಬಾಗೂರಿನಲ್ಲಿ ತಾಲೂಕು ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯಿಂದ ಕುಡಿವ ನೀರಿನ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬಾಗೂರು, ಕೋಡಿಹಳ್ಳಿ, ಹರೇನಹಳ್ಳಿ, ದೇವಪುರ, ಆಲದಹಳ್ಳಿ, ಅಕ್ಕಿತಿಮ್ಮಯನಹಟ್ಟಿ, ಹೆಚ್ ಎಸ್ ಪಾಳ್ಯ ಗ್ರಾಮಗಳಲ್ಲಿ ಕುಡಿವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದರು.ಗಣಿಬಾಧಿತ ಪ್ರದೇಶಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಕೆ.ಕೆ.ಪುರ ಆರೋಗ್ಯ ಕೇಂದ್ರದ ವಸತಿಗೃಹ ನಿರ್ಮಾಣಕ್ಕೆ 6.7 ಕೋಟಿ, ಕಿಟ್ಟದಾಳ್ ಗ್ರಾಮದ ಎರಡು ಉಪಕೇಂದ್ರ ನಿರ್ಮಾಣಕ್ಕೆ 2ಕೋಟಿ ಅನುದಾನ, ಕಿಟ್ಟದಾಳ್ ಗ್ರಾಮದ ಸಿಸಿ ರಸ್ತೆ ಸೋಲಾರ್ ದೀಪ ನಿರ್ಮಾಣ ಕಾಮಗಾರಿ 2.92 ಕೋಟಿ, ಕಿಟ್ಟದಾಳ್- ಕಾನುಭೇನಹಳ್ಳಿ ಗ್ರಾಮದ ಸಿಸಿ ರಸ್ತೆ 7.78 ಕೋಟಿ, ಕಂಚೀಪುರ ಸಿಸಿ ರಸ್ತೆ 3.12 ಕೋಟಿ, ಕಂಚೀಪುರ ದಿಂದ ಮೇಗಳಹಟ್ಟಿ ಮಾರ್ಗದ ಶ್ರೀರಾಂಪುರ ರಸ್ತೆ ನಿರ್ಮಾಣದ 8.21 ಕೋಟಿ, ನಾಗನಾಯ್ಕನಹಟ್ಟಿ ಗ್ರಾಮದ ಸಿಸಿ ರಸ್ತೆ 3.72 ಕೋಟಿ ಅನುದಾನ ಸೇರಿದಂತೆ 35.49 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ ನೀಲಕಂಠಪ್ಪ, ಸದಸ್ಯ ಬಸವರಾಜಪ್ಪ, ಕವಿತಾ, ಶಕುಂತಲ, ಭೈರಪ್ಪ, ವಿಜಯಕುಮಾರ, ಗುತ್ತಿಗೆದಾರ ರಮೇಶ್ ಮುಖಂಡರಾದ ಶಾಂತಮೂರ್ತಿ, ಮಾಜಿ ತಾ.ಪಂ ಸದಸ್ಯ ಮಲ್ಲಿಕಾರ್ಜುನ, ಎನ್.ಪ್ರಕಾಶ್, ಪರಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಲೋಹಿತ್, ವರಲಕ್ಷ್ಮಿ, ಬೆಸ್ಕಾಂ ಸಲಹಾ ಸಮಿತಿಯ ಮಂಜುನಾಥ್, ತಾಲೂಕು ಕುಡಿವ ನೀರು ಸರಬರಾಜು ಇಲಾಖೆಯ ಎಇಇ ಧನಂಜಯ, ಇಂಜಿನಿಯರ್ ಹನುಮಂತಪ್ಪ, ಪಿಡಿಒ ಕುಮಾರ್ ಇದ್ದರು.----
ಫೋಟೋ:18hsd2: ಹೊಸದುರ್ಗ ತಾಲೂಕು ಬಾಗೂರಿನಲ್ಲಿ ತಾಲೂಕು ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯಿಂದ ಕುಡಿವ ನೀರಿನ ಘಟಕಕ್ಕೆ ಶಾಸಕ ಬಿಜಿ ಗೋವಿಂದಪ್ಪ ಭೂಮಿ ಪೂಜೆ ನೆರವೇರಿಸಿದರು
;Resize=(128,128))
;Resize=(128,128))
;Resize=(128,128))
;Resize=(128,128))