ಸಾರಾಂಶ
- ಜಗಳೂರು ಆಸ್ಪತ್ರೆಯಲ್ಲಿ ಗೌರವ ಸ್ವೀಕರಿಸಿ ನಿವೃತ್ತ ನೇತ್ರಾಧಿಕಾರಿ ಕೆ.ಎಂ.ಪರಮೇಶ್ವರಪ್ಪ
- - - ಕನ್ನಡಪ್ರಭ ವಾರ್ತೆ ಜಗಳೂರುಮೂರು ದಶಕಗಳ ಕಾಲ ಜಗಳೂರಿನಲ್ಲಿಯೇ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ತೃಪ್ತಿ ನನಗಿದೆ ಎಂದು ನಿವೃತ್ತ ನೇತ್ರಾಧಿಕಾರಿ ಕೆ.ಎಂ.ಪರಮೇಶ್ವರಪ್ಪ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 1985 ರಲ್ಲಿ ನೇತ್ರ ವೈದ್ಯಾಧಿಕಾರಿಯಾಗಿ ನೇಮಕಗೊಂಡು ವೃತ್ತಿ ಜೀವನ ಆರಂಭಿಸಿದೆ. ಇಂದಿಗೆ 4 ದಶಕ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. 1990 ರಿಂದ 35 ವರ್ಷಗಳ ನಿರಂತರ ಸೇವೆ ಜಗಳೂರಿನಲ್ಲಿಯೇ ಸಲ್ಲಿಸಿದ ಸಂತೃಪ್ತಿ ನನಗಿದೆ. ವೃತ್ತಿ ಜೀವನಕ್ಕೆ ಸಹಕರಿಸಿದ ಸಾರ್ವಜನಿಕರು, ಪತ್ನಿ, ಕುಟುಂಬದ ಸದಸ್ಯರಿಗೆ ಚಿರಋಣಿಯಾಗಿರುವೆ ಎಂದರು.ತಾಲೂಕಿನ ಅಸಂಖ್ಯಾತ ದೃಷ್ಠಿದೋಷವುಳ್ಳ ವ್ಯಕ್ತಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಅಂಧತ್ವ ನಿವಾರಣಾ ತಪಾಸಣೆ ಶಿಬಿರಗಳಲ್ಲಿ ಮುಂಚೂಣಿಯಲ್ಲಿದ್ದು ಜೊತೆಯಲ್ಲಿ ಸರ್ಕಾರಿ ನೌಕರರ, ಸಹಕಾರ ಸಂಘಸಂಸ್ಥೆಗಳಲ್ಲಿ ಅಧ್ಯಕ್ಷ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. 2012ರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದ್ದು ಹೆಮ್ಮೆ ತಂದಿದೆ ಎಂದರು.
ಇಂದು ಜಗಳೂರು ಸರ್ಕಾರಿ ಆಸ್ಪತ್ರೆಗೂ, ನನಗೂ ಅಧಿಕೃತ ವೃತ್ತಿಜೀವನದ ನಂಟು ಮುಗಿದಿದೆ. ಆಸ್ಪತ್ರೆ ಸಿಬ್ಬಂದಿಯ ವೃತ್ತಿ ಬಾಂಧವ್ಯ ಮುಂದುವರಿಯಲಿ. ವೈದ್ಯವೃತ್ತಿ ಪವಿತ್ರವಾದುದು. ಈ ವೃತ್ತಿಯ ಗೌರವ ಕಾಪಾಡಿಕೊಳ್ಳಬೇಕು ಎಂದು ಭಾವುಕರಾದರು.ಕಾರ್ಯಕ್ರಮದಲ್ಲಿ ಪತ್ನಿ ಪುಷ್ಪಾ ಪರಮೇಶ್ವರಪ್ಪ, ಪುತ್ರ ಡಾ.ನಿತಿನ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ, ಡಾ.ಕಲ್ಪನಾ, ಸಿಬ್ಬಂದಿ ಸುರೇಶ್ ಬಾಬು, ಏಕಾಂತಮ್ಮ, ಮೀನಾಕ್ಷಮ್ಮ, ರೂಪ, ಮಂಜಮ್ಮ, ಮಲ್ಲಮ್ಮ, ಶುಶ್ರೂಷಕಿಯರು ಪಾಲ್ಗೊಂಡಿದ್ದರು.
- - - -05ಜೆ.ಜಿ.ಎಲ್.1.ಜೆಪಿಜಿ:ನೇತ್ರಾಧಿಕಾರಿ ಕೆ.ಎಂ. ಪರಮೇಶ್ವರಪ್ಪ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಅವರನ್ನು ಸನ್ಮಾನಿಸಲಾಯಿತು.