ಹೊಸಪೇಟೆ ತಾಲೂಕಿನ ವಿವಿಧ ಶ್ರೀರಾಯರ ಮಠಗಳಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಮಧ್ಯಾರಾಧನೆ ಅಂಗವಾಗಿ ಕ್ಷೀರಾಭಿಷೇಕ ಸೇರಿದಂತೆ ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜೆಗಳು ಮತ್ತು ವಿಶೇಷ ಅಲಂಕಾರ ನಡೆಯಿತು.

ಹೊಸಪೇಟೆ: ನಗರ ಸೇರಿದಂತೆ ತಾಲೂಕಿನ ವಿವಿಧ ಶ್ರೀರಾಯರ ಮಠಗಳಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಮಧ್ಯಾರಾಧನೆ ಅಂಗವಾಗಿ ಕ್ಷೀರಾಭಿಷೇಕ ಸೇರಿದಂತೆ ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜೆಗಳು ಮತ್ತು ವಿಶೇಷ ಅಲಂಕಾರ ನಡೆಯಿತು.

ಹೊಸಪೇಟೆ ನಗರದ ರಾಣಿಪೇಟೆ ರಾಯರ ಮಠದಲ್ಲಿ ಭಾನುವಾರ ಮಧ್ಯಾರಾಧನೆ ಪ್ರಯುಕ್ತ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ನಡೆಯಿತು. ಅಲಂಕಾರ ಪಂಕ್ತಿ, ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು.

ಭಜನೆ, ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ ಮಠದಲ್ಲಿ ನೆರವೇರಿಸಲಾಯಿತು. ಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಾರುತಿ ಆಚಾರ್ಯ, ವಿಜಯಕುಮಾರ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.

ಸ್ಥಳೀಯ ವಿಜಯ ಚಿತ್ರಮಂದಿರ ಸಮೀಪದ ರಾಯರ ಮಠದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷವಾಗಿ ಅಷ್ಟೋತ್ತರ ಸಹಿತ ಕ್ಷೀರಾಭಿಷೃಕ ನೆರವೇರಿಸಲಾಯಿತು. ನಂತರ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ನಡೆಸಲಾಯಿತು. ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿವರಣೆ ಮಾಡಲಾಯಿತು. ಆರಾಧನೆ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷವಾಗಿ ರಜತ, ರೇಷ್ಮೆ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು.

ಮಠಾಧಿಕಾರಿ ಭೀಮಸೇನಾಚಾರ್ಯ, ಪವನಾಚಾರ್ಯ, ಅನಿಲಾಚಾರ್ಯ, ವಿಜಿಯೀಂದ್ರ ದೇಸಾಯಿ, ಪವನ್ ಕುಮಾರ್ ಇತರರಿದ್ದರು. ಗಾಂಧಿ ಕಾಲೋನಿ ರಾಯರ ಮಠದಲ್ಲಿ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ ನಡೆಸಲಾಯಿತು. ವ್ಯವಸ್ಥಾಪಕ ತಿರುಮಲೇಶ್ ಇತರರಿದ್ದರು.

ಸ್ಥಳೀಯ ಕಾಶಿ ಆಂಜಿನೇಯ ದೇವಸ್ಥಾನದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಮಧ್ಯಾರಾಧನೆ ನಡೆಯಿತು. ಪಂಚಾಮೃತಾಭಿಷೇಕ, ಅರ್ಚನೆ, ಹಸ್ತೋದಕ, ಮಹಾನೇವೈದ್ಯ, ಉಪನ್ಯಾಸ ನಡೆಯಿತು. ವಿಚಾರಣಕರ್ತ ನರಸಿಂಹ ಮೂರ್ತಿ, ಪ್ರಮುಖರಾದ ಗೋಪಾಲಕೃಷ್ಣ ಗೌಡ, ರಾಘವೇಂದ್ರ ಆಚಾರ್ಯ, ಶ್ರೀನಿವಾಸಾಚಾರ್ಯ ಇತರರಿದ್ದರು.

ತಾಲೂಕಿನ ಕಮಲಾಪುರ ಪಟ್ಟಣದ ಶ್ರೀರಾಯರ ಮಠದಲ್ಲಿ ವಿಶೇಷವಾಗಿ ಮಧ್ಯಾರಾಧನೆ ನಡೆಯಿತು. ಕನಕಾಭಿಷೇಕ, ರಾಯರ ಪಾದುಕ ಪೂಜೆ, ನೈವೇದ್ಯ ಮಹಾಮಂಗಳಾರತಿ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ​ಆರ್ಡಿನೇಟರ್ ಅನಂತ ಪದ್ಮನಾಭ, ವಿಚಾರಣಕರ್ತ ನಾಗರಾಜ್ ರಾವ್ ಕರಣಂ, ಶಿರೆಕೊಳ್ಳ ಗುರುರಾಜ್ ಆಚಾರ್ಯ, ಹರಿಗೌಡ, ರಘು, ಗೋಪಾಲ್, ಮುರಳಿ, ಪಾಂಡುರಂಗ, ವಾದಿರಾಜ, ಸುತರಾಜ್, ಶ್ರೀನಿಧಿ, ನರಹರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು..