ಕನ್ನಡಪ್ರಭ ವಾರ್ತೆ ಸಿಂದಗಿ ವಿಜಯಪುರ ಜಿಲ್ಲೆಯನ್ನು 371ಜೆ ಅಡಿ ಸೇರ್ಪಡೆ ಮಾಡುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ 12 ದಿನ ಮುಂದುವರೆದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ತಾಲೂಕು ವಕೀಲರ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಜಯಪುರ ಜಿಲ್ಲೆಯನ್ನು 371ಜೆ ಅಡಿ ಸೇರ್ಪಡೆ ಮಾಡುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ 12 ದಿನ ಮುಂದುವರೆದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ತಾಲೂಕು ವಕೀಲರ ಭೇಟಿ ನೀಡಿ ಬೆಂಬಲ ಸೂಚಿಸಿದರು.

ವಕೀಲ ದಾನಪ್ಪಗೌಡ ಚನಗೊಂಡ ಮಾತನಾಡಿ, ಈ ಹೋರಾಟ ಹೋಬಳಿ ಮಟ್ಟದ ಜನಾಂದೋಲನವಾಗಬೇಕು. ವಿಜಯಪುರ ಜಿಲ್ಲೆಯನ್ನು 371ಜೆ ಅಡಿ ಸೇರ್ಪಡೆ ಮಾಡುವುದರಿಂದ ಶೈಕ್ಷಣಿಕ, ಉದ್ಯೋಗ ಕ್ಷೇತ್ರದ ಅವಕಾಶಗಳು ದೊರಕುತ್ತವೆ. ಈ ಹೋರಾಟದ ನಿರಂತರವಾಗಿರಬೇಕು. ಅದಕ್ಕೆ ವಕೀಲರು ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

371ಜೆ ಹೋರಾಟದ ರೂವಾರಿ ರಂಗನಾಥ ಘೋರ್ಫೆ, ಸಂಗಣ್ಣ ಬ್ಯಾಕೋಡ, ಎಂ.ಎಂ.ಹಂಗರಗಿ, ಗುರುರಾಜ ಪಡಶೆಟ್ಟಿ ಮಾತನಾಡಿದರು. 371ಜೆ ಹೋರಾಟದಲ್ಲಿ ಸಂಪೂರ್ಣ ಬೆಂಬಲ ನೀಡಿರುವ ವಕೀಲರಾದ ಎಸ್.ಬಿ.ಪಾಟೀಲ, ಬಿ.ಸಿ.ಪಾಟೀಲ, ಜಿ.ಎಸ್.ಮನ್ನಾಪೂರ, ಆರ್.ಎಂ.ಚೌರ, ಎಸ್.ಬಿ.ದೊಡಮನಿ, ಎಂ.ಸಿ.ಯಾತನೂರ, ಎಸ್.ಎಂ.ಪಾಟೀಲ, ಶಶಿ ಗಾಯಕವಾಡ, ಸಿ.ಎಂ.ಸೂರ್ಯವಂಶಿ, ಬಿ.ಜಿ.ಮಾನ್ವಿ, ಗೀತಾ ಪಾಟೀಲ, ಪಿ.ಎಂ.ಬಡಿಗೇರ, ಎಸ್.ಬಿ.ಖಾನಾಪೂರ, ಬಿ.ಎಸ್.ಮಠ, ಜಿ.ಜಿ.ಮಾರ್ಸನಳ್ಳಿ, ಎಸ್.ಎಸ್.ಬಿರಾದಾರ, ಅಸ್ಲಾಂ ಬಂಕಲಗಿ, ಅಸ್ಲಂ ಪಟೇಲ ಬಿರಾದಾರ, ಅಕ್ಷಯ ದಂಗಪೂರ, ಪಿ.ಎಂ.ಕಂಬಾರ, ಜಿ.ಸಿ.ಬಾವಿಕಟ್ಟಿ, ಬಿ.ಎ.ಬಮ್ಮನಳ್ಳಿ, ವಿ.ಎಂ.ಹುಲಿಕೇರಿ, ರಾಜು ಪಾಟೀಲ, ಬಿ.ಎಂ.ಹೊಸಮನಿ, ಬಿ.ಎಸ್.ಪಾಟೀಲ, ಎಂ.ಎನ್.ನಾಯ್ಕೋಡಿ, ಡಿ.ಎಸ್.ಉದಕರ್, ಪ್ರದೀಪ ದೇಶಪಾಂಡೆ, ರೈತ ಹೋರಟಗಾರ ಗುರುರಾಜ ಪಡಶೆಟ್ಟಿ, ಹೋರಾಟ ರೂವಾರಿ ರಂಗನಾಥ ತೋರ್ಥೆ, ಗೊಲ್ಲಾಳಪ್ಪಗೌಡ ಪಾಟೀಲ, ಗೋಲಗೇರಿ ಸಂಗಣ್ಣ ಬ್ಯಾಕೋಡ, ಸಮೀರ್‌ ಬೈರೋಡಗಿ, ಅಲ್ಲಂ ಖಾನ್ ಬಿರಾದಾರ, ಪಿ.ಎಂ.ಹೊಸಮನಿ, ರಮೇಶ ಐಹೊಳೆ, ಮಾಳಿಂಗರಾಯ ಹತ್ತಿ, ಮಲ್ಲು ಮೋರಟಗಿ, ಶ್ರೀಶೈಲ ಬಿರಾದಾರ, ಬಾಬು ವಾಲಿಕಾರ ಇದ್ದರು.