ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು25.10.2024 ರಿಂದ 27.10.2024ರ ವರೆಗೆ ಮೂರು ದಿನಗಳ ಕಾಲ " ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು ಕಲೆಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ 45, 46, 47 ನೇ ಅಂತರ ರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ ಮತ್ತು ನಾಲ್ಕನೇ ಅಂತಾರಾಷ್ಟ್ರೀಯ ಕಲೆಮನೆ ಭಾರತನಾಟ್ಯ ಸ್ಪರ್ಧೆ, ಸಾಧಕರಿಗೆ ವಾರ್ಷಿಕ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸುಮಾರು 250 ಕ್ಕೂ ಹೆಚ್ಚು ಕಲಾವಿದರು ರಾಷ್ಟ್ರದ ಹಲವಾರು ರಾಜ್ಯಗಳಿಂದ ಆಗಮಿಸಿ ನೃತ್ಯ ಪ್ರದರ್ಶಿಸಿದರು.ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ 37 ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಂಶಿ ಪ್ರಸನ್ನ ಕುಮಾರ್, ಮಾರುತಿ ಬಡಿಗೇರ್, ಎಂ.ಆರ್, ಆನಂದ ರಾಜ್ ಅರಸ್, ಡಾ. ಪದ್ಮಶ್ರೀ, ಕೆ.ಎಸ್. ಶೈಲಾ, ಎಸ್.ಎಂ. ಶರತ್ ಅವರಿಗೆ ವಾರ್ಷಿಕ ಕಲೆಮನೆ ಕಲಾಶ್ರೀ ಪ್ರಶಸ್ತಿಯನ್ನು ವಿದ್ವಾನ್ ವಿ ನಂಜುಂಡಸ್ವಾಮಿ ಇವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ನಂತರ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳಿಂದ ಎರಡು ಗಂಟೆ 30 ನಿಮಿಷಗಳ ಕಾಲ ನೃತ್ಯದ ಪ್ರಾತ್ಯಕ್ಷಿಕೆ ಮತ್ತು ವೈವಿಧ್ಯಮಯವಾದ ನೃತ್ಯ ಕಾರ್ಯಕ್ರಮವನ್ನು ಡಾ. ಕೆ. ಕುಮಾರ್ ಅವರ ಮಾರ್ಗದರ್ಶನದಲ್ಲಿ ಅತ್ಯಂತ ಸುಂದರವಾಗಿ ಮೂಡಿ ಬಂದಿತು.46ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವದಲ್ಲಿ ಹಿರಿಯ ನೃತ್ಯ ಗುರು ಸೂರ್ಯನಾರಾಯಣ ಮೂರ್ತಿ, ಡಿ.ಮಂಜುಳಾ, ಕಲಾಮಂಡಲಮ್ ಶ್ರೀಜಾ ಆರ್ ಕೃಷ್ಣನ್, ಸಲೋನಿ ಜಗದೀಶ್, ಎಂ ಗೋಪಾಲ್ ಅವರಿಗೆ ವಾರ್ಷಿಕ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳಿಂದ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಿದ ಗುರುಗಳ ತಂಡದಿಂದ ಅಭೂತಪೂರ್ವ ನೃತ್ಯ ಕಾರ್ಯಕ್ರಮಗಳು ಜರುಗಿದವು.ನಾಲ್ಕನೇ ಅಂತರರಾಷ್ಟ್ರೀಯ ಕಲೆಮನೆ ಭರತನಾಟ್ಯ ನೃತ್ಯ ಸ್ಪರ್ಧೆಯು ಬೆಳಿಗ್ಗೆ 9 ರಿಂದ ದ ಪ್ರಾರಂಭವಾಗಿ ದೇಶದ ಹಲವಾರು ರಾಜ್ಯಗಳಿಂದ ಆಗಮಿಸಿದ 36 ಸ್ಪರ್ದಾಳುಗಳಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಈ ಸ್ಪರ್ಧೆಯನ್ನು ಕೆ. ಗುರುಪ್ರಸಾದ್ ಉದ್ಘಾಟಿಸಿದರು, ತುಮಕೂರು ಪುತ್ತೂರು ಮತ್ತು ತಮಿಳುನಾಡಿನ ಚಿದಂಬರದಿಂದ ಆಗಮಿಸಿದ್ದ ವಿಕಾಸ್, ಗಿರೀಶ್, ಹಾಗೂ ಚಂದ್ರಕುಮಾರ್ ತೀರ್ಪುಗಾರರಾಗಿದ್ದರು.47 ನೇ ಅಂತರರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವದಲ್ಲಿ ಶಮಲ್ ಪವಾರ್, ಡಾ. ರೋನಿಕ ಜೆ ಕ್ರಿಷ್ಟಿ, ಕೆ. ಗುರುಪ್ರಸಾದ್, ಶುಭಾ ಧನಂಜಯ್ ಅವರಿಗೆ ವಾರ್ಷಿಕ ಕಲೆಮನೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಂತರ ಪ್ರಶಸ್ತಿ ಸ್ವೀಕರಿಸಿದ ಗುರುಗಳ ತಂಡದಿಂದ, ಅರ್ಚನಾ, ಅರ್ಚನಾ ಚೇತನಾ, ಜೆ.ಕೆ. ರಾನಿಕ ಅವರಿಂದ ಮನಮೋಹಕ ಭರತನಾಟ್ಯ ನೃತ್ಯ ಕಾರ್ಯಕ್ರಮವು ಪ್ರದರ್ಶಿಸಲ್ಪಟ್ಟಿತು. ಮೂರು ದಿನಗಳು ಕೂಡ ಸಭಾಂಗಣದಲ್ಲಿ ನೃತ್ಯಪ್ರಿಯರು ಕಿಕ್ಕಿರಿದು ಸೇರಿ, ಆನಂದಿಸಿದರು.ಮೂರು ದಿನಗಳು ಇಂತಹ ಅದ್ಭುತ ಅಪೂರ್ವ ನೃತ್ಯ ಕಾರ್ಯಕ್ರಮಗಳನ್ನು, ಮತ್ತು ಭರತನಾಟ್ಯ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಿ ದೇಶದ ಮೂಲ ಮೂಲೆಯಿಂದ ಹಲವಾರು ಹಿರಿಯ ಮತ್ತು ಕಿರಿ ನೃತ್ಯ ಕಲಾವಿದರನ್ನು ಕರೆಸಿ ವೇದಿಕೆ ಕಲ್ಪಿಸಿ ಕೊಟ್ಟು ಪ್ರಶಸ್ತಿಯನ್ನು ಇತ್ತು ಗೌರವಿಸಿದ ಡಾ ಕೆ ಕುಮಾರ್, ಡಾ ಜಿ ಮಾಲತಿ, ಮತ್ತು ಅವರ ಪುತ್ರಿಯರಾದ ಕೆ.ಎಂ. ಲೇಖ, ಕೆ.ಎಂ. ನಿಧಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.