29ರಂದು ಮೂಡುಬಿದಿರೆ ಯುವವಾಹಿನಿ 37ನೇ ಸಮಾವೇಶ

| Published : Dec 27 2024, 12:50 AM IST

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ 37ನೇ ವಾರ್ಷಿಕ ಸಮಾವೇಶ ಮೂಡುಬಿದಿರೆ ಸ್ಕೌಟ್ ಗೈಟ್ಸ್ ಕನ್ನಡ ಭವನದಲ್ಲಿ ಡಿ.29ರಂದು ಬೆಳಗ್ಗೆ 9.30ರಿಂದ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ 37ನೇ ವಾರ್ಷಿಕ ಸಮಾವೇಶ ಮೂಡುಬಿದಿರೆ ಸ್ಕೌಟ್ ಗೈಟ್ಸ್ ಕನ್ನಡ ಭವನದಲ್ಲಿ ಡಿ.29ರಂದು ಬೆಳಗ್ಗೆ 9.30ರಿಂದ ನಡೆಯಲಿದೆ.ಸಮಾವೇಶವನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ವಹಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಸಸ್ತಿ ಪ್ರದಾನ ಮಾಡುವರು. ‘ಯುವಸಿಂಚನ’ ವಾರ್ಷಿಕ ವಿಶೇಷಾಂಕವನ್ನು ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಬಿಡುಗಡೆಗೊಳಿಸುವರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಹೈಕೋರ್ಟ್‌ನ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲ್ ತಾರಾನಾಥ ಪೂಜಾರಿ, ಮಂಗಳೂರು ವಿಕಾಸ ಕಾಲೇಜ್‌ ಟ್ರಸ್ಟಿ ಸೂರಜ್ ಕುಮಾರ್ ಕಲ್ಯಾ, ಮೂಡುಬಿದಿರೆ ರತ್ನ ವುಮೆನ್ಸ್ ಕ್ಲಿನಿಕ್‌ನ ಡಾ. ರಮೇಶ್, ಉದ್ಯಮಿ ದಿನೇಶ್ ಅಮೀನ್ ಕುಂದಾಪುರ, ಮೂಡುಬಿದ್ರಿ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಉಡುಪಿ ಕೋಟ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕರಾದ ಡಾ.ಸುನಿತಾ ವಿ. ಮೊದಲಾದವರು ಭಾಗವಹಿಸಲಿದ್ದಾರೆ.ಹಿರಿಯ ಸಹಕಾರಿ, ಕೃಷಿಕ ಹಾಗೂ ಉದ್ಯಮಿ ಭಾಸ್ಕರ್ ಎಸ್. ಕೋಟ್ಯಾನ್ ಕೊಳಕೆ ಇರ್ವತ್ತೂರು ಇವರಿಗೆ ಯುವವಾಹಿನಿಯ ಪ್ರತಿಷ್ಠಿತ ‘ಸಾಧನ ಶ್ರೀ’ ಪ್ರಶಸ್ತಿ ನೀಡಲಾಗುವುದು. ಬಿಲ್ಲವ ಸಮಾಜ ಸೇವಾ ಸಂಘ ರಿ. ಮೂಲ್ಕಿ ಇವರಿಗೆ ‘ಸಾಧನಾ ಶ್ರೇಷ್ಠ’ ಪ್ರಶಸ್ತಿ ಪುರಸ್ಕಾರ ನೀಡಲಾಗುವುದು. ಸಂಗೀತ ಕ್ಷೇತ್ರದ ಸಾಧಕರಾದ ಸಚಿತ್ ಪೂಜಾರಿ ನಂದಳಿಕೆ, ಸಾಂಸ್ಕೃತಿಕ ಜಾನಪದ ಸಂಶೋಧನೆ ಸಂಘಟನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿನೇಶ್ ಸುವರ್ಣ ರಾಯಿ, ಕ್ರೀಡಾ ಕ್ಷೇತ್ರದ ಸಾಧಕರಾದ ರಕ್ಷಾ ರೆಂಜಾಳ, ಸಾಮಾಜಿಕ ಕ್ಷೇತ್ರದ ಸಾಧನೆಗೆ ಕುಮಾರ್ ಪೂಜಾರಿ ಇರುವೈಲ್, ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ. ಆನಂದ ಬಂಗೇರ ಅವರಿಗೆ ‘ಯುವವಾಹಿನಿ ಗೌರವ ಅಭಿನಂದನೆ’, ಡಾ.ಶಿಲ್ಪಾ ದಿನೇಶ್, ಡಾ.ಉಷಾ ಇವರಿಗೆ ‘ಯುವವಾಹಿನಿ ಅಭಿನಂದನೆ’, ಪ್ರಕೃತಿ ಮಾರುರು ಅವರಿಗೆ ‘ಯುವವಾಹಿನಿ ಸಾಧಕ’ ಪುರಸ್ಕಾರ ನೀಡಿ ಗೌರವಿಸಲಾಗುವುದು.ಈ ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ 35 ಘಟಕಗಳ ಸದಸ್ಯರು ಪ್ರತಿನಿಧಿಗಳಾಗಿ ಮತ್ತು ಇತರ ಬಂಧುಗಳು ಭಾಗವಹಿಸಲಿದ್ದಾರೆ.‘ವಿದ್ಯೆ-ಉದ್ಯೋಗ-ಸಂಪರ್ಕ’ ಎಂಬ ಧ್ಯೇಯದೊಂದಿಗೆ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಅಲ್ಲದೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಒಟ್ಟು 35 ಘಟಕಗಳನ್ನು, 4072 ಸಕ್ರಿಯ ಸದಸ್ಯರನ್ನು ಹೊಂದಿದೆ.ಸುದ್ದಿಗೋಷ್ಠಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ.. ಮೂಡುಬಿದಿರೆ ಘಟಕದ ಅಧ್ಯಕ್ಷರು, ಸಮಾವೇಶದ ಸಂಚಾಲಕರಾದ ಶಂಕರ್ ಎ. ಕೋಟ್ಯಾನ್, ಸಮಾವೇಶ ನಿರ್ದೆಶಕರಾದ ಗಣೇಶ್ ವಿ. ಕೋಡಿಕಲ್, ಮೂಡುಬಿದಿರೆ ಘಟಕದ ಕೋಶಾಧಿಕಾರಿ ಪ್ರತಿಭಾ ಸುರೇಶ್, ನೂತನ ಅಧ್ಯಕ್ಷ ಮುರಳೀಧರ್ ಕೋಟ್ಯಾನ್ ಉಪಸ್ಥಿತರಿದ್ದರು.