3843 ಫ್ಲೆಕ್ಸ್‌ ತೆರವು, 48 ಕೇಸ್‌, ₹75 ಸಾವಿರ ದಂಡ: ಬಿಬಿಎಂಪಿ

| Published : Jun 16 2024, 01:47 AM IST

ಸಾರಾಂಶ

ನಗರದಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವು ಮಾಡುತ್ತಿರುವ ಬಿಬಿಎಂಪಿ, ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ತೆರವು ಕಾರ್ಯ ಆರಂಭಿಸಿರುವ ಬಿಬಿಎಂಪಿ, ಜೂನ್‌ 1ರಿಂದ ಈವರೆಗೆ 3,843 ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿದೆ. ಅವುಗಳನ್ನು ಅಳವಡಿಸಿದವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 48 ಎಫ್‌ಐಆರ್‌ ದಾಖಲಿಸಿದೆ.

ಜೂ.1ರಿಂದ 14ರವರೆಗೆ 3,843 ಫ್ಲೆಕ್ಸ್‌, ಬ್ಯಾನರ್‌, ಎಲ್‌ಇಡಿ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಿ, ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 76 ದೂರುಗಳನ್ನು ದಾಖಲಿಸಲಾಗಿದೆ. ದೂರು ಆಧರಿಸಿ ಪೊಲೀಸರು 48 ಎಫ್‌ಐಆರ್‌ ದಾಖಲಿಸಲಾಗಿದೆ. ಜತೆಗೆ, ₹75 ಸಾವಿರ ದಂಡ ವಸೂಲಿ ಮಾಡಲಾಗಿದೆ.

ಬಿಬಿಎಂಪಿಗೆ ದೂರು ನೀಡಿ:

ಸಾರ್ವಜನಿಕರು ಫ್ಲೆಕ್ಸ್‌, ಬ್ಯಾನರ್‌ಗಳ ವಿರುದ್ಧ ಬಿಬಿಎಂಪಿಗೆ ದೂರು ದಾಖಲಿಸಬಹುದು. ಜನರು ತಮಗೆ ಫ್ಲೆಕ್ಸ್‌, ಬ್ಯಾನರ್‌ ಕುರಿತಂತೆ 1533ಗೆ ಕರೆ ಮಾಡಿ ಅಥವಾ ಬಿಬಿಎಂಪಿ ಜಾಹೀರಾತು ವಿಭಾಗದ ವಾಟ್ಸ್‌ಆ್ಯಪ್‌ ಸಂಖ್ಯೆ 94806 83939ಗೆ ಛಾಯಾಚಿತ್ರ ಅಥವಾ ವಿಡಿಯೋವನ್ನು ವಿಳಾಸ ಸಹಿತ ಕಳುಹಿಸಿ ದೂರು ನೀಡಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಫ್ಲೆಕ್ಸ್‌, ಬ್ಯಾನರ್‌ ತೆರವಿನ ವಿವರ (ಜೂ. 1ರಿಂದ14ರವರೆಗೆ)

ವಲಯತೆರವುದೂರುಎಫ್‌ಐಆರ್‌ ದಾಖಲುದಂಡಪೂರ್ವ29001ಪಶ್ಚಿಮ3823125,000

ದಕ್ಷಿಣ112220

ರಾ.ರಾ.ನಗರ4775550,000ದಾಸರಹಳ್ಳಿ186020ಮಹದೇವಪುರ2,3991050ಯಲಹಂಕ26417130ಬೊಮ್ಮನಹಳ್ಳಿ7719190ಒಟ್ಟು3843764875,000