ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 39ನೇ ಪುಣ್ಯಸ್ಮರಣೆ ನಡೆಯಿತು.ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.
ದೇಶದ ಪ್ರಗತಿಗೆ ಬಾಬು ಜಗಜೀವನರಾಂ ಅವರ ಸೇವೆಗಳನ್ನು ಸ್ಮರಿಸಿದ ತಹಸೀಲ್ದಾರ್ ಡಾ.ಅಶೋಕ್, ಬಿಹಾರ ರಾಜ್ಯದ ಕುಗ್ರಾಮದಲ್ಲಿ ಜನಿಸಿದ ಬಾಬು ಜಗಜೀವನರಾಂ ಸ್ವಾತ್ಯಂತ್ರ ಹೋರಾಟಗಾರರಾಗಿ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿ ಜೈಲುವಾಸ ಅನುಭವಿಸಿದ್ದರು ಎಂದರು.ಸ್ವಾತಂತ್ರ್ಯ ನಂತರದ ಭಾರತ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ, ಕೃಷಿ ಸಚಿವರಾಗಿ, ರಕ್ಷಣಾ ಸಚಿವರಾಗಿ, ದೇಶದ ಉಪ ಪ್ರಧಾನಿ ಮಂತ್ರಿಯಾಗಿ ಕಾರ್ಮಿಕರು ಮತ್ತು ರೈತರ ಹಿತಕ್ಕಾಗಿ ಶ್ರಮಿಸಿದರು. ಬಾಬು ಜಗಜೀವನರಾಂ ಅವರ ಬದುಕಿನ ನಡೆ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ. ಅವರ ದಾರಿಯಲ್ಲಿ ನಾವೆಲ್ಲರೂ ಸಾಗಿ ಬಹುಜನ ಹಿತದ ನವ ಸಮಾಜ ನಿರ್ಮಾಣದತ್ತ ಸಾಗೋಣ ಎಂದು ಹೇಳಿರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ತಾಲೂಕು ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಹೊಸಹೊಳಲು ಪುಟ್ಟರಾಜು, ನಿವೃತ್ತ ಶಿಕ್ಷಕ ಶಿವಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ್ ಮಾತನಾಡಿದರು.ತಾಲೂಕು ಭೂಮಾಪನ ಇಲಾಖೆ ಸಹಾಯಕ ನಿದೇರ್ಶಕ ಸಿದ್ದಯ್ಯ, ಆರೋಗ್ಯ ಇಲಾಖೆ ಶೀಳನೆರೆ ಸತೀಶ್, ಶಿಕ್ಷಣ ಇಲಾಖೆ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕರ್ನಾಟಕ ಮಾತಂಗಿ ಮಾದಿಗ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಹೊಳಲು ಕುಮಾರ್, ಉಪಾಧ್ಯಕ್ಷ ವಿಷ್ಣು, ತಾಲೂಕು ಘಟಕದ ಅಧ್ಯಕ್ಷ ಆಲೇನಹಳ್ಳಿ ರಾಜು, ವೆಂಕಟೇಶ್, ಕಾಂತರಾಜು, ನಾರ್ಗೋನಹಳ್ಳಿ ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.