ನಿರ್ಮಲ ತುಂಗಭದ್ರಾಕ್ಕಾಗಿ ನವೆಂಬರ್‌ನಲ್ಲಿ 3ನೇ ಅಭಿಯಾನ

| Published : Jul 23 2025, 02:59 AM IST

ನಿರ್ಮಲ ತುಂಗಭದ್ರಾಕ್ಕಾಗಿ ನವೆಂಬರ್‌ನಲ್ಲಿ 3ನೇ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಾ ಹಾಗೂ ಭದ್ರಾ ಎರಡು ನದಿಗಳು ಸೇರಿಕೊಂಡು ತುಂಗಭದ್ರಾ ನದಿಯಾಗಿ ಹರಿಯುತ್ತದೆ. ದಕ್ಷಿಣ ಭಾರತದಲ್ಲಿ ಅತಿ ಉದ್ಧವಾಗಿರುವ ನದಿ ಇದಾಗಿದ್ದು, ಇದರ ಪರಿಸ್ಥಿತಿ ಕೇವಲ ಕುಡಿಯುವ ನೀರಿಗೆ ಮಾತ್ರ ಉಪಯೋಗ ಮಾಡುವಂತೆ ಆಗಿದೆ. ಕಾರ್ಖಾನೆಗಳ ತ್ಯಾಜ್ಯ, ಕಲುಷಿತ ನೀರು ನದಿ ಸೇರುವ ಮೂಲಕ ನದಿಯು ಸಾಕಷ್ಟು ಕಲುಷಿತಗೊಂಡಿದೆ.

ಗಂಗಾವತಿ:

ಕಲುಷಿತಗೊಳ್ಳುತ್ತಿರುವ ತುಂಗಭದ್ರಾ ನದಿಯನ್ನು ನಿರ್ಮಲ ತುಂಗಭದ್ರಾ ನದಿಯನ್ನಾಗಿ ಮಾಡಲು ಈಗಾಗಲೇ ಎರಡು ಅಭಿಯಾನ ನಡೆಸಲಾಗಿದ್ದು, ಮೂರನೇ ಅಭಿಯಾನ ನವೆಂಬರ್‌ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ಸ್ವಾಭಿಮಾನ ಅಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪೂರ ಹೇಳಿದರು.

ನಗರದ ಐಎಂಎ ಭವನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡ ಎರಡು ಅಭಿಯಾನಗಳ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದರು.

ತುಂಗಾ ಹಾಗೂ ಭದ್ರಾ ಎರಡು ನದಿಗಳು ಸೇರಿಕೊಂಡು ತುಂಗಭದ್ರಾ ನದಿಯಾಗಿ ಹರಿಯುತ್ತದೆ. ದಕ್ಷಿಣ ಭಾರತದಲ್ಲಿ ಅತಿ ಉದ್ಧವಾಗಿರುವ ನದಿ ಇದಾಗಿದ್ದು, ಇದರ ಪರಿಸ್ಥಿತಿ ಕೇವಲ ಕುಡಿಯುವ ನೀರಿಗೆ ಮಾತ್ರ ಉಪಯೋಗ ಮಾಡುವಂತೆ ಆಗಿದೆ. ಕಾರ್ಖಾನೆಗಳ ತ್ಯಾಜ್ಯ, ಕಲುಷಿತ ನೀರು ನದಿ ಸೇರುವ ಮೂಲಕ ನದಿಯು ಸಾಕಷ್ಟು ಕಲುಷಿತಗೊಂಡಿದೆ. ಇದು ಹೀಗೆ ಮುಂದುವರಿದರೆ ಮುಂದಿನ ಪೀಳಿಗೆ ಜನರಿಗೆ ತುಂಗಭದ್ರಾ ನದಿಯ ನೀರು ಕುಡಿಯಲು ಸಹ ದೊರೆಯುವುದಿಲ್ಲ. ಹಾಗಾಗಿ ನಿರ್ಮಲ ತುಂಗಭದ್ರಾ ಎನ್ನುವ ಅಭಿಯಾನ ಹಮ್ಮಿಕೊಂಡು ಜಲ ಜಾಗೃತಿ ಜನ ಜಾಗೃತಿ ಮಾಡಲಾಗುತ್ತಿದೆ. ಈಗಾಗಲೇ ಶೃಂಗೇರಿಯಿಂದ ಹರಿಹರ ವರೆಗೆ ಮೊದಲನೇ, ಹರಿಹರದಿಂದ ಕಿಷ್ಕಿಂದದ ವರೆಗೆ ಎರಡನೇ ಅಭಿಯಾನ ನಡೆಸಲಾಗಿದೆ ಎಂದ ಅವರು, ಮೂರನೇ ಅಭಿಯಾನವನ್ನು ಕಿಷ್ಕಿಂದ ಕ್ಷೇತ್ರದಿಂದ ಮಂತ್ರಾಲಯ ವರೆಗೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಕುಮಾರಸ್ವಾಮಿ, ಹಾಸ್ಯ ಭಾಷಣಕಾರ ಬಿ. ಪ್ರಾಣೇಶ್, ಪ್ರಮುಖರಾದ ಡಾ. ಸೋಮರಾಜ, ಡಾ. ಶಿವಕುಮಾರ ಮಾಲಿಪಾಟೀಲ್, ಸಂತೋಷ ಕೆಲೋಜಿ, ಶಂಕರ್, ಜಗನ್ನಾಥ ಆಲಂಪಲ್ಲಿ, ಪವನ ಕುಮಾರ ಗುಂಡೂರ ಇದ್ದರು.