ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
2022-23ನೇ ಸಾಲಿನ ಖನಿಜ ಬ್ಲಾಕ್‌ಗಳ ಹರಾಜಿನಲ್ಲಿ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ದೇಶದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಸಾಧನೆ ಮಾಡಲು ಆದ್ಯತೆ ನೀಡುವುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಹೇಳಿದ್ದಾರೆ.ಮಂಗಳವಾರ ಭೋಪಾಲ್‌ನಲ್ಲಿ ನಡೆದ ರಾಜ್ಯ ಗಣಿಗಾರಿಕೆ ಮಂತ್ರಿಗಳ 2ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು. ರಾಜ್ಯ ಗಣಿಗಾರಿಕೆ ಇಲಾಖೆಯ ಕಾರ್ಯವೈಖರಿಯನ್ನು ಕೇಂದ್ರ ಸರ್ಕಾರ ಶ್ಲಾಘನೆ ದೊರೆತಿದೆ. ಇದು ಇನ್ನು ಉತ್ತಮವಾಗಿ ಕೆಲಸ ಮಾಡಲು ಪ್ರೇರಕವಾಗಿದ್ದು, ಅತ್ಯುತ್ಮತ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ರಾಜ್ಯ ಗಣಿಗಾರಿಕೆ ಇಲಾಖೆ ನಿರ್ದೇಶಕ ಗಿರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ನೂರು ಕೋಟಿ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದ ನಮ್ಮ ಮೆಟ್ರೋ
ಬೆಂಗಳೂರು: ನಮ್ಮ ಮೆಟ್ರೋ ನಿಗಮ ಕಳೆದ ಡಿಸೆಂಬರ್‌ನಲ್ಲಿ ಒಟ್ಟಾರೆ ನೂರು ಕೋಟಿ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದ ಮೈಲುಗಲ್ಲು ಸ್ಥಾಪಿಸಿದೆ. ಸದ್ಯ ಪ್ರತಿದಿನ 7 ಲಕ್ಷ ಸರಾಸರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.2011ರ ಅಕ್ಟೋಬರ್ 20ರಿಂದ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸಿದ್ದು, ಕಳೆದ ಡಿಸೆಂಬರ್ 29ರಂದು ನೂರು ಕೋಟಿ ಪ್ರಯಾಣಿಕರ ಸಂಖ್ಯೆಯನ್ನು ದಾಟಿದೆ. ಜನವರಿಯಲ್ಲಿ ಈವರೆಗೆ ಸರಿಸುಮಾರು 1.40 ಕೋಟಿಗೂ ಅಧಿಕ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.ಡಿಸೆಂಬರ್‌ನಲ್ಲಿ ಒಟ್ಟು 1.73 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಡಿ.13ರಂದು ಗರಿಷ್ಠ 7.48ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದರಲ್ಲಿ ಶೇ. 51ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್, ಶೇ.31ರಷ್ಟು ಟೋಕನ್ ಬಳಕೆದಾರರು ಸೇರಿದ್ದಾರೆ. ಜೊತೆಗೆ ಶೇ. 14ರಷ್ಟು ಕ್ಯೂ ಆರ್ ಟಿಕೆಟ್ ಬಳಕೆದಾರರಿದ್ದಾರೆ.2023ರ ಜನವರಿಯಲ್ಲಿ 5.11 ಲಕ್ಷವಿದ್ದ ಕ್ಯೂ ಆರ್ ಟಿಕೆಟ್ ಬಳಕೆದಾರರ ಸಂಖ್ಯೆ ಡಿಸೆಂಬರ್‌ಗೆ 25.9 ಲಕ್ಷ ದಾಟಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ.