11 ದಿನದಲ್ಲಿ 4 ಶಾಖೆ, 2 ವಿಸ್ತರಣಾ ಕೌಂಟರ್‌ ಕಾರ್ಯಾರಂಭ: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ಸಾಧನೆ

| Published : Jun 30 2025, 12:34 AM IST

11 ದಿನದಲ್ಲಿ 4 ಶಾಖೆ, 2 ವಿಸ್ತರಣಾ ಕೌಂಟರ್‌ ಕಾರ್ಯಾರಂಭ: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಘಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ತನ್ನ ಕಾರ್ಯಯೋಜನೆ ವಿಷನ್ ೨೦೨೫ ರಂತೆ ಹೊಸ ೩೦ ಶಾಖೆಗಳನ್ನು ತಲುಪುವ ನಿಟ್ಟಿನಲ್ಲಿ ೨೦೨೫ರ ಜೂನ್ ತಿಂಗಳ ೮ ರಿಂದ ೧೮ರವರೆಗಿನ ೧೧ ದಿನಗಳ ಕಿರು ಅವಧಿಯಲ್ಲಿ ೪ ಹೊಸ ಶಾಖೆಗಳನ್ನು ಮತ್ತು ೨ ವಿಸ್ತರಣಾ ಕೌಂಟರ್‌ಗಳನ್ನು ತೆರೆದು ಸಹಕಾರ ರಂಗದಲ್ಲಿ ಮತ್ತೊಂದು ಅಪೂರ್ವ ಸಾಧನೆಯನ್ನು ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಘಗಳಲ್ಲೊಂದಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿ ತನ್ನ ಕಾರ್ಯಯೋಜನೆ ವಿಷನ್ ೨೦೨೫ ರಂತೆ ಹೊಸ ೩೦ ಶಾಖೆಗಳನ್ನು ತಲುಪುವ ನಿಟ್ಟಿನಲ್ಲಿ ೨೦೨೫ರ ಜೂನ್ ತಿಂಗಳ ೮ ರಿಂದ ೧೮ರವರೆಗಿನ ೧೧ ದಿನಗಳ ಕಿರು ಅವಧಿಯಲ್ಲಿ ೪ ಹೊಸ ಶಾಖೆಗಳನ್ನು ಮತ್ತು ೨ ವಿಸ್ತರಣಾ ಕೌಂಟರ್‌ಗಳನ್ನು ತೆರೆದು ಸಹಕಾರ ರಂಗದಲ್ಲಿ ಮತ್ತೊಂದು ಅಪೂರ್ವ ಸಾಧನೆಯನ್ನು ಮಾಡಿದೆ.

ಈ ಹಿಂದೆ ೨೦೨೧ನೇ ಸಾಲಿನ ನವೆಂಬರ್ ತಿಂಗಳ ೭ ದಿನಗಳ ಕಿರು ಅವಧಿಯಲ್ಲಿ ೫ ನೂತನ ಶಾಖೆಗಳನ್ನು ಆರಂಭಿಸುವ ಮೂಲಕ ಅದ್ವಿತೀಯ ಸಾಧನೆಯನ್ನು ಮಾಡಿರುವುದು ಇಲ್ಲಿ ಉಲ್ಲೇಖನೀಯ.

ಶ್ರೀ ರಾಮಕೃಷ್ಣ ಕ್ರೆಡಿಟ್ರ್ ಕೋ- ಓಪರೇಟಿವ್ ಸೊಸೈಟಿಯು ತನ್ನ ೨೬ನೇ ಶಾಖೆಯನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹಾಗೂ ೨೭ನೇ ಶಾಖೆಯನ್ನು ಕಡಬ ತಾಲೂಕಿನ ಸವಣೂರಿನಲ್ಲಿ, ೨೮ನೇ ಶಾಖೆಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಿರಿಯಡ್ಕದಲ್ಲಿ, ಸಂಘದ ಮಂಗಳೂರು ಶಾಖೆಯ ವಿಸ್ತರಣಾ ಕೌಂಟರನ್ನು ಮಂಗಳೂರು ಮಹಾನಗರ ವ್ಯಾಪ್ತಿಯ ಕದ್ರಿ ಕಂಬಳ ರಸ್ತೆಯಲ್ಲಿ ಆರಂಭಿಸಿದೆ.

ಸಂಘದ ಇನ್ನೊಂದು ವಿಸ್ತರಣಾ ಕೌಂಟರನ್ನು ಕಾರ್ಕಳದ ಕುಂಟಾಡಿಯ ಶ್ರೀರಕ್ತೇಶ್ವರಿ ದೈವಸ್ಥಾನದ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. ೨೯ನೇ ಶಾಖೆಯನ್ನು ಮಂಗಳೂರಿನ ಪಡೀಲ್‌ನಲ್ಲಿ ಉದ್ಘಾಟಿಸಲಾಯಿತು.

ಈ ಸೊಸೈಟಿಯ ಹಿರಿಯಡ್ಕ ಶಾಖೆ ಮತ್ತು ಕುಂಟಾಡಿ ವಿಸ್ತರಣಾ ಕೌಂಟರನ್ನು ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರ ದಕ್ಷ ನೇತೃತ್ವದಲ್ಲಿ ಬೆಳ್ಳಾರೆ, ಸವಣೂರು ಮತ್ತು ಹಿರಿಯಡ್ಕದಂಥಹ ಅರೆ ಪಟ್ಟಣ ಪ್ರದೇಶದಲ್ಲಿ ಹಾಗೂ ಕಾರ್ಕಳ ಕುಂಟಾಡಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ವಿಸ್ತರಣಾ ಶಾಖೆಗಳನ್ನು ಕಿರು ಅವಧಿಯಲ್ಲಿ ಜನರ ಸೇವೆಗೆ ಲೋಕಾರ್ಪಣೆಗೊಳಿಸಿ ಸದಸ್ಯರ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದೆ.೨೦೩೦ ಕ್ಕೆ ೪೦ ಶಾಖೆಗಳನ್ನು ಹೊಂದುವ ಗುರಿಯನ್ನು ಸಾಧಿಸಲು ಪ್ರೇರಣೆಯನ್ನು ನೀಡುತ್ತದೆ ಎಂದು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.