ಉತ್ತಮ ಕ್ರೀಡಾಂಗಣ, ಟ್ರಾಕ್ ನಿರ್ಮಾಣಕ್ಕೆ ₹4 ಕೋಟಿ ಪ್ರಸ್ತಾವನೆ: ಕೆ.ಎಸ್. ಆನಂದ್

| Published : Aug 18 2025, 12:00 AM IST

ಉತ್ತಮ ಕ್ರೀಡಾಂಗಣ, ಟ್ರಾಕ್ ನಿರ್ಮಾಣಕ್ಕೆ ₹4 ಕೋಟಿ ಪ್ರಸ್ತಾವನೆ: ಕೆ.ಎಸ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು,ಪಟ್ಟಣದಲ್ಲಿ ಉತ್ತಮ ಕ್ರೀಡಾಂಗಣ ಹಾಗೂ ಟ್ರಾಕ್ ನಿರ್ಮಿಸಬೇಕೆಂಬ ಇಚ್ಛೆಯಿಂದ ರಾಜ್ಯ ಸರಕಾರಕ್ಕೆ ₹4 ಕೋಟಿ ರು.ಗಳ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

- ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದಲ್ಲಿ ಉತ್ತಮ ಕ್ರೀಡಾಂಗಣ ಹಾಗೂ ಟ್ರಾಕ್ ನಿರ್ಮಿಸಬೇಕೆಂಬ ಇಚ್ಛೆಯಿಂದ ರಾಜ್ಯ ಸರಕಾರಕ್ಕೆ ₹4 ಕೋಟಿ ರು.ಗಳ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಶನಿವಾರ ಡಾ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅತಿಥೇಯದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಆಟ- ಪಾಠಕ್ಕೂ ಸೈ ಎಂಬಂತೆ ಕ್ರೀಡೆಗೆ ಆದ್ಯತೆ ನೀಡಬೇಕು. ಅನೇಕ ದಿನಗಳ ಬಳಿಕ ಕಾಲೇಜು ಮಟ್ಟದ ಕ್ರೀಡೆ ಆಯೋಜಿಸಿರುವುದು ಸಂತೋಷದ ಸಂಗತಿ ಎಂದರು.

ಪಠ್ಯಕ್ರಮಕ್ಕೂ ಸಮಯ ಮೀಸಲಿಟ್ಟಂತೆ ದೇಹದ ಕಸರತ್ತಿನ ಕ್ರೀಡೆಗೂ ಆದ್ಯತೆ ನೀಡಬೇಕು. ಹಾಗಾಗಿ ಸರ್ಕಾರ ಇಂತಹ ಕ್ರೀಡಾ ಚಟುವಟಿಕೆ ಆಯೋಜಿಸುತ್ತಿದೆ ಎಂದರು.

ಇಂದಿನ ಕ್ರೀಡಾಕೂಟವನ್ನುಕಾಲೇಜಿನ ಪ್ರಾಚಾರ್ಯ ತವರಾಜ್ ತಂಡ ಉತ್ತಮವಾಗಿ ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ನಾನು ಕೂಡ ಇದೇ ಕಾಲೇಜಿನಲ್ಲಿ ಓದಿ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ. ಹಾಗಾಗಿ ನಮ್ಮೂರಿಗೆ ಒಂದು ಉತ್ತಮ ಕ್ರೀಡಾಂಗಣ ಹಾಗೂ ಟ್ರಾಕ್ ಮಾಡಬೇಕೆಂಬ ಇಚ್ಚೆಯಿಂದ ₹4 ಕೋಟಿ ರು. ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ತಂದು ಒಳ್ಳೆಯ ಕ್ರೀಡಾಂಗಣ ಮಾಡಿಸುತ್ತೇನೆ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಜೊತೆಗೆ ದೇಹ ದಂಡಿಸಿ ಮಾನಸಿಕ ಮತ್ತು ದೈಹಿಕ ಸದೃಢತೆ ಸಾಧಿಸಲು ಕ್ರೀಡೆಗಳು ಬಹು ಮುಖ್ಯ, ಭಾಗವಹಿಸಿರುವ 23 ಕಾಲೇಜು ಗಳ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಭಾಗವಹಿಸುವಿಕೆ ಮುಖ್ಯ. ಕಡೂರಿನ ವೇದಾ ಕೃಷ್ಣಮೂರ್ತಿ ಕ್ರಿಕೆಟ್ ಕ್ಷೇತ್ರದಲ್ಲಿ ಬೆಳೆದು ಕಡೂರು ಸೇರಿದಂತೆ ಭಾರತದ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಿ ಸಾಧನೆ ಮಾಡಿದ್ದಾರೆ. ತಾಲೂಕಿನ ಮಕ್ಕಳು ಥೈಲಾಂಡ್ ಗೆ ತೆರಳಿ ಕಡೂರಿಗೆ ಕೀರ್ತಿ ತಂದಿದ್ದಾರೆ ಎಂದರು. ತಾವು ಅಧ್ಯಕ್ಷರಾಗಿದ್ದ 2021ರಲ್ಲಿ ಇಲ್ಲೆ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆದಾಗ ಈ ಕ್ರೀಡಾಂಗಣಕ್ಕೆ ವಿದ್ಯುತ್ ದೀಪ ಅಳಡಿಸಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗಿತ್ತು ಎಂದು ಹೇಳಿ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲ ತವರಾಜ್ ಮಾತನಾಡಿ, ಈ ಕ್ರೀಡೆಯಲ್ಲಿ 23 ಕಾಲೇಜುಗಳ ಸುಮಾರು 950 ಕ್ರೀಡಾಪಟುಗಳು, ಶಿಕ್ಷಕರು ಭಾಗವಹಿಸುತ್ತಿದ್ದು ಶಾಸಕರು ಸೇರಿದಂತೆ ಕ್ರೀಡಾ ಕೂಟದ ಯಶಸ್ಸಿಗೆ ಕಾರಣರಾಗುತ್ತಿರುವ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.ಕ್ರೀಡಾ ಪಟುಗಳಿಗೆ ಪುರಸಭೆ ಹಿರಿಯ ಸದಸ್ಯ ಈರಳ್ಳಿ ರಮೇಶ್ ಪ್ರತಿಜ್ಞಾವಿಧಿ ಬೋಧಿಸಿ, ಈ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಶಾಸಕರ ಪ್ರೋತ್ಸಾಹಕ್ಕೆ ಶ್ಲಾಘಿಸುತ್ತೇನೆ. ಕ್ರೀಡಾಪಟುಗಳು ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಎಂದರು. ಪೊಲೀಸ್ ವೃತ್ತ ನಿರೀಕ್ಷಕ ಎಂ.ರಫೀಕ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಜಿ.ಶ್ರೀನಿವಾಸಮೂರ್ತಿ, ಎನ್. ಎಚ್. ನಂಜುಂಡಸ್ವಾಮಿ, ಎಲ್.ಐಸಿ ಮಂಜು ನಾಥ್, ಚೆಕ್ ಪೋಸ್ಟ್ ರವಿ, ಎನ್. ಎಚ್.ಚಂದ್ರಪ್ಪ,ರವಿ, ನಾಗರಾಜಪ್ಪ ತಾ. ನೌಕರರ ಸಂಘದ ಗೌರವಾಧ್ಯಕ್ಷ ವೈ.ಎಚ್. ಹನುಮಂತಪ್ಪ ನಾಗರಾಜಪ್ಪ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆನಂದಪ್ಪ, ಯುವಜನ ಸೇವಾ ಇಲಾಖೆ ಅಧಿಕಾರಿ ಮುರಳೀಧರ್, ಪಾಂಡುಕುಮಾರ್,ಆಂಜನಪ್ಪ, ಲತಾಮಣಿ, ಕಡೂರು ಸ.ಪ. ಪೂ ಕಾಲೇಜಿನ ಉಪನ್ಯಾಸಕ ಡಿ.ಲೋಕೇಶ್, ರಾಜಣ್ಣ ಸೇರಿದಂತೆ ಮತ್ತಿತರರು ಇದ್ದರು.

16ಕೆಕೆಡಿಯು1.

ಕಡೂರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಪಪೂ ಕಾಲೇಜಿನ ಪ್ರಾಚಾರ್ಯ ತವರಾಜ್ ಮತ್ತಿತರರು ಇದ್ದರು.

16ಕೆಕೆಡಿಯು1.

ಕಡೂರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳನ್ನು ಶಾಸಕ ಕೆ.ಎಸ್. ಆನಂದ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪರಿಚಯಮಾಡಿ ಕೊಂಡರು. ಕಾಲೇಜಿನ ಪ್ರಾಚಾರ್ಯ ತವರಾಜ್ ಮತ್ತಿತರರು ಇದ್ದರು.