ಸಾರಾಂಶ
ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಹಾಗೂ ಮುಧೋಳದಲ್ಲಿ ಮೂರು ದಿನಗಳ ಕಾಲ ನಡೆದ ರನ್ನ ಉತ್ಸವಕ್ಕೆ 4,03,59,452 ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಹಾಗೂ ಮುಧೋಳದಲ್ಲಿ ಮೂರು ದಿನಗಳ ಕಾಲ ನಡೆದ ರನ್ನ ಉತ್ಸವಕ್ಕೆ ₹4,03,59,452 ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರನ್ನ ಉತ್ಸವಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹2 ಕೋಟಿ, ಎಂಎಸ್ಐಎಲ್ದಿಂದ ₹49 ಲಕ್ಷ, ದಾನಿಗಳಿಂದ ಸಂಗ್ರಹವಾದ ₹1,92,40,020, ಮತ್ತು ಪ್ರವಾಸೋದ್ಯಮ ಇಲಾಖೆಯ₹ 20 ಲಕ್ಷ ಅನುದಾನ ಸೇರಿ ಒಟ್ಟು ₹4,61,40,020 ಸಂಗ್ರಹವಾಗಿದೆ. ಇದರಲ್ಲಿ ₹4,03,59,452 ಖರ್ಚುಮಾಡಲಾಗಿದೆ. ₹57,80,568 ಉಳಿತಾಯ ಖಾತೆಯಲ್ಲಿದೆ ಎಂದು ಮಾಹಿತಿ ನೀಡಿದರು.
ಕ್ರೀಡೆಗಾಗಿ ₹13,50,000., ಸ್ಥಳೀಯ ಕಲಾವಿದರಿಗೆ ₹34,74,000, ಶ್ಯಾಮಿಯಾನ್ ಫುಡ್ ಸೆಕ್ಷನ್‌ಗೆ ₹15 ಲಕ್ಷ, ರನ್ನ ರಥಕ್ಕೆ ₹5 ಲಕ್ಷ., ಸನ್ಮಾನಕ್ಕಾಗಿ ₹1.60 ಲಕ್ಷ, ಸನ್ಮಾನಿತರಿಗೆ ₹4,80 000, ಪ್ರಚಾರಕ್ಕಾಗಿ ₹16 ಲಕ್ಷ , ಫಲ-ಪುಷ್ಪ ಪ್ರದರ್ಶನಕ್ಕೆ ₹3,92,000., ಹೊಯ್ಸಳ ಕ್ರಿಯೇಷನ್ (ಇವೆಂಟ್ ಮ್ಯಾನೇಜಮೆಂಟಗಾಗಿ ) ₹2, 85,00,000 ಇತರೆ ಕಾರ್ಯಕ್ರಮ ಸೇರಿ ಒಟ್ಟು ₹ 4,03,59,452 ಖರ್ಚು ಮಾಡಲಾಗಿದೆ. ಹೊಯ್ಸಳ ಕ್ರಿಯೇಷನ್ಸ್ ಅವರು ಹೆಚ್ಚುವರಿ ಬಾಕಿ ಪಾವತಿಸಲು ₹ 97 ಲಕ್ಷ ರೂ., ಬಿಲ್ ನೀಡಿದ್ದು, ಅದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಮಾತನಾಡಿ, ರನ್ನ ಉತ್ಸವಕ್ಕಾಗಿ ಖರ್ಚು ಮಾಡಿದ ಎಲ್ಲ ವಿವರವನ್ನು ಮಾಧ್ಯಮಗೋಷ್ಠಿಯಲ್ಲಿ ಓದಿ ಹೇಳಿದರು.