ಸಾರಾಂಶ
ಆ.3ರಂದು ಬೆಳಗ್ಗೆ 11.30ರಿಂದ 12 ಗಂಟೆ ನಡುವೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೆ ಮೊದಲು 10.30ಕ್ಕೆ ಕಡಿಯಾಳಿಯ ಬಿಜೆಪಿ ಕಾರ್ಯಾಲಯದ ಬಳಿ ಉಡುಪಿ ಮಂಡಲ ಮಟ್ಟದ ಸಮಾವೇಶ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ 4 ಮಂಡಲ ಮಟ್ಟದ ಸಮಾವೇಶ ಮತ್ತು 3 ಜಿಲ್ಲಾ ಮಟ್ಟದ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು.
ಮಾ.29ರಂದು ಸಂಜೆ 4 ಗಂಟೆಗೆ ಕುಂದಾಪುರ ಮಂಡಲ ಮಟ್ಟದ ಕಾರ್ಯಕರ್ತ ಸಮಾವೇಶವನ್ನು ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.30ರಂದು ಸಂಜೆ 4 ಗಂಟೆಗೆ ಕಾಪು ಮಂಡಲ ಮಟ್ಟದ ಸಮಾವೇಶವನ್ನುಕಾಪುವಿನ ಕೆಒನ್ ಹಾಲ್ ನಲ್ಲಿ ಆಯೋಜಿಸಲಾಗಿದೆ.ಆ.3ರಂದು ಬೆಳಗ್ಗೆ 11.30ರಿಂದ 12 ಗಂಟೆ ನಡುವೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೆ ಮೊದಲು 10.30ಕ್ಕೆ ಕಡಿಯಾಳಿಯ ಬಿಜೆಪಿ ಕಾರ್ಯಾಲಯದ ಬಳಿ ಉಡುಪಿ ಮಂಡಲ ಮಟ್ಟದ ಸಮಾವೇಶ ನಡೆಯಲಿದೆ.5ರಂದು ಬೆಳಿಗ್ಗೆ 10.30 ಗಂಟೆಗೆ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಕಾರ್ಕಳ ಮಂಡಲ ಮಟ್ಟದ ಸಮಾವೇಶ ನಡೆಯಲಿದೆ.ಅಲ್ಲದೇ ಉಡುಪಿ ಜಿಲ್ಲಾ ಮಟ್ಟದ ಮಹಿಳಾ ಮತದಾರರ ಸಮಾವೇಶ, ಹಿಂದುಳಿದ ವರ್ಗಗಳ ಕಾರ್ಯಕರ್ತ ಮತ್ತು ಯುವ ಕಾರ್ಯಕರ್ತ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ರಾಜ್ಯ ರಾಷ್ಟ್ರಮಟ್ಟದ ಸ್ಟಾರ್ ಪ್ರಚಾರಕರು ಭಾಗವಹಿಸಿದ್ದಾರೆ ಎಂದು ಕಿಣಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಕ್ತಾರ ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಕಚೇರಿ ಕಾರ್ಯದರ್ಶಿ ಶಿವಕುಮಾರ್ ಉಪಸ್ಥಿತರಿದ್ದರು.;Resize=(128,128))
;Resize=(128,128))