ಸಾರಾಂಶ
ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನನ್ನು ಸೋಮವಾರ ಸಂಜೆ 5.30ರ ವೇಳೆಗೆ ಏಳೆಂಟು ಜನರ ಗುಂಪು ಮಚ್ಚುಗಳಿಂದ ದಾಳಿ ಮಾಡಿ, ಕೊಲೆ ಮಾಡಿದೆ. ಹಂತಕರ ಪತ್ತೆಗಾಗಿ ನಗರ ಡಿವೈಎಸ್‌ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದ್ದಾರೆ.
ದಾವಣಗೆರೆ: ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನನ್ನು ಸೋಮವಾರ ಸಂಜೆ 5.30ರ ವೇಳೆಗೆ ಏಳೆಂಟು ಜನರ ಗುಂಪು ಮಚ್ಚುಗಳಿಂದ ದಾಳಿ ಮಾಡಿ, ಕೊಲೆ ಮಾಡಿದೆ. ಹಂತಕರ ಪತ್ತೆಗಾಗಿ ನಗರ ಡಿವೈಎಸ್‌ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣುಮ ಸಂತೋಷನ ಹತ್ಯೆಯನ್ನು ಏಳೆಂಟು ಜನ ಅಪರಿಚಿತರ ಗುಂಪು ಮಾಡಿದೆ. ಕೊಲೆ ಯಾಕಾಗಿ ಆಗಿದೆ, ಯಾರು ಮಾಡಿದರೆಂಬ ಬಗ್ಗೆ ತನಿಖೆ ಆಗಬೇಕು. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದು, ಪ್ರಾಥಮಿಕ ತನಿಖೆಯ ನಡೆದಿದೆ. ನಂತರವಷ್ಟೇ ಕೊಲೆಗೆ ಏನು ಕಾರಣವೆಂಬುದು ಸ್ಪಷ್ಟವಾಗಲಿದೆ. ಹತ್ಯೆಯಾದ ಕಣುಮ ಸಂತೋಷ ರೌಡಿ ಶೀಟರ್ ಇದ್ದು, ಆತನ ವಿರುದ್ಧ ಬಾಡಿ ಅಫೆನ್ಸ್, ಕೊಲೆ ಸೇರಿದಂತೆ ಅನೇಕ ಪ್ರಕರಣಗಳೂ ಇವೆ ಎಂದು ಹೇಳಿದರು.ರೌಡಿ ಶೀಟರ್ ಕಣುಮ ಹತ್ಯೆಗೆ ಹಳೆ ವೈಷಮ್ಯ ಕಾರಣವೇ ಅಥವಾ ಬೇರೆನಾದರೂ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - --5ಕೆಡಿವಿಜಿ14: ಉಮಾ ಪ್ರಶಾಂತ್, ಜಿಲ್ಲಾ ಎಸ್‌ಪಿ