ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕನ್ನಡಕ್ಕೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ತನ್ನದೇಯಾದ ಅಸ್ಮಿತೆಯನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.ತಾಲೂಕು ಆಡಳಿತ, ತಾಪಂ ಮತ್ತು ನಗರಸಭೆ ವತಿಯಿಂದ ಶುಕ್ರವಾರ ಗೌರಿಬಿದನೂರು ಆಚಾರ್ಯ ಪ.ಪೂ.ಕಾಲೇಜಿನ ಮೈಧಾನದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡದೇವತೆ ಭುವನೇಶ್ವರಿ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಣಾತನಾಡಿದರು. ಕನ್ನಡಭವನ ನಿರ್ಮಾಣಕ್ಕೆ ಕ್ರಮನಗರದ ಡಾ.ಎಚ್.ಎನ್.ಕಲಾಭವನದ ಎದುದು ನಿರ್ಮಾಣ ಹಂತದಲ್ಲಿರುವ ಕನ್ನಡ ಭವನಕ್ಕೆ 40 ಲಕ್ಷ ರು.ಗಳ ಅನುಧಾನವನ್ನು ಮಂಜೂರುಮಾಡಿಸಿ ಕೇವಲ 6 ತಿಂಗಳಿನೊಳಗೆ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡುವುದಾಗಿ ಶಾಸಕರು ಭರವಸೆ ನೀಡಿದರು. ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ, ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾಗಿದ್ದು ಜೊತೆಗೆ ಆರ್.ಎಚ್.ದೇಶಪಾಂಡೆ,ಗೊರೂರುರಾಮಸ್ವಾಮಿ ಅಯ್ಯಂಗಾರ್,ಎಸ್.ನಿಜಲಿಂಗಪ್ಪ, ಮೊದಲಾದವರು ಹೋರಾಟದಲ್ಲಿ ಪ್ರಮುಖಪಾತ್ರವಹಿಸಿ, ಕನ್ನಡ ಭಾಷಿಗರ ರಾಜ್ಯವಾಗಿ ಕರ್ನಾಟಕ ರೂಪಗೊಳ್ಳಲುಶ್ರಮಿಸಿದರು ಎಂದರು. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಹಲವಾರು ಸಾಧಕರಿಗೆ ಹಾಗೂ 2023-24ನೇ ಸಾಲಿನಲ್ಲಿ ಮಾಸಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ತಾ.ಪ.ಕಾರ್ಯನಿರ್ವವಾಹಕ ಜೆ.ಕೆ.ಹೊನ್ನಯ್ಯ,ನಗರಸಭೆ-ಆಯುಕ್ತೆ ಡಿ.ಎಂ.ಗೀತಾ, ಬಿಇಒ ಬಿ.ವಿ.ಶ್ರೀನಿವಾಸಮೂರ್ತಿ,ಕೆ.ಹೆಚ್.ಪಿ.ಕಾರ್ಯನಿರ್ವಾಹಕ-ಶ್ರೀನಿವಾಸಗೌಡ, ತಾಲ್ಲೂಕುಆಡಳಿತದಸಿಬ್ಬಂಧಿ, ಕನ್ನಡ-ಪರ-ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.