ಎಚ್‌.ಡಿ. ಕೋಟೆ ತಾಲೂಕಿಗೆ 400 ಕೋಟಿ ರು. ಅನುದಾನ ತರಲಾಗಿದೆ

| Published : Mar 08 2024, 01:49 AM IST

ಸಾರಾಂಶ

ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕು, ಸರ್ಕಾರದ ಮಹತ್ವಕಾಂಕ್ಷಿಯ ಶಕ್ತಿ ಯೋಜನೆಯ ಪ್ರಯೋಜನವನ್ನೂ ಸಹ ಪಡೆದುಕೊಳ್ಳಬೇಕು ಎಂದರು. ಸರ್ಕಾರದಿಂದ ಮುಂದಿನ ದಿನಗಳಲ್ಲಿ ತಾಲೂಕಿಗೆ ಮನೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಪ್ರಸ್ತುತ ಸಾಲಿನಲ್ಲಿ 400 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳ ಮೂಲಕ ತಾಲೂಕಿಗೆ ಅನುದಾನವನ್ನು ತರಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಗುರುವಾರ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಕಾರ್ಮಿಕ ಇಲಾಖೆಯಿಂದ ಸರಗೂರು ಮತ್ತು ಎಚ್.ಡಿ. ಕೋಟೆಯ ಕಾರ್ಮಿಕರ 79 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಶ್ರಮ ಪಟ್ಟಿದ್ದೆ, ಅದೇ ರೀತಿ ಪ್ರಸ್ತುತ ಸಾಲಿನಲ್ಲಿ ಅಭಿವೃದ್ಧಿಗೆ ಪಣತೊಡುವುದಾಗಿ ತಿಳಿಸಿದರು.

ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕು, ಸರ್ಕಾರದ ಮಹತ್ವಕಾಂಕ್ಷಿಯ ಶಕ್ತಿ ಯೋಜನೆಯ ಪ್ರಯೋಜನವನ್ನೂ ಸಹ ಪಡೆದುಕೊಳ್ಳಬೇಕು ಎಂದರು.

ಸರ್ಕಾರದಿಂದ ಮುಂದಿನ ದಿನಗಳಲ್ಲಿ ತಾಲೂಕಿಗೆ ಮನೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜೀತ ವಿಮುಕ್ತಿ ಹೊಂದಿದ ಹನ್ನೆರಡು ಮಂದಿಗೆ ಬಿಡುಗಡೆ ಪತ್ರವನ್ನು ನೀಡಲಾಯಿತು.

ಹುಣಸೂರು ಉಪವಿಭಾಗಧಿಕಾರಿ ಹ್ಯಾರಿಸ್ ಮಹಮ್ಮದ್ ಸುಮೈರ್, ತಹಸೀಲ್ದಾರ್ ಶ್ರೀನಿವಾಸ್, ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜೇಶ್ ಜಾದವ್, ಹಿರಿಯ ಕಾರ್ಮಿಕ ನಿರೀಕ್ಷಿಕ ಶಶಿಧರ್, ಕಾರ್ಮಿಕ ನಿರೀಕ್ಷಿಕ ಚಂದ್ರು ಮತ್ತು ಡಿ ಇ ಓ ಗಳಾದ ಪರಶಿವಮೂರ್ತಿ, ಸರಿತಾ ಇದ್ದರು.