ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನ: ರಾಜ್ಯಸಭಾ ಸದಸ್ಯ ಅಜಿತ್‌ ಗೋಪ್‌ಚಡೆ

| Published : Mar 05 2024, 01:37 AM IST

ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನ: ರಾಜ್ಯಸಭಾ ಸದಸ್ಯ ಅಜಿತ್‌ ಗೋಪ್‌ಚಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರ ರಾಜ್ಯದಲ್ಲಿಯೂ ೪೮ ಲೋಕಸಭಾ ಸ್ಥಾನಗಳಲ್ಲಿ ೪೮ ಸ್ಥಾನಗಳು ಬಿಜೆಪಿ ಪಾಲಾಗಲಿವೆ.

ಕಾರಟಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 400 ಸ್ಥಾನಗಳನ್ನು ಪಡೆದು ಮುನ್ನುಗ್ಗಲಿದೆ ಎಂದು ನೂತನ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಅಜಿತ್ ಗೋಪ್‌ಚಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಐತಿಹಾಸಿಕ ಮಹದೇಶ್ವರ ದೇವಾಲಯ ಮತ್ತು ಸುಂಕಲಿ ವೀರಪ್ಪನ ಬಾವಿ ವೀಕ್ಷಣೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಾರಾಷ್ಟ್ರ ರಾಜ್ಯದಲ್ಲಿಯೂ ೪೮ ಲೋಕಸಭಾ ಸ್ಥಾನಗಳಲ್ಲಿ ೪೮ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆ ಸದಸ್ಯರನ್ನಾಗಿ, ಸಂಸದರನ್ನಾಗಿ, ಕೊನೆಗೆ ರಾಷ್ಟ್ರಪತ್ರಿ ಎಂಥ ಮಹತ್ವದ ಸ್ಥಾನಗಳನ್ನು ನೀಡಿ ಗೌರವಿಸುವ ಪರಿ ಬಿಜೆಪಿಗೆ ಇದೆ ಎಂದರು.ರಾಜ್ಯಸಭೆ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾದ ಅಜಿತ್ ಗೋಪ್‌ಚಡೆ ಮೂಲತಃ ಮಹಾರಾಷ್ಟ್ರದ ನಾಂದೇಡ್‌ನವರು. ಪಟ್ಟಣದ ಉದ್ಯಮಿ ಎಸ್.ಪಿ. ಜವಳಿ ಅವರ ಪುತ್ರಿ ಡಾ.ಚೇತನಾ ಅವರನ್ನು ವರಿಸಿದ್ದಾರೆ. ತಾವು ಕಾರಟಗಿಯ ಅಳಿಯ (ದಾಮಾದ್) ಎನ್ನುವುದು ಹೆಮ್ಮೆ ಆಗುತ್ತದೆ ಎನ್ನುತ್ತಾರೆ.

ಕುಟುಂಬ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಇಲ್ಲಿನ ಐತಿಹಾಸಿಕ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಪುನರುಜ್ಜೀವನಗೊಳ್ಳುತ್ತಿರುವ ಸುಂಕಲವೀರಪ್ಪನ ಪುಷ್ಕರಣಿ ವೀಕ್ಷಿಸಿದರು. ಪುಷ್ಕರಣಿ ಪುನುರುಜ್ಜೀವನಕ್ಕೆ ನನ್ನ ರಾಜ್ಯಸಭಾ ಅನುದಾನದಲ್ಲಿ ಹಣ ಬಿಡುಗಡೆ ಮಾಡುವುದಾಗಿ, ಜೊತೆಗೆ ಕೇಂದ್ರದ ಪುರಾತತ್ವ ಇಲಾಖೆಯಿಂದ ಸಿಗುವ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ವಿರುಪಾಕ್ಷಪ್ಪ ಜವಳಿ ಮತ್ತು ವಿಶ್ವನಾಥ್ ಜವಳಿ ಸೇರಿದಂತೆ ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಶಿವಶರಣೇಗೌಡ ಯರಡೋಣಾ, ಪುರಸಭೆ ಸದಸ್ಯ ಸೋಮಶೇಖರ ಬೇರಿಗೆ, ಮಾಜಿ ಸದಸ್ಯ ಸಿದ್ರಾರಾಮಯ್ಯಸ್ವಾಮಿ ಹಿರೇಮಠ, ಪುಷ್ಕರಣಿ ಅಭಿವೃದ್ಧಿ ಸಮಿತಿಯ ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ, ಉಪನ್ಯಾಸಕ ತಲೇಖಾನ ವೀರೂಪಾಕ್ಷೇಶ್ವರ, ಮರುಳಸಿದ್ದಯ್ಯಸ್ವಾಮಿ ಹಿರೇಮಠ, ಶಿವಕುಮಾರ ಶೀಲವಂತರ, ಮಂಜುನಾಥ ಮಸ್ಕಿ, ಮಂಜುನಾಥ್ ಶ್ರೇಷ್ಠಿ, ಶ್ಯಾಮಸುಂದರ್ ಬದಿ ಇದ್ದರು.