ಸಾರಾಂಶ
ಬೀದರ್ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಮರಾಠಾ ಸಮಾಜದ ಡಾ. ದಿನಕರ ಮೋರೆ ಅವರು ಕೊನೆಯ ದಿನ ನಾಮಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಏ.19ರಂದು 13 ನಾಮಪತ್ರಗಳ ಸಲ್ಲಿಕೆಯಿಂದ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 34 ಜನರಿಂದ ಇಲ್ಲಿಯವರೆಗೆ 41 ನಾಮಪತ್ರಗಳು ಸಲ್ಲಿಕೆಯಾಗಿವೆ.ಲೋಕಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏ.19ರಂದು ಬೀದರ್-07 ಲೋಕಸಭಾ ಚುನಾವಣಾ ಕ್ಷೇತ್ರದಿಂದ ಏ.19ರಂದು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ಕೊನೆ ದಿನದಂದು ಪಕ್ಷೇತರ ಅಭ್ಯರ್ಥಿಯಾಗಿ ಜಯರಾಜ ಕಾಶಪ್ಪಾ ಬುಕ್ಕಾ. ಅಬ್ದುಲ್ ರಜಾಕ್, ಡಾ. ದಿನಕರ ಮೋರೆ, ಮಹೇಶ ಕುಮಾರ ಪ್ರಭಾಕರ್ ರಾವ್ ಗವಂಡೆ, ಕಲ್ಲಾಲಿಂಗ ತಂದೆ ಈಶ್ವರಪ್ಪ ಹೂಗಾರ, ಗೌತಮ ಮೋರೆ, ಪರಮೇಶ್ವರ ಪಾಟೀಲ, ಗೋಪಾಲ ಮಾರುತಿ, ರಾಮವಿಲಾಸ್ ನಾವಂದರ್ ಹಾಗೂ ಬಸಪ್ಪ ರಾಂಪೂರೆ ನಾಮಪತ್ರ ಸಲ್ಲಿಸಿದರು.ಶುಕ್ರವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಅವರ ಸೂಚಿತ ವ್ಯಕ್ತಿ ಮಲ್ಲಿಕಾರ್ಜುನ ಪಾಟೀಲ ನಾಮಪತ್ರ ಸಲ್ಲಿಸಿದರು. ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಶಿವರಾಜ ನಾಮಪತ್ರ ಸಲ್ಲಿಸಿದರು. ಆರ್ಪಿಐ (ಬಿ) ಪಕ್ಷದ ಅಭ್ಯರ್ಥಿಯಾಗಿ ಲಕ್ಷ್ಮೀಪುತ್ರ ಮಾಳಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಏ.19 ಕೊನೆ ದಿನವಾಗಿತ್ತು. ಏ.22 ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.