ಸಾರಾಂಶ
ಹೊಳೆನರಸೀಪುರ: ಪಟ್ಟಣದ ಹೇಮಾವತಿ ನದಿದಡದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸೋಮವಾರ ೪೧ನೇ ದಿನದ ಮಂಡಲ ಪೂಜೆ ಸಂಪ್ರದಾಯದ ಆಚರಣೆಯಂತೆ ವೈಭವದಿಂದ ನಡೆಯಿತು.
ಬೆಂಗಳೂರಿನಿಂದ ತಂತ್ರಿ ನಂಬೂದರಿ ನೇತೃತ್ವದಲ್ಲಿ ಆಗಮಿಸಿದ್ದ ಅರ್ಚಕರ ತಂಡ ಮಂಡಲ ಪೂಜೆಯ ಅಂಗವಾಗಿ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ವಿವಿಧ ಬಗೆಯ ಹೋಮಗಳನ್ನು ನಡೆಸಿದರು. ನಂತರ ೨೩ ಕಳಸಗಳನ್ನು ಪೂಜಿಸಿ, ತುಪ್ಪ, ಜೇನು, ಹಾಲು, ಭಸ್ಮ, ಕಳಸದ ನೀರಿನಿಂದ ಗಣೇಶ, ದುರ್ಗಾದೇವಿ, ಸುಬ್ರಹ್ಮಣ್ಯ, ಅಯ್ಯಪ್ಪನಿಗೆ ಅಭಿಷೇಕ ಹಾಗೂ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನೀಡಿದರು.ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರತಿ ದಿನ ಬೆಳಗ್ಗೆ ೬.೩೦ರಿಂದ ೯.೩೦ರವರೆಗೆ ಪೂಜೆ, ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ, ತುಪ್ಪದ ದೀಪದ ಆರತಿ ನಡೆಯುತ್ತದೆ. ಸಂಜೆ ೬.೩೦ರಿಂದ ರಾತ್ರಿ ೮.೩೦ ರವರೆಗೆ ದೇವಾಲಯ ತೆರೆದಿರುತ್ತದೆ. ದೇವಾಲಯ ನೆಲಮಹಡಿಯಲ್ಲಿರುವ ಸ್ಥಳವನ್ನು ನಾಮಕಾರಣ, ನಿಶ್ಚಿತಾರ್ಥ ಇನ್ನಿತರ ಆಧ್ಯಾತ್ಮ ಕಾರ್ಯಕ್ರಮಗಳಿಗೆ ಟ್ರಸ್ಟಿನ ನಿಯಮದಂತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಟ್ರಸ್ಟಿನ ಅಧ್ಯಕ್ಷ ಟಿ. ಶಿವಕುಮಾರ್ ತಿಳಿಸಿದ್ದಾರೆ.
ಪಂದಳ ರಾಜವಂಶಸ್ಥರಾದ ಹರಿವರ್ಮ ಅವರು ೪೧ನೇ ದಿನದ ಮಂಡಲ ಪೂಜೆಯಲ್ಲಿ ಭಾಗವಹಿಸಿದ್ದು, ಶ್ರೀಸ್ವಾಮಿಯ ಭಕ್ತರು, ಪೂಜ್ಯರಿಗೆ ಶ್ರದ್ಧೆಯಿಂದ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು.ಟ್ರಸ್ಟಿನ ಅಧ್ಯಕ್ಷ ಟಿ.ಶಿವಕುಮಾರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಎಚ್.ಎಸ್.ಸುದರ್ಶನ್, ಉಪಾಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಮಹದೇವ್, ಎ.ಆರ್.ರವಿಕುಮಾರ್, ಆಡಿಟರ್ ರಾಘವೇಂದ್ರ, ದಿನೇಶ್, ರಾಘವೇಂದ್ರ, ಕುಮಾರ, ವಾಸು, ಗಿರೀಶ್, ಗಾರೆ ರಾಘು, ಗುರುಸ್ವಾಮಿಗಳಾದ ಮಲ್ಲೇಶ್, ನಿಂಗಣ್ಣ, ಭಾಸ್ಕರ ಸೇರಿ ನೂರಾರು ಜನ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.