43 ಐತಿಹಾಸಿಕ ಪ್ರವಾಸಿ ತಾಣ, ಸ್ಮಾರಕಗಳ ಮೇಲೆ ವಕ್ಫ್ ಕೆಂಗಣ್ಣು? ಐದು ದಶಕಗಳ ಹಿಂದೆಯೇ ಪ್ಲಾನ್

| Published : Dec 13 2024, 12:50 AM IST / Updated: Dec 13 2024, 12:36 PM IST

43 ಐತಿಹಾಸಿಕ ಪ್ರವಾಸಿ ತಾಣ, ಸ್ಮಾರಕಗಳ ಮೇಲೆ ವಕ್ಫ್ ಕೆಂಗಣ್ಣು? ಐದು ದಶಕಗಳ ಹಿಂದೆಯೇ ಪ್ಲಾನ್
Share this Article
  • FB
  • TW
  • Linkdin
  • Email

ಸಾರಾಂಶ

  ವಕ್ಫ್‌ಬೋರ್ಡ್ ಐತಿಹಾಸಿಕ ನಗರದಲ್ಲಿರುವ ಆದಿಲ್‌ಶಾಹಿಗಳ ಸ್ಮಾರಕಗಳು ಹಾಗೂ ಐತಿಹಾಸಿಕ ಕಟ್ಟಡಗಳುಳ್ಳ ಪ್ರವಾಸಿ ತಾಣಗಳೆಲ್ಲವನ್ನೂ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಐದು ದಶಕಗಳ ಹಿಂದೆಯೇ ಪ್ಲಾನ್ ಮಾಡಿತ್ತು ಎಂಬ ಭಯಾನಕ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಶಶಿಕಾಂತ ಮೆಂಡೆಗಾರ

  ವಿಜಯಪುರ:ದಾನಿಗಳು ನೀಡಿದ ಭೂಮಿ, ಹಣಕೊಟ್ಟು ಖರೀದಿಸಿದ ಆಸ್ತಿಗಳು, ಇತರರಿಂದ ಬಂದ ಉಡುಗೊರೆಗಳು ಮಾತ್ರ ವಕ್ಫ್‌ ಪ್ರಾಪರ್ಟಿಗಳು ಎನ್ನುತ್ತಿದ್ದ ವಕ್ಫ್‌ಬೋರ್ಡ್ ಐತಿಹಾಸಿಕ ನಗರದಲ್ಲಿರುವ ಆದಿಲ್‌ಶಾಹಿಗಳ ಸ್ಮಾರಕಗಳು ಹಾಗೂ ಐತಿಹಾಸಿಕ ಕಟ್ಟಡಗಳುಳ್ಳ ಪ್ರವಾಸಿ ತಾಣಗಳೆಲ್ಲವನ್ನೂ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಐದು ದಶಕಗಳ ಹಿಂದೆಯೇ ಪ್ಲಾನ್ ಮಾಡಿತ್ತು ಎಂಬ ಭಯಾನಕ ವಿಚಾರ ಇದೀಗ ಬೆಳಕಿಗೆ ಬಂದಿದೆ. 

ಐವತ್ತು ವರ್ಷಗಳ ಹಿಂದೆಯೇ ವಿಜಯಪುರದ 43 ಸ್ಮಾರಕಗಳ ಮೇಲೆ ವಕ್ಫ್‌ ಕೆಂಗಣ್ಣು ಬಿದ್ದಿದ್ದು, ಎಲ್ಲ ಸ್ಮಾರಕಗಳನ್ನೂ 1974 ಫೆ.14ರಂದು ತನ್ನ ಗೆಜೆಟ್ ನೋಟಿಫಿಕೇಷನ್‌ನಲ್ಲಿ ಸೇರಿಕೊಂಡಿರುವ ಕುರಿತು ಕನ್ನಡಪ್ರಭ ಎಕ್ಸಕ್ಲೂಸಿವ್ ವರದಿ ಮಾಡಿದೆ. ಇಲ್ಲಿದೆ ನೋಡಿ.ನಮ್ಮ ಭೂಮಿ ಕಸಿದುಕೊಳ್ಳಲಾಗುತ್ತಿದೆ ಎಂದು ಆತಂಕಕ್ಕೊಳಗಾಗಿ ರೈತರು, ಮಠಾಧೀಶರು ಹೋರಾಟ ನಡೆಸಿದ್ದಾರೆ. ಆದರೆ ಇದಕ್ಕೂ ಮೊದಲೇ 1974ರ ಗೆಜೆಟ್‌ನಲ್ಲಿಯೇ ವಿಜಯಪುರದ 43 ಸ್ಮಾರಕಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಇಡಿ ವಿಜಯಪುರವನ್ನೇ ತನ್ನದಾಗಿಸಿಕೊಳ್ಳಲು ಹೊರಟಿದ್ದ ವಕ್ಫ್‌ನ ಮಾಸ್ಟರ್‌ ಪ್ಲಾನ್ ನ್ನುಕನ್ನಡಪ್ರಭ ದಾಖಲೆಗಳ ಸಮೇತ ಬಯಲು ಮಾಡುತ್ತಿದೆ.

1990ರಲ್ಲೇ ಸ್ಮಾರಕಗಳಿಗೆ ನೋಟಿಸ್? ವಿಶ್ವ ವಿಖ್ಯಾತ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ಸಹ ವಕ್ಫ್‌ ಪ್ರಾಪರ್ಟಿ ಎಂದು ತನ್ನ ದಾಖಲೆಯಲ್ಲಿ ವಕ್ಫ್‌ ನಮೂದಿಸಿಕೊಂಡಿದೆ. ಅಲ್ಲದೆ ಇಲ್ಲಿನ 43 ಸ್ಮಾರಕಗಳಿಗೂ 34 ವರ್ಷಗಳ ಹಿಂದೆಯೇ ಅಂದರೆ 1990ರಲ್ಲಿಯೇ ನೋಟಿಸ್ ನೋಟಿಸ್ ನೀಡಿತ್ತು ಎನ್ನಲಾಗಿದೆ.

1974ರ ಗೆಜೆಟ್ ಪ್ರಕಾರ ಜಿಲ್ಲಾ ವಕ್ಫ್‌ ಸಲಹಾ ಮಂಡಳಿ ಐತಿಹಾಸಿಕ ತಾಣಗಳ ಲಿಸ್ಟ್ ತಯಾರಿಸಿತ್ತು. ಅದನ್ನು 2009 ಜೂನ್ 10ರಂದು ಬೆಂಗಳೂರು ವಕ್ಫ್‌ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ (ವಕ್ಫ್‌ ಸಿಇಒ)ಗೆ ಜಿಲ್ಲಾ ವಕ್ಫ್‌ ಬೋರ್ಡ್ ಸಲಹಾ ಸಮೀತಿಯಿಂದಲೇ ರವಾನಿಸಲಾಗಿತ್ತು.ವಕ್ಫ್‌ ಬೋರ್ಡ್‌ನಲ್ಲಿರುವ ವಕ್ಫ್‌ ಆಸ್ತಿಗಳ ಪಟ್ಟಿ ನೋಡಿದರೆ ವಿಜಯಪುರ ಜನಗಳ ತಲೆಸುತ್ತುವುದು ಗ್ಯಾರಂಟಿ. ಯಾಕೆಂದರೆ ವಕ್ಫ್‌ ಹೇಳಿದಂತೆ ಕೇಳಿಕೊಂಡು ಹೋದರೆ ವಿಜಯಪುರದಲ್ಲಿ ಸಾರ್ವಜನಿಕರಿಗೆ ನಡೆದಾಡಲೂ ಸಹ ಸ್ಥಳವಿಲ್ಲದಂತಹ ಸ್ಥಿತಿ ಬರಲಿದೆ.1974ರಲ್ಲಿ ಮಾಡಿರುವ ಗೆಜೆಟ್ ನೋಟಿಫಿಕೇಷನ್‌ ಯಾವ ಆಧಾರದ ಮೇಲೆ ಮಾಡಲಾಗಿದೆ ಎಂಬ ದಾಖಲೆಗಳನ್ನು ವಕ್ಫ್‌ ಬಿಡುಗಡೆ ಮಾಡಬೇಕು. ಅಂದಾಗ ಮಾತ್ರ ಇವರ ಹುಳುಕು ಹೊರಬರಲಿದೆ ಎನ್ನುತ್ತಿದ್ದಾರೆ ನಾಡಿನ ಜನತೆ.ಕೋಟ್

ಸ್ಮಾರಕ, ರೈತರ ಹೊಲ, ದೇವಸ್ಥಾನಗಳು, ಮಠಮಾನ್ಯಗಳು ಹೀಗೆ ಸಾಲು ಸಾಲು ಆಸ್ತಿಗಳು ತಮ್ಮವು ಎಂದು ಕುಳಿತಿದ್ದಾರೆ. ಇದರೊಟ್ಟಿಗೆ ಡಿಸಿ ಕಚೇರಿ, ಎಸ್ಪಿ ಕಚೇರಿ, ಐತಿಹಾಸಿಕ ತಾಣಗಳೆಲ್ಲವೂ ನಮ್ಮವೆ ಎನ್ನುತ್ತಾರೆ. ಹೀಗೆ ಮುಂದುವರೆದರೆ ನಾವು ವಾಸಿಸಲು ಮನೆಗಳು ಇಲ್ಲದಂತೆ ಮಾಡಿ, ಇಡಿ ಊರನ್ನೇ ಖಾಲಿ ಮಾಡಿಸುತ್ತಾರೆ. ಹೀಗಾಗಿಯೇ ಮೊದಲು ಈ ವಕ್ಫ್‌ ಕಾಯ್ದೆಯನ್ನೇ ರದ್ದು ಮಾಡಬೇಕು ಎಂದು ನಮ್ಮ ಹೋರಾಟ ನಡೆದಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಲಿದೆ.ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ

ವಕ್ಫ್‌ ಲಿಸ್ಟ್ ನಲ್ಲಿರುವ ಪ್ರಮುಖ ತಾಣಗಳುಆದಿಲ್ ಶಾಹಿ ಕಾಲದ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ, ಜೋಡಗುಮ್ಮಟ, ಆಸರ್ ಮಹಲ್, ಜಾಮೀಯಾ ಮಸೀದಿ, ಉಪಲಿ ಬುರುಜ್, ಅಲಿರೋಜಾ, ಭುಕಾರಿ ಮಸಜೀದ್, ಮೆಹತರ್ ಮಹಲ್, ನೀರಿನ ಗಂಜ್ (ವಾಟರ್ ಟವರ್) ನಗರದ ಸುತ್ತ ಇರುವ ಕೋಟೆಗೋಡೆಗಳು ಸೇರಿದಂತೆ ಒಟ್ಟು 43 ಸ್ಮಾರಕಗಳನ್ನು ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಂತಿಮಗೊಳಿಸಿದೆ.