ಸಾರಾಂಶ
ಶರಾವತಿ ನದಿಯಿಂದ ನೀರನ್ನು ಒದಗಿಸುವ ಯೋಜನೆ ಇದಾಗಿದ್ದು, ಪುರಸಭೆಗೆ ಸೇರ್ಪಡೆ ಆಗಿರುವ ತಡಗಣಿ, ಬೆಲವಂತನಕೊಪ್ಪ, ಕ್ಯಾದಿಗೆಕೊಪ್ಪ ಸೇರಿದಂತೆ ಎಲ್ಲ ಗ್ರಾಮಗಳಿಗೆ ನೀರಿನ ಯೋಜನೆ ದೊರಕಲಿದೆ ಎಂದು ತಿಳಿಸಿದ್ದಾರೆ.ದೇಶಕ್ಕೆ ಸ್ವಾತಂತ್ರ್ಯ ಬಂದು ೧೦೦ ವರ್ಷ ತುಂಬುವ ವೇಳೆಗೆ ಈ ಯೋಜನೆಯ ಕಾರ್ಯ ಪೂಣರ್ಗೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದ್ದು, ಇದೊಂದು ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಶಿಕಾರಿಪುರ ಪುರಸಭೆ ಕುಡಿಯುವ ನೀರಿನ ಯೋಜನೆಗೆ ೧೦ ಕೋಟಿ ರು. ಸಹ ಮಂಜೂರಾಗಿದೆ.
ಒಪ್ಪಿಗೆ ನೀಡಿದ ಅರ್ಬನ್ ವಾಟರ್ ಸಪ್ಲೈ ಬೋರ್ಡ್: ಶಾಸಕ ಬಿ.ವೈ.ವಿಜಯೇಂದ್ರ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪಪಟ್ಟಣದ ಜನತೆಯಲ್ಲಿ ಯಾರೊಬ್ಬರೂ ಕೆರೆಕಟ್ಟೆ ನೀರು ಕುಡಿದು ಸಮಸ್ಯೆ ಆಗದಿರಲೆಂದು ಕೇಂದ್ರದ ಅಮೃತ್ ಯೋಜನೆ-೨ರ ಅಡಿ ₹೪೫ ಕೋಟಿ ಅನುದಾನಕ್ಕೆ ಅರ್ಬನ್ ವಾಟರ್ ಸಪ್ಲೈ ಬೋರ್ಡ್ ಒಪ್ಪಿಗೆ ನೀಡಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮಾಂತರದಲ್ಲಿ ಜಗಜೀವನ್ ಮಿಷನ್ ಅಡಿಯಲ್ಲಿ, ಹಾಗೆಯೇ ಅಮೃತ-೧ ನಲ್ಲಿ ಕಾರ್ಪೋರೇಷನ್ ಮಹಾನಗರ ಪಾಲಿಕೆಗೆ ಹಣ ದೊರಕುತ್ತದೆ. ಅಮೃತ -೨ರಲ್ಲಿ ಪುರಸಭೆಗಳಿಗೆ ದೊರಕುತ್ತದೆ. ಆ ಪ್ರಕಾರ ಶಿರಾಳಕೊಪ್ಪ ಪುರಸಭೆ ಆಗಿ ಪರಿವತರ್ನೆ ಆದ ಹಿನ್ನೆಲೆಯಲ್ಲಿ ಮುಂದಿನ ೨೫ ವರ್ಷಕ್ಕೆ ಯೋಜನೆ ರೂಪಿಸಲು ಹಣ ಮಂಜೂರಾಗಿದೆ.ಈ ಕಾಮಗಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಶೇ. ೫೦ರಷ್ಟು ಅನುದಾನ, ಶೇ. ೩೦ರಷ್ಟು ರಾಜ್ಯ ಸರ್ಕಾರದ ಅನುದಾನ, ಉಳಿದ ಶೇ. ೨೦ರಷ್ಟಕ್ಕೆ ಸ್ಥಳೀಯ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಶರಾವತಿ ನದಿಯಿಂದ ನೀರನ್ನು ಒದಗಿಸುವ ಯೋಜನೆ ಇದಾಗಿದ್ದು, ಪುರಸಭೆಗೆ ಸೇರ್ಪಡೆ ಆಗಿರುವ ತಡಗಣಿ, ಬೆಲವಂತನಕೊಪ್ಪ, ಕ್ಯಾದಿಗೆಕೊಪ್ಪ ಸೇರಿದಂತೆ ಎಲ್ಲ ಗ್ರಾಮಗಳಿಗೆ ನೀರಿನ ಯೋಜನೆ ದೊರಕಲಿದೆ ಎಂದು ತಿಳಿಸಿದ್ದಾರೆ.ದೇಶಕ್ಕೆ ಸ್ವಾತಂತ್ರ್ಯ ಬಂದು ೧೦೦ ವರ್ಷ ತುಂಬುವ ವೇಳೆಗೆ ಈ ಯೋಜನೆಯ ಕಾರ್ಯ ಪೂಣರ್ಗೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದ್ದು, ಇದೊಂದು ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಶಿಕಾರಿಪುರ ಪುರಸಭೆ ಕುಡಿಯುವ ನೀರಿನ ಯೋಜನೆಗೆ ೧೦ ಕೋಟಿ ರು. ಸಹ ಮಂಜೂರಾಗಿದೆ.
ಈ ಯೋಜನೆ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪನವರ ಕನಸಿನ ಯೋಜನೆ ಅಲ್ಲ, ಸಂಸದ ರಾಘವೇಂದ್ರ ಅವರ ಕನಸಿನ ಯೋಜನೆಯೂ ಅಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ ಎಂದು ತಿಳಿಸಿದರು. ಮಂಜೂರಾತಿ ನೀಡಿರುವ ಸರ್ಕಾರಕ್ಕೆ ಅಭಿನಂದನೆಗಳು ಎಂದರು.