ಚಿತ್ರಾಪು ಯುವಕ, ಯುವತಿ, ಮಹಿಳಾ ಮಂಡಲ 47ನೇ ವಾರ್ಷಿಕೋತ್ಸವ

| Published : Feb 20 2025, 12:48 AM IST

ಚಿತ್ರಾಪು ಯುವಕ, ಯುವತಿ, ಮಹಿಳಾ ಮಂಡಲ 47ನೇ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರಾಪು ಯುವಕ-ಯುವತಿ-ಮಹಿಳಾ ಮಂಡಲ ವಠಾರದಲ್ಲಿ ಚಿತ್ರಾಪು ಯುವಕ-ಯುವತಿ-ಮಹಿಳಾ ಮಂಡಲಗಳ 47ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು. 2023-24 ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಲ್ಕಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರ್ಗವಿ ಮಯ್ಯ ಯು.ಎನ್‌. (99.2%) ಯಶ್ವಿತ್ ಡಿ. ಕಾಂಚನ್ (97%) ರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಸಮೀಪದ ಚಿತ್ರಾಪು ಯುವಕ-ಯುವತಿ-ಮಹಿಳಾ ಮಂಡಲ ವಠಾರದಲ್ಲಿ ಚಿತ್ರಾಪು ಯುವಕ-ಯುವತಿ-ಮಹಿಳಾ ಮಂಡಲಗಳ 47ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಉಪಸ್ಥಿತರಿದ್ದರು. ಸಂಜೆ ಜರಗಿದ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಭಾರತ್ ಬ್ಯಾಂಕ್ ಮುಂಬೈಯ ನಿರ್ದೇಶಕ ನಿರಂಜನ್ ಲಕ್ಷ್ಮಣ್ ಪೂಜಾರಿ ವಹಿಸಿದ್ದರು.

ಮೂಲ್ಕಿ ನಗರ ಪಂಚಾಯಿತಿ ಸದಸ್ಯೆ ರಾಧಿಕಾ ಯಾಧವ ಕೋಟ್ಯಾನ್, ಚಿತ್ರಾಪು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಪೈ ಟಿ. ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಸವಿತಾ ಇದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯ ಪುರುಷೋತ್ತಮ್ ಕೆ.ಪಿ., ಉದ್ಯಮಿ, ಸಮಾಜ ಸೇವಕ, ಸಂಸ್ಥೆಯ ಮಹಾಪೋಷಕ ವಾಸು ಪೂಜಾರಿ ಚಿತ್ರಾಪು, ಕರಾಟೆ ಪಟು ಆಯುಷ್ ಸತೀಶ್ ಸುವರ್ಣ, 2023-24 ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಲ್ಕಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರ್ಗವಿ ಮಯ್ಯ ಯು.ಎನ್‌. (99.2%) ಯಶ್ವಿತ್ ಡಿ. ಕಾಂಚನ್ (97%) ರನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳ, ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಬಹುಮಾನ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಅನಾರೋಗ್ಯದ ಕ್ಯಾನ್ಸರ್ ಚಿಕಿತ್ಸೆಗಾಗಿ ಸವಿತ ಪೂಜಾರಿ ಅವರಿಗೆ ಸಹಾಯಧನ ನೀಡಲಾಯಿತು. ಅಧ್ಯಕ್ಷ ತುಷಾರ್ ಕರ್ಕೇರ ಸ್ವಾಗತಿಸಿದರು. ವಿನುತ ಶ್ರೀಯನ್ ವಂದಿಸಿದರು. ಸಾವಿತ್ರಿ ಪಿ ಭಟ್ ಮತ್ತು ಪ್ರಕಾಶ್ ಸಪಳಿಗ ಕಾರ್ಯಕ್ರಮ ನಿರೂಪಿಸಿದರು. ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.