ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 10, 14, 143 ಮಂದಿ ಮತದಾರರಿದ್ದು, 49,733 (ಶೇ 4.67) ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 10, 14, 143 ಮಂದಿ ಮತದಾರರಿದ್ದು, 49,733 (ಶೇ 4.67) ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ವಿಶೇಷ ಎಂದರೆ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಶೇ 4.90 ಪ್ರಮಾಣ ಇತರೆಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿಯೇ ಅತೀ ಕಡಿಮೆಯಾಗಿದೆ.ಈ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.ಎಸ್ಐಆರ್ ಪೂರ್ವ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 10,63,876 ಮತದಾರರಿದ್ದರು. ಪರಿಷ್ಕರಣೆಯ ನಂತರ 63,331 ಅನರ್ಹರನ್ನು ಕೈಬಿಟ್ಟು ಕರಡುಪಟ್ಟಿಯಲ್ಲಿ 10,00,545 ಮತದಾರರ ಹೆಸರುಗಳನ್ನು ಪ್ರಕಟಿಸಲಾಗಿತ್ತು.ನಂತರ ಕರಡುಪಟ್ಟಿಗೆ 17,334 ಮಂದಿ ಮತದಾರರು ತಮ್ಮ ಹೆಸರನ್ನು ಸೇರಿಸಿದ್ದರು, 3,736 ಮಂದಿ ಸ್ವಯಂ ತಮ್ಮ ಹೆಸರನ್ನು ತೆಗದುಹಾಕಿದ್ದರು. ಅಂತಿಮವಾಗಿ ಇದೀಗ 10,14,143 ಮಂದಿಮತದಾರರ ಹೆಸರು ಮತದಾರರ ಪಟ್ಟಿಯಲ್ಲಿದೆ.
ಕೈಬಿಟ್ಟಿರುವ 63,331 ಮತದಾರರಲ್ಲಿ 4,145 ಮಂದಿಯ ವಿವರಗಳು ಲಭ್ಯವಿಲ್ಲದೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಉಳಿದವರಲ್ಲಿ 29,361 ಬೇರೆ ಕಡೆ ವಲಸೆ ಹೋಗಿದ್ದಾರೆ. 21,262 ಮಂದಿ ಮೃತಪಟ್ಟಿದ್ದು, 8,374 ಮಂದಿ ನಕಲಿ ಅಥವಾ ಎರಡು ಕಡೆ ಮತದಾನದ ಹಕ್ಕನ್ನು ಹೊಂದಿದವರಾಗಿದ್ದರು, 189 ಮಂದಿ ಮಾಹಿತಿ - ದಾಖಲೆ ನೀಡಲೊಪ್ಪದವರು, ವಿದೇಶಿಯರು ಇನ್ನಿತರ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಅವರು ಜಿಲ್ಲೆಯ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಹಸ್ತಾಂತರಿಸಿದರು. ಕಾಂಗ್ರೆಸಿನ ಅಬ್ದುಲ್ ಅಝೀಝ್ ಹೆಜಮಾಡಿ ಹಾಗೂ ಬಿ. ವಿಜಯ ನಾಯರಿ, ಬಿ.ಜೆ.ಪಿ.ಯ ಚಂದ್ರಶೇಖರ ಪ್ರಭು ಮತ್ತು ಜೆ.ಡಿ.ಎಸ್.ನ ಜಯರಾಮ ಆಚಾರ್ಯ ಇದ್ದರು.ಏನ್ ಮಾಡ್ತಿರೋ ಮಾಡ್ಕೊಳ್ಳಿ ಎಂದರು... !ಜಿಲ್ಲೆಯಲ್ಲಿ 21 ಮಂದಿ ಮತದಾರರು ಎಸ್ಐಆರ್ ಸಿಬ್ಬಂದಿಗಳಿಗೆ ತಮ್ಮ ಯಾವುದೇ ಮಾಹಿತಿ - ದಾಖಲೆಗಳನ್ನು ಕೊಡುವುದಕ್ಕೆ ಒಪ್ಪಿಲ್ಲ, ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಅವರನ್ನು ಮೂರು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾಹಿತಿ ಕೊಡುವುದಿಲ್ಲ, ಅದೇನ್ ಮಾಡ್ಕೊಳ್ತಿರೋ ಮಾಡ್ಕೊಳ್ಳಿ ಎಂದೆಲ್ಲಾ ಮಾತನಾಡಿದ್ದಾರೆ. ಅಂತಿಮವಾಗಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಅವರು ಮುಂದೆ ಮತದಾನದಲ್ಲಿ ಭಾಗವಹಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ. ನೇಪಾಳಿಗರಿಗೂ ಇಲ್ಲಿ ಮತದಾನದ ಹಕ್ಕಿತ್ತು !
ಜಿಲ್ಲೆಯ ಮತದಾರರ ಪಟ್ಟಿಯಲ್ಲಿದ್ದ ಒಟ್ಟು 47 ಮಂದಿ ವಿದೇಶಿ ನಾಗರಿಕರನ್ನು ಕೈಬಿಡಲಾಗಿದೆ. ಅವರಲ್ಲಿ 37 ಮಂದಿ ನೇಪಾಳದಿಂದ ಭಾರತಕ್ಕೆ ಬಂದು ಗೂರ್ಖರಾಗಿ ಅಡುಗೆಯವರು ಮತ್ತು ಇತರ ಕಾರ್ಮಿಕರಾಗಿದ್ದಾರೆ. ಉಳಿದ 10 ಮೂಲತಃ ಭಾರತಿಯರೇ ಆಗಿದ್ದು, ಉದ್ಯೋಗ ನಿಮಿತ್ತ ಅಮೆರಿಕ, ಕೆನಡಾ, ಫ್ರಾನ್ಸ್ ಇನ್ನಿತರ ದೇಶಕ್ಕೆ ತೆರಳಿ ಅಲ್ಲಿನ ಪೌರತ್ವವನ್ನು ಹೊಂದಿದ್ದವರು, ಆದರೆ ಇಲ್ಲಿನ ಮತದಾರರ ಪಟ್ಟಿಯಲ್ಲಿಯೂ ಹೆಸರು ಉಳಿಸಿಕೊಂಡಿದ್ದವರು, ಅಂತಹವರ ಹೆಸರುಗಳನ್ನು ಮತದಾರರರ ಪಟ್ಟಿಯಿಂದ ಈ ಬಾರಿ ಕೈಬಿಡಲಾಗಿದೆ.