ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾರಂಭಕ್ಕೆ ತೇರದಾಳ ವಿಧಾನಸಭಾ ಕ್ಷೇತ್ರದ 5 ಸಾವಿರ ಅಭಿಮಾನಿಗಳು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಶಾಸಕರ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ಧೀಮಂತ, ರೈತ ಹಾಗೂ ನೇಕಾರ ನಾಯಕ ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ತೇರದಾಳ ಕ್ಷೇತ್ರದಿಂದ 5 ಸಾವಿರ ಜನ ಭಾಗವಹಿಸಲಿದ್ದಾರೆ ಎಂದರು.ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿವಿಧ ರಾಜ್ಯಗಳ ನಾಯಕರು ಹಾಗೂ ಮಠಾಧೀಶರು ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ಜನಸಾಮಾನ್ಯರ ಹಾಗೂ ರೈತರ ಬದುಕು ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.ಈ ವೇಳೆ ನಗರ ಬ್ಲಾಕ್ ಅಧ್ಯಕ್ಷ ಶ್ರೀಶೈಲ ಬೀಳಗಿ, ಪ್ರವೀಣ ನಾಡಗೌಡ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್, ಪ್ರಭು ಪೂಜಾರಿ, ಶಿವಾನಂದ ಗಾಯಕವಾಡ, ಸಂಜಯ ತೆಗ್ಗಿ, ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ವಿದ್ಯಾ ಪ್ರವೀಣ ದಭಾಡಿ, ಲಿಂಗರಾಜ ನಾಯಕ, ಪಿ.ಜಿ. ಕಾಖಂಡಕಿ, ಅಶೋಕ ರಾವಳ, ಶಿವು ಕಾಗಿ, ಶಿವಾನಂದ ಬುದ್ನಿ, ಪ್ರಭಾಕರ ಮೊಳೇದ, ಈಶ್ವರ ಕಾಡದೇವರ, ಈರಯ್ಯ ಪರಾಳಮಠ ಸೇರಿದಂತೆ ಅನೇಕರಿದ್ದರು.