ಸಾರಾಂಶ
ಪುರಸಭಾ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಅನೀಲ್ ಕುಮಾರ್ ಮೆನೆಜಸ್ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ, ತರೀಕೆರೆತರೀಕೆರೆ ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹5 ಕೋಟಿ ಮಂಜೂರಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಸೋಮವಾರ ಪಟ್ಟಣದ ಪುರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಅನೀಲ್ ಕುಮಾರ್ ಮೆನೆಜಸ್ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕೆಲವೇ ದಿನಗಳಲ್ಲಿ ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ಕ್ರೀಡಾಂಗಣ ಸಹ ಮಂಜೂರಿ ಹಂತದಲ್ಲಿದೆ. ನಗರದ ಅಭಿವೃದ್ಧಿಗೆ ಎಲ್ಲರೂ ಸಹ ಪಕ್ಷಾತೀತವಾಗಿ ಸಹಕರಿಸಬೇಕು. ಅದರೆ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ನಗರದ ಬಿ.ಎಚ್. ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಕೆಲವರು ಕಾಮಗಾರಿಗೆ ತಡೆಯೊಡ್ಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಮನಸ್ಸಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸದ್ಯದಲ್ಲಿಯೇ ಯುಜಿಡಿ ಮತ್ತು ಪುರಸಭಾ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ. ಪುರಸಭೆಯಲ್ಲಿ ಉತ್ತಮ ಆಡಳಿತ ನಡೆಯುತ್ತಿದ್ದು, ನಗರದಲ್ಲಿ ಎಲ್ಲೆಂದರಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಹಲವರಿಗೆ ಅನಾಹುತವಾಗಿದೆ. ಇವುಗಳನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಜರುಗಿಸಬೇಕೆಂದು ಸಲಹೆ ನೀಡಿದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಚ್.ಯು. ಫಾರೂಕ್ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಾ ಸಮಾಜದವರಿಗೂ ಸಮಾನ ಅವಕಾಶ ಕಲ್ಪಿಸಬೇಕೆಂಬ ಆಶಯದಂತೆ ನಮ್ಮ ಪಕ್ಷ ಬದ್ಧವಾಗಿದ್ದು, ಅದರಂತೆ ಇಂದು ತರೀಕೆರೆ ಪುರಸಭಾ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕ್ರಿಶ್ಚಿಯನ್ ಸಮುದಾಯದವರು ಸದಸ್ಯರಾಗಿದ್ದಾರೆ. ಇದರ ಜೊತೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬದ ಮುನ್ನಾ ದಿನದಂದು ಕ್ರಿಶ್ಚಿಯನ್ನರಿಗೆ ಕಾಂಗ್ರೆಸ್ ಉಡುಗೊರೆ ನೀಡಿದೆ ಎಂದರು. ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮಾ ಮಾತನಾಡಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಪಟ್ಟಣದಲ್ಲಿ ಬಿ.ಎಚ್. ರಸ್ತೆ ಅಭಿವೃದ್ಧಿ ₹34 ಕೋಟಿ ಗಳಲ್ಲಿ ಯುಜಿಡಿ ಯೋಜನೆ, ಬಸ್ ಸ್ಟ್ಯಾಂಡ್ ಮತ್ತು ಪಟ್ಟಣ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಕೂಡ ಮಂಜೂರಾಗಿದೆ ಎಂದು ತಿಳಿಸಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯ ಟಿ.ಜಿ.ಅಶೋಕ ಕುಮಾರ್, ಟಿ.ಎಂ.ಭೋಜರಾಜ್, ಟಿ.ಜಿ.ಶಶಾಂಕ, ಟಿ. ದಾದಾಪೀರ್, ಪರಮೇಶ್, ಟಿ.ಜಿ.ಲೋಕೇಶ್, ಕುಮಾರಪ್ಪ, ನಾಮಿನಿ ಸದಸ್ಯರಾದ ಟಿ.ಜಿ.ಮಂಜುನಾಥ್, ಅದಿಲ್ ಪಾಷ, ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ, ಹೇಮಲತ ರೇವಣ್ಣ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ ವಕೀಲರಾದ ಎಸ್.ಸುರೇಶ್ ಚಂದ್ರ, ಎಸ್.ಎನ್.ಮಲ್ಲೇಗೌಡ ಮತ್ತಿತರರು ಮಾತನಾಡಿದರು.ಪುರಸಭಾ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಅನೀಲ್ ಕುಮಾರ್ ಮೆನೆಜಸ್, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಪುರಸಭೆ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.23ಕೆಟಿಆರ್.ಕೆ.4ಃ
ತರೀಕೆರೆಯಲ್ಲಿ ಪುರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅನೀಲ್ ಕುಮಾರ್ ಮೆನೆಜಸ್ ಅವರನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿನಂದಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ,ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಚ್,ಯು.ಫಾರೂಕ್ ಇದ್ದರು.