ವಸತಿನಿಲಯಕ್ಕೆ 5 ಕೋಟಿ ರು. ಮಂಜೂರು: ದರ್ಶನಾಪುರ

| Published : Dec 04 2024, 12:30 AM IST

ಸಾರಾಂಶ

5 crores for the dormitory. Sanctioned: Darshanapur

-ಬಾಲಕರ ವಸತಿ ನಿಲಯ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ

----

ಕನ್ನಡಪ್ರಭ ವಾರ್ತೆ ಶಹಾಪುರ

ನಗರದಲ್ಲಿ ಬಾಲಕರ ವಸತಿ ನಿಲಯಕ್ಕಾಗಿ ಐದು ಕೋಟಿ ರು.ಗಳು ಮಂಜೂರಾಗಿದ್ದು, ಸ್ಥಳವನ್ನು ನಿಗದಿಪಡಿಸಿ ವಸತಿ ನಿಲಯವನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2024-25ನೇ ಸಾಲಿನಲ್ಲಿ ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ವಸತಿ ನಿಲಯಕ್ಕಾಗಿ ಐದು ಕೋಟಿ ರು.ಗಳು ಮಂಜೂರಾಗಿದ್ದು, ಅನುದಾನವನ್ನು ಶೀಘ್ರವೇ ಸದ್ಬಳಿಕೆ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರದಿಂದ ಬಡ ವಿದ್ಯಾರ್ಥಿಗಳಿಗಾಗಿ ಒಟ್ಟು 150 ವಸತಿ ನಿಲಯಗಳು ಮಂಜೂರಾಗಿವೆ. ಯಾದಗಿರಿ ಜಿಲ್ಲೆಗೆ 2 ವಸತಿ ನಿಲಯಗಳು ಮಂಜೂರಾಗಿದ್ದು, ಅದರಲ್ಲಿ ಶಹಾಪುರಕ್ಕೆ ಒಂದು ವಸತಿ ನಿಲಯವು ಮಂಜೂರಾಗಿದೆ. ಶಹಾಪುರದಲ್ಲಿ ಹಲವು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಅವುಗಳಿಗಾಗಿ ಸರ್ಕಾರದಿಂದ ಅನುದಾನ ಒದಗಿಸಿಕೊಂಡು ಸ್ವಂತ ಕಟ್ಟಡಗಳಿಗೆ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಚೆನ್ನಪ್ಪಗೌಡ ಚೌದ್ರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಶಿವರಾಜ ದೇಶಮುಖ, ಮಹೇಶ ಆನೇಗುಂದಿ, ಲಕ್ಷ್ಮಣ ಲಾಳಸೇರಿ ಸೇರಿದಂತೆ ಇತರರಿದ್ದರು.

-----

3ವೈಡಿಆರ್10: ಶಹಾಪುರ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2024-25ನೇ ಸಾಲಿನಲ್ಲಿ ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಉದ್ಘಾಟಿಸಿದರು.