ಹೊಸ ವರ್ಷಕ್ಕೆ ಐಪಿಎಸ್ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಸೇವಾ ಹಿರಿತನದ ಆಧಾರದ ಮೇರೆಗೆ ಐವರು ಡಿಐಜಿಗಳು ಹಾಗೂ 23 ಎಸ್‌ಪಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಕ್ಕೆ ಐಪಿಎಸ್ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಸೇವಾ ಹಿರಿತನದ ಆಧಾರದ ಮೇರೆಗೆ ಐವರು ಡಿಐಜಿಗಳು ಹಾಗೂ 23 ಎಸ್‌ಪಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ.

ಐಜಿಪಿ ಹುದ್ದೆಗೆ ಮುಂಬಡ್ತಿ:

ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ, ಬೆಂಗಳೂರು ಜಂಟಿ ಆಯುಕ್ತ (ಅಪರಾಧ) ಅಜಯ್ ಹಿಲೋರಿ ಅವರಿಗೆ ಐಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಇನ್ನು ಕೇಂದ್ರ ಸೇವೆಯಲ್ಲಿರುವ ಡಾ.ರಾಮ್ ನಿವಾಸ್ ಸೆಪಟ್‌, ಅನುಪಮ್ ಅಗರ್ವಾಲ್‌ ಹಾಗೂ ಡಾ.ರೋಹಿಣಿ ಕಟೋಚ್ ಸೆಪಟ್‌ ಅವರಿಗೆ ಐಜಿಪಿ ಸ್ಥಾನಕ್ಕೆ ಪದನ್ನೋತಿ ಸಿಕ್ಕಿದೆ.

ಡಿಐಜಿ ಹುದ್ದೆಗೆ ಮುಂಬಡ್ತಿ:

ಹಿರಿಯ ಎಸ್ಪಿಗಳಾದಡಾ.ಭೀಮಾಶಂಕರ್.ಎಸ್‌.ಗುಳೇದ್ (ಸಿಐಡಿ), ಇಲಾಕ್ಕಿಯಾ ಕರುಣಾಗರನ್‌ (ವೈರ್ ಲೆಸ್‌, ಡಾ.ಸಿ.ಬಿ.ವೇದಮೂರ್ತಿ (ಗುಪ್ತದಳ), ಕೆ.ಎಂ.ಶಾಂತಕುಮಾರ್ (ಐಎಸ್‌ಡಿ), ಹನುಮಂತರಾಯ (ಎಸ್‌ಎಚ್‌ಆರ್‌ಸಿ), ಡಿ.ದೇವರಾಜ್‌ (ತರಬೇತಿ), ಡಿ.ಆರ್.ಸಿರಿಗೌರಿ (ಲೋಕಾಯುಕ್ತ), ಡಾ.ಕೆ.ಧರಣಿದೇವಿ (ಗುಪ್ತದಳ), ಎಸ್.ಸವಿತಾ (ಗೃಹ ರಕ್ಷಕ ದಳ), ಸಿ.ಕೆ.ಬಾಬಾ (ಕೆಎಸ್‌ಆರ್‌ಪಿ), ಅಬ್ಡುಲ್‌ ಅಹದ್ (ಬಿಎಂಟಿಸಿ ವಿಚಕ್ಷಣಾ ದಳ), ಎಸ್‌.ಗಿರೀಶ್‌ (ಎಎನ್‌ಟಿಎಫ್‌), ಎಂ.ಪುಟ್ಟಮಾದಯ್ಯ (ಪ್ರಾಂಶುಪಾಲ ಪೊಲೀಸ್ ತರಬೇತಿ ಕೇಂದ್ರ ಕಲುಬರಗಿ), ಟಿ.ಶ್ರೀಧರ್‌ (ಡಿಜಿಪಿ ಕಚೇರಿ), ಎ.ಎನ್.ಪ್ರಕಾಶ್ ಗೌಡ (ವಿಶೇಷ ಕಾರ್ಯಪಡೆ), ಜಿತೇಂದ್ರ ಕಣಗಾವಿ (ಕಾರಾಗೃಹ ಇಲಾಖೆ), ಜಿ.ಕೆ.ರಶ್ಮಿ (ರೈಲ್ವೆ), ಟಿ.ಪಿ.ಶಿವಕುಮಾರ್‌ (ಎಸ್‌ಸಿಆರ್‌ಬಿ), ಎನ್‌.ವಿಷ್ಣುವರ್ಧನ್ (ನಿರ್ದೇಶಕ ಕೆಪಿಎ ಮೈಸೂರು), ಡಾ.ಎಂ.ಸಂಜೀವ್ ಪಾಟೀಲ್ (ಡಿಐಜಿ ಕಚೇರಿ), ಕೆ.ಪರಶುರಾಮ್ (ಆಯುಕ್ತ ಸಂಚಾರ ಮತ್ತು ರಸ್ತೆ ಸುರಕ್ಷತೆ), ಎಚ್‌.ಡಿ.ಆನಂದ್ ಕುಮಾರ್ (ಸೈಬರ್ ಕಮಾಂಡ್‌), ಕಲಾ ಕೃಷ್ಣಸ್ವಾಮಿ (ಡಿಜಿಪಿ ಕಚೇರಿ), ಕೇಂದ್ರ ಸೇವೆಯಲ್ಲಿರುವ ರಾಹುಲ್‌ ಕುಮಾರ್ ಶಹಾಪುರವಾಡ್‌, ಜಿ.ರಾಧಿಕಾ, ನಿಕ್ಕಂ ಪ್ರಕಾಶ್ ಅಮೃತ್‌, ಧರ್ಮೇಂದ್ರ ಕುಮಾರ್ ಮೀನಾ ಹಾಗೂ ಎಂ.ಅಶ್ವಿನಿ ಅವರಿಗೆ ಮುಂಬಡ್ತಿ ಸಿಕ್ಕಿದೆ.

ಎಸ್ಪಿಗಳ ವರ್ಗಾವಣೆ:

ಎಂ.ವಿ.ಚಂದ್ರಕಾಂತ್ (ಬೆಂಗಳೂರು ಗ್ರಾಮಾಂತರ), ಎಂ.ಎಸ್‌.ಮೊಹಮ್ಮದ್‌ ಸುಜೀತಾ (ಡಿಸಿಪಿ ಆಗ್ನೇಯ ವಿಭಾಗ ಬೆಂಗಳೂರು), ಎಂ.ಮುತ್ತುರಾಜು (ಚಾಮರಾಜನಗರ), ಸಾರಾ ಫಾತಿಮಾ (ರೈಲ್ವೆ), ಅರುಣಾಂಗ್ಷು (ಬೀದರ್‌), ಜಿ.ಕೆ.ಮಿಥುನ್ ಕುಮಾರ್ (ಡಿಸಿಪಿ ನೈರುತ್ಯ ವಿಭಾಗ ಬೆಂಗಳೂರು), ಎನ್‌.ಯತೀಶ್ (ಡಿಸಿಪಿ ಪಶ್ಚಿಮ ಬೆಂಗಳೂರು), ಸೈದುಲ್‌ ಅಡವಾತ್ (ಡಿಸಿಪಿ ವೈಟ್‌ಫೀಲ್ಡ್‌ ವಿಭಾಗ ಬೆಂಗಳೂರು), ಮಲ್ಲಿಕಾರ್ಜುನ್‌ ಬಾಲದಂಡಿ (ಮೈಸೂರು), ಪವನ್ ನಿಜ್ಜುರ್‌ (ಬಳ್ಳಾರಿ), ಡಾ.ವಿ.ಜೆ.ಶೋಭರಾಣಿ (ಮಂಡ್ಯ), ಡಾ.ಬಿ.ಟಿ.ಕವಿತಾ (ಸಿಐಡಿ), ಬಿ.ನಿಖಿಲ್ (ಶಿವಮೊಗ್ಗ), ಕೆ.ರಾಮರಾಜನ್‌ (ಬೆಳಗಾವಿ), ಕನಿಕಾ ಸಿಕ್ರಿವಾಲ್ (ಕೋಲಾರ), ಶುಭಾನ್ವಿತಾ (ಹಾಸನ), ಅಮಠೆ ವಿಕ್ರಂ (ಡಿಸಿಪಿ ಪೂರ್ವ ವಿಭಾಗ), ವಿ.ಜೆ.ಸಜೀತ್ (ಐಎಸ್‌ಡಿ), ಜಿತೇಂದ್ರ ಕುಮಾರ್ ದಯಮಾ (ಚಿಕ್ಕಮಗಳೂರು), ಡಾ.ಹರ್ಷ ಪ್ರಿಯಂವದ (ಸಿಐಡಿ), ಶಾಲೂ (ಸಿಐಡಿ), ಆರ್‌.ಎನ್‌.ಬಿಂದುರಾಣಿ (ಕೊಡಗು), ಸ್ಯಾಮ್‌ ವರ್ಗೀಸ್‌ (ಸಿಐಡಿ).

7 ಐಎಎಸ್‌ ವರ್ಗ: ಐವರಿಗೆ ಹೆಚ್ಚುವರಿ ಹುದ್ದೆ:

ಹೊಸ ವರ್ಷದ ಸಂದರ್ಭದಲ್ಲೇ ಸರ್ಕಾರ ಕೆಲ ಐಎಎಸ್‌ ಅಧಿಕಾರಿಗಳ ಸ್ಥಾನ ಪಲ್ಲಟ ಮಾಡಿದೆ. ಶಿಲ್ಪಾ ನಾಗ್‌, ಗುರುದತ್‌ ಹೆಗಡೆ ಸೇರಿ ಏಳು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನು ಕೆಲವರಿಗೆ ಹೆಚ್ಚುವರಿ ಹುದ್ದೆಗಳ ಹೊಣೆಯನ್ನೂ ವಹಿಸಲಾಗಿದೆ.

ಚಾಮರಾನಗರ ಜಿಲ್ಲಾಧಿಕಾರಿಯಾಗಿದ್ದ ಶಿಲ್ಪಾ ನಾಗ್‌ ಅವರನ್ನು ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆ ಆಯುಕ್ತರಾಗಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್‌. ಅವರನ್ನು ಪೌರಾಡಳಿತ ನಿರ್ದೇಶಕ ಹುದ್ದೆಗೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರನ್ನು ಕಂದಾಯ ಆಯುಕ್ತರ (ಕಂದಾಯ, ಎಲ್‌ಏಕ್ಯು, ಆರ್‌ ಆ್ಯಂಡ್‌ ಆರ್‌ ಮತ್ತು ಸಾಮಾಜಿಕ ಭದ್ರತೆ) ಸ್ಥಾನಕ್ಕೆ, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್‌ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರಾಗಿ, ತುಮಕೂರು ಜಿಪಂ ಸಿಇಒ ಪ್ರಭು ಜಿ. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಎಂ.ಡಿ. ನಾಗರಾಜ ಎನ್‌.ಎಂ. ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ, ಶ್ರೀರೂಪಾ ಅವರನ್ನು ಚಾಮರಾನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಉಳಿದಂತೆ ಪಂಚಾಯತ್‌ ರಾಜ್‌ ಆಯುಕ್ತೆ ಆರುಂದತಿ ಚಂದ್ರಶೇಖರ್‌ ಅವರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತ ಹುದ್ದೆ, ವಿತ್ತೀಯ ಕಾರ್ಯನೀತಿ ಸಂಸ್ಥೆ ಹೆಚ್ಚುವರಿ ನಿರ್ದೇಶಕ ರವಿಕುಮಾರ್‌ ಎಂ.ಆರ್‌. ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತ ಹುದ್ದೆ, ಕೃಷಿ ಆಯುಕ್ತ ಪಾಟೀಲ್‌ ಯಲಗೌಡ ಶಿವನಗೌಡ ಅವರಿಗೆ ತೋಟಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ನಿರ್ದೇಶಕ ಹುದ್ದೆ, ರಾಷ್ಟ್ರೀಯ ಜೀವನೋಪಾಯ ಮಿಷನ್‌ ಡೈರೆಕ್ಟರ್‌ ಸ್ನೇಹಲ್‌ ಆರ್‌. ಅವರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಎಂ.ಡಿ. ಸ್ಥಾನ, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರಿಗೆ ತುಮಕೂರು ಜಿಪಂ ಸಿಇಒ ಹುದ್ದೆ, ಶಿಲ್ಪಾನಾಗ್‌ ಅವರಿಗೆ ರೇಷ್ಮೆ ಆಯುಕ್ತರು ಮತ್ತು ನಿರ್ದೇಶಕ ಹುದ್ದೆ, ಗುರುದತ್‌ ಅವರಿಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಎಂ.ಡಿ. ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿ ಸರ್ಕಾರ ಆದೇಶಿಸಿದೆ.