ಸಾರಾಂಶ
ಪಟ್ಟಣದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿಯಡಿ ಆಸ್ತಿ ಮಾಲೀಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿ ಮಾಡಿ, ನಿಗದಿತ ಆಸ್ತಿ ತೆರಿಗೆಯ ಮೇಲೆ ಶೇ.5 ಪರ್ಸೆಂಟ್ ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಹೇಳಿದ್ದಾರೆ.
- ಚನ್ನಗಿರಿ ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಸಲಹೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿಯಡಿ ಆಸ್ತಿ ಮಾಲೀಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿ ಮಾಡಿ, ನಿಗದಿತ ಆಸ್ತಿ ತೆರಿಗೆಯ ಮೇಲೆ ಶೇ.5 ಪರ್ಸೆಂಟ್ ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಹೇಳಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್‌ನಲ್ಲಿ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಿರಿ ಹೆಸರಿನ ಕಾರ್ಯಕ್ರಮಕ್ಕೆ ಚಾಲನೆ ಬಳಿಕ, ಆಸ್ತಿ ಮಾಲೀಕರಿಗೆ ತೆರಿಗೆ ಪಾವತಿಯ ಚಲನ್ ವಿತರಿಸಿ ಅವರು ಮಾತನಾಡಿದರು.
ಪುರಸಭೆ ವತಿಯಿಂದ ಪಟ್ಟಣದ ನಾಗರೀಕರಿಗೆ ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಫಿಸಿಕೊಡಲಾಗಿದೆ. ಸಕಾಲದಲ್ಲಿ ತೆರಿಗೆ ಪಾವತಿ ಮಾಡಿ ಪಟ್ಟಣದ ಅಭಿವೃದ್ಧಿಗೆ ಜನರು ಸಹಕರಿಸಬೇಕು ಎಂದರು.ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ, ಪುರಸಭೆ ಕಚೇರಿಯಲ್ಲಿ ಸಾರ್ವಜನಿಕರು ಫೋನ್ ಫೇ, ಗೂಗಲ್ ಪೇ, ಪೇಟಿಎಂ, ಪೋಸ್ಟಲ್ ಬ್ಯಾಂಕ್ ಆ್ಯಪ್ ಹಾಗೂ ಯುಪಿಐ ಆ್ಯಪ್‌ಗಳ ಮೂಲಕ ಆಸ್ತಿ ತೆರಿಗೆ ಹಾಗೂ ಇತರೆ ತೆರಿಗೆಗಳನ್ನು ಪಾವತಿ ಮಾಡಬಹುದು ಎಂದರು.
ಸಾರ್ವಜನಿಕರು ಪುರಸಭೆ ಸಿಬ್ಬಂದಿಗಾಗಲಿ, ಬೇರೆ ಯಾರಿಗೇ ಆಗಲಿ ಕಂದಾಯ ಕಟ್ಟುವ ಹಣವನ್ನು ನೀಡಬಾರದು. ಆಸ್ತಿ ಮಾಲೀಕರೇ ಖುದ್ದಾಘಿ ನಗದುರಹಿತ, ಸರಳವಾದ ಆನ್ ಲೈನ್ ವ್ಯವಸ್ಥೆಯಡಿ ಪುರಸಭೆಯ ಕಚೇರಿಯಲ್ಲಿಯೇ ತೆರಿಗೆ ಹಣ ಪಾವತಿ ಮಾಡಬಹುದಾಗಿದೆ. ಈ ಮಾಹಿತಿ ತಿಳಿಯದೇ ಆಸ್ತಿ ಮಾಲೀಕರು ಬೇರೆ ಯಾರಿಗಾದರೂ ನಗದು ನೀಡಿ, ತೆರಿಗೆ ಪಾವಿಸಿದ್ದೇವೆ ಎಂದು ತಪ್ಪು ಭಾವಿಸಿದರೆ ಅದಕ್ಕೆ ಪುರಸಭೆ ಜವಾಬ್ದಾರಿ ಆಗುವುದಿಲ್ಲ ಎಂದೂ ಎಚ್ಚರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ವ್ಯವಸ್ಥಾಪಕ ಆರಾಧ್ಯ, ಕೃಷ್ಣಪ್ಪ, ಪುರಸಭೆಯ ಸದಸ್ಯ ನಂಜುಂಡಪ್ಪ, ಪಾರಿ ಪರಮೇಶ್, ಕುಬೇಂದ್ರೋಜಿ ರಾವ್, ಪ್ರಕಾಶ್, ಪಂಚಾಕ್ಷರಿ, ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.
- - --1ಕೆಸಿಎನ್‌ಜಿ1.ಜೆಪಿಜಿ:
ಚನ್ನಗಿರಿ ಪುರಸಭಾ ಸಭಾಂಗಣದಲ್ಲಿ 2025-26ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಚಾಲನೆ ನೀಡಿದರು.