ಸಾರಾಂಶ
ಚನ್ನಗಿರಿ ತಾಲೂಕಿನಲ್ಲಿ ಉತ್ತಮವಾದ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ತಾಲೂಕಿನಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ
- ಮನೆಗಳು ಹಾನಿಗೊಳಗಾದ ಎಲ್ಲ ಗ್ರಾಮಗಳಿಗೂ ಕಂದಾಯ ಇಲಾಖೆ ಭೇಟಿ- - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ತಾಲೂಕಿನಲ್ಲಿ ಉತ್ತಮವಾದ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ತಾಲೂಕಿನಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ. ಕಳೆದೊಂದು ವಾರದಿಂದ ತಾಲೂಕಿನಲ್ಲಿ ಜಡಿಮಳೆ ಆರಂಭವಾಗಿದೆ. ಕಗತೂರು ಗ್ರಾಮದ ಶಂಕರಪ್ಪ ಎಂಬವರ ವಾಸದ ಮನೆಗೆ ಭಾಗಶಃ ಹಾನಿಯಾದರೆ, ಕೆರೆಬಿಳಚಿ ಗ್ರಾಮದಲ್ಲಿ ಜಮೀರ್ ಖಾನಂ ಎಂಬವರ ಮನೆ ಬಿದ್ದಿದೆ. ಬಸವಾಪಟ್ಟಣದಲ್ಲಿ ನೇತ್ರಾಬಾಯಿ ಎಂಬವರ ವಾಸದ ಮನೆ ಮಹಡಿಯ ಗೋಡೆ ಬಿದ್ದಿದೆ. ಚಿಕ್ಕೂಲಿಕೆರೆ ಗ್ರಾಮದಲ್ಲಿ ರಾಮಪ್ಪ ಎಂಬವರ ವಾಸದ ಮನೆಯ ಮೇಲ್ಚಾವಣಿ ಕುಸಿದಿದೆ ಎಂದಿದ್ದಾರೆ.ಸೋಮಲಾಪುರ ಮತ್ತು ಕೊಂಡದಹಳ್ಳಿಯಲ್ಲಿ ಒಂದೊಂದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮನೆಗಳು ಹಾನಿಗೊಳಗಾದ ಎಲ್ಲ ಗ್ರಾಮಗಳಿಗೂ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಕಳಿಸಿ, ಪರಿಸ್ಥಿತಿ ಪರಿಶೀಲಿಸಿ ಮಾಹಿತಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ 9 ಮಳೆ ಮಾಪನ ಕೇಂದ್ರಗಳಿಂದ ಜು.15ರಂದು ದಾಖಲಾದ ಮಳೆಯ ಪ್ರಮಾಣ ಚನ್ನಗಿರಿ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 26.4 ಮೀ.ಮೀ. ಮಳೆಯಾಗಿದ್ದರೆ, ದೇವರಹಳ್ಳಿ 24.6, ಕತ್ತಲಗೆರೆ 31.0, ತ್ಯಾವಣಿಗೆ 20.0, ಬಸವಾಪಟ್ಟಣದಲ್ಲಿ 38.4, ಜೋಳದಾಳ್‌ನಲ್ಲಿ 32.2 ಸಂತೆಬೆನ್ನೂರಿನಲ್ಲಿ 14.0, ಉಬ್ರಾಣಿಯಲ್ಲಿ 50.2, ಕೆರೆಬಿಳಚಿಯಲ್ಲಿ 10.6 ಮಿ.ಮೀ. ಮಳೆಯಾಗಿದೆ. ಒಟ್ಟು 247.4 ಮಿ.ಮೀ. ಮಳೆಯಾಗಿದೆ ಎಂದು ತಿಳಿಸಿದ್ದಾರೆ.- - - -16ಕೆಸಿಸಿಎನ್‌ಜಿ1:
ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ರಾಮಪ್ಪ ಎಂಬವರ ವಾಸದ ಮನೆ ಮೇಲ್ಚಾವಣಿ ಕುಸಿದಿದೆ.