ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ಪೊಲೀಸರು ಮತ್ತು ಕ್ರೀಡಾಪಟುಗಳು 5 ಕಿ.ಮೀ. ವಾಕಥಾನ್ ನಲ್ಲಿ ಪಾಲ್ಗೊಂಡರು.ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಆರಂಭವಾದ ವಾಕಥಾನ್ ಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಚಾಲನೆ ನೀಡಿದರು.ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಆರಂಭವಾದ ಈ ಓಟದಲ್ಲಿ ಮೈಸೂರು ನಗರವನ್ನು ಅಪರಾಧ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ವಾಕಥಾನ್ ನಡೆಯಿತು.ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗ ತೊಡಗಿದೆ. ಪ್ರತಿನಿತ್ಯ ಹಲವು ದೂರುಗಳು ಕೇಳಿ ಬರುತ್ತಿದೆ. ಆದ್ದರಿಂದ ಆನ್ ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಿವಿಮಾತು ಹೇಳಿದರು.ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಅಪರಾಧ ಕುರಿತು ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದರು.ವಾಕಥಾನ್ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಜೆ.ಎಲ್.ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ಹೌಸ್, ಹಾರ್ಡಿಂಗ್ ವೃತ್ತದ ಮೂಲಕ ಮತ್ತೆ ದೇವಸ್ಥಾನ ತಲುಪಿ ಸಮಾಪ್ತಿಗೊಂಡಿತು.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಂ. ಮುತ್ತುರಾಜ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್. ಜಾಹ್ನವಿ, ಎಸಿಪಿಗಳಾದ ಸಿ.ಕೆ. ಅಶ್ವಥನಾರಾಯಣ, ಜಿ.ಎಸ್. ಗಜೇಂದ್ರಪ್ರಸಾದ್, ಪರಶುರಾಮಪ್ಪ, ಇನ್ ಸ್ಪೆಕ್ಟರ್ಗಳು, ಎಸ್ಐಗಳು ಮತ್ತು ಸಿಬ್ಬಂದಿ ಈ ವಾಕಥಾನ್ ನಲ್ಲಿ ಪಾಲ್ಗೊಂಡಿದ್ದರು.