ರಾಮನಗರ: ಜಾನಪದ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ನಾಡೋಜ ಡಾ.ಎಚ್.ಎಲ್.ನಾಗೇಗೌಡರವರ ಹೆಸರಿನಲ್ಲಿ 5 ಲಕ್ಷ ಮೊತ್ತದ ವಾರ್ಷಿಕ ಪ್ರಶಸ್ತಿ ಸ್ಥಾಪಿಸಿ, ಪ್ರದಾನ ಮಾಡಬೇಕು ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

ರಾಮನಗರ: ಜಾನಪದ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ನಾಡೋಜ ಡಾ.ಎಚ್.ಎಲ್.ನಾಗೇಗೌಡರವರ ಹೆಸರಿನಲ್ಲಿ

5 ಲಕ್ಷ ಮೊತ್ತದ ವಾರ್ಷಿಕ ಪ್ರಶಸ್ತಿ ಸ್ಥಾಪಿಸಿ, ಪ್ರದಾನ ಮಾಡಬೇಕು ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ವಿದ್ಯಾರ್ಥಿ ಜಾನಪದ ಲೋಕೋತ್ಸವದಲ್ಲಿ ಭಾನುವಾರ ಯುವಜನರಲ್ಲಿ ಜನಪದ ಗಾಯನ ಮತ್ತು ಕಲೆಗಳ ಸಂವರ್ಧನೆ ಕುರಿತ ಚರ್ಚೆ - ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ನಾಡೋಜ ಸಿದ್ದಲಿಂಗಯ್ಯ ಹೆಸರಿನಲ್ಲಿ 5 ಲಕ್ಷ ಮೊತ್ತದ ಪ್ರಶಸ್ತಿ ನೀಡುತ್ತಾ ಬಂದಿದೆ. ಅದೇ ಮಾದರಿಯಲ್ಲಿ ಜಾನಪದ ವಿದ್ವಾಂಸರಾದ ಎಚ್.ಎನ್.ನಾಗೇಗೌಡರ ಹೆಸರಿನಲ್ಲಿಯೂ 5 ಲಕ್ಷ ಮೊತ್ತದ ವಾರ್ಷಿಕ ಪ್ರಶಸ್ತಿ ನೀಡಿದರೆ ಅದಕ್ಕೊಂದು ಮಾನ್ಯತೆ ಸಿಗುತ್ತದೆ ಎಂದರು.

ಎಚ್.ಎಲ್.ನಾಗೇಗೌಡರು ಜಾನಪದ ಕ್ಷೇತ್ರ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ಕೊಡುಗೆ ನೀಡಿ ಶ್ರೀಮಂತಗೊಳಿಸಿದವರು. ಇಂತಹ ಮಹಾನ್ ವ್ಯಕ್ತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಕೊಡಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮಾತನಾಡಿದರು. ಡಾ.ಅಪ್ಪಗೆರೆ ತಿಮ್ಮರಾಜು, ಡಾ.ಸಿ.ಬಸವಲಿಂಗಯ್ಯ, ಡಾ.ವೇಮಗಲ್ ನಾರಾಯಣಸ್ವಾಮಿ, ಡಾ.ಸಿರಿಗಂಧ ಶ್ರೀನಿವಾಸ ಮೂರ್ತಿ, ಎಚ್.ಆರ್.ಸುಜಾತ, ಸು.ತ.ರಾಮೇಗೌಡ, ಡಾ.ವಿಜಯಲಕ್ಷ್ಮಿ ಮಾನಪುರ ಸೇರಿದಂತೆ ಹಲವು ಸಂವಾದಲ್ಲಿ ಪಾಲ್ಗೊಂಡಿದ್ದರು.

8ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಜಾನಪದ ಲೋಕೋತ್ಸವದಲ್ಲಿ ಭಾನುವಾರ ಯುವಜನರಲ್ಲಿ ಜನಪದ ಗಾಯನ ಮತ್ತು ಕಲೆಗಳ ಸಂವರ್ಧನೆ ಕುರಿತ ಚರ್ಚೆ - ಸಂವಾದ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.