ಬಳ್ಳಾರಿ: ಇತ್ತೀಚೆಗೆ ನಿಧನರಾದ ಹಿರಿಯ ಚಿತ್ರಕಲಾವಿದ ಸ್ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೋವಿಂದವಾಡ ಅವರ ಕುಟುಂಬಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅವರಿಂದ ₹5 ಲಕ್ಷ ಚೆಕ್ ವಿತರಣೆ ಮಾಡಲಾಯಿತು.

ಮಂಜುನಾಥ ಗೋವಿಂದವಾಡ ಅವರ ತಾಯಿ ಸರ್ವಮಂಗಳಾ, ಪತ್ನಿ ಭಾವನಾ ಹಾಗೂ ಪುತ್ರಿ ತೃಪ್ತಿಶ್ರೀ ಚೆಕ್ ಸ್ವೀಕರಿಸಿದರು. ಚೆಕ್ ವಿತರಣೆ ಮಾಡಿದ ನಾರಾ ಪ್ರತಾಪ ರೆಡ್ಡಿ ಅವರು ಮಂಜುನಾಥ ಗೋವಿಂದವಾಡ ಅವರ ಚಿತ್ರಕಲಾ ಸೇವೆಯನ್ನು ಸ್ಮರಿಸಿದರಲ್ಲದೆ, ಗೋವಿಂದವಾಡ ಅವರ ನಿಧನದಿಂದ ಬಳ್ಳಾರಿ ಜಿಲ್ಲೆಗೆ ಅಪಾರ ನಷ್ಟವಾಗಿದೆ. ಅಪರೂಪದ ಚಿತ್ರಕಲಾವಿದನನ್ನು ಕಳೆದುಕೊಂಡಂತಾಗಿದೆ. ಸ್ಯಾಂಡ್ ಆರ್ಟ್ ಕಲೆಯಲ್ಲಿ ಪರಿಣಿತರಾಗಿದ್ದ ಮಂಜುನಾಥ ಗೋವಿಂದವಾಡ ಅವರು ಅನೇಕ ಚಿತ್ರಕಲೆಗಳನ್ನು ರೂಪಿಸಿ ಹೆಸರು ಮಾಡಿದ್ದರು. ಹಂಪಿ ಉತ್ಸವದ ವೇದಿಕೆಗಳನ್ನು ನಿರ್ಮಿಸಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದರು. ತಮ್ಮ ಇಡೀ ಬದುಕನ್ನು ಚಿತ್ರಕಲೆಗೆ ಮೀಸಲಾಗಿರಿಸಿದ್ದ ಮಂಜುನಾಥ ಗೋವಿಂದವಾಡ ಅವರು ಚಿತ್ರಕಲಾ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಸ್ಮರಿಸಿದರಲ್ಲದೆ, ಮೃತ ಮಂಜುನಾಥ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಹಾರೈಸಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಕಲಾವಿದರಾದ ಅಂಬರೇಷ, ಸುಬ್ಬಣ್ಣ, ಹುಲುಗಪ್ಪ, ವೀರೇಶ ದಳವಾಯಿ, ಜಯಣ್ಣ ಮತ್ತಿತರರಿದ್ದರು.17ಬಿಆರ್‌ವೈ3

ಇತ್ತೀಚೆಗೆ ನಿಧನರಾದ ಹಿರಿಯ ಚಿತ್ರಕಲಾವಿದ ಸ್ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೋವಿಂದವಾಡ ಅವರ ಕುಟುಂಬಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅವರಿಂದ 5 ಲಕ್ಷ ರು.ಗಳ ಚೆಕ್ ವಿತರಣೆ ಮಾಡಲಾಯಿತು.