ಬೀದಿನಾಯಿ ದಾಳಿಗೆ ಬಲಿಯಾದ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ

| Published : Jul 27 2025, 12:00 AM IST

ಬೀದಿನಾಯಿ ದಾಳಿಗೆ ಬಲಿಯಾದ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಹಣದ ಅನುದಾನದಡಿ ಬಾಲಕಿ ಕುಟುಂಬದ ತಂದೆ- ತಾಯಿಗೆ 5 ಲಕ್ಷ ರು. ಪರಿಹಾರ ನೀಡಲಾಗಿದೆ. ಕಡು ಬಡತನ ಹಾಗೂ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ಇವರು, ಕಿವುಡ ಮತ್ತು ಮೂಕ ಪೋಷಕರಾಗಿದ್ದು, ಇವರಿಗೆ ಮತ್ತೊಬ್ಬ ಪುತ್ರಿಯಿದ್ದು ಅನುಕೂಲವಾಗಲೆಂದು ಪರಿಹಾರ ನೀಡಲಾಗಿದೆ.

ತಿಪಟೂರು: ಕಳೆದ ಎರಡು ತಿಂಗಳ ಹಿಂದೆ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಬಾವಿ ಗ್ರಾಮದಲ್ಲಿ ಬೀದಿನಾಯಿಯ ಭೀಕರ ದಾಳಿಗೆ ಬಲಿಯಾಗಿದ್ದ ಆರು ವರ್ಷದ ಬಾಲಕಿ ನವ್ಯಾ ಕುಟುಂಬಕ್ಕೆ ಪರಿಹಾರದ ಮೊತ್ತವಾಗಿ 5 ಲಕ್ಷ ರು.ಗಳ ಚೆಕ್‌ನ್ನು ಶಾಸಕ ಕೆ. ಷಡಕ್ಷರಿ ವಿತರಣೆ ಮಾಡಿದರು. ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಚೆಕ್ ವಿತರಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಹಣದ ಅನುದಾನದಡಿ ಬಾಲಕಿ ಕುಟುಂಬದ ತಂದೆ- ತಾಯಿಗೆ 5 ಲಕ್ಷ ರು. ಪರಿಹಾರ ನೀಡಲಾಗಿದೆ. ಕಡು ಬಡತನ ಹಾಗೂ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ಇವರು, ಕಿವುಡ ಮತ್ತು ಮೂಕ ಪೋಷಕರಾಗಿದ್ದು, ಇವರಿಗೆ ಮತ್ತೊಬ್ಬ ಪುತ್ರಿಯಿದ್ದು ಅನುಕೂಲವಾಗಲೆಂದು ಪರಿಹಾರ ನೀಡಲಾಗಿದೆ. ಈಗಾಗಲೇ ತಾಲೂಕು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ನಗರಸಭೆ, ತಾಲೂಕು ಪಂಚಾಯಿತಿ, ಪಶು ಇಲಾಖೆಗಳು ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದರು. ತಾಪಂ ಇಒ ಸುದರ್ಶನ್, ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಮತ್ತಿಹಳ್ಳಿ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಸಿಬ್ಬಂದಿ ಹೇಮಣ್ಣ, ಮೃತ ಬಾಲಕಿ ತಂದೆ ಮಹಲಿಂಗಯ್ಯ, ತಾಯಿ ಭಾಗ್ಯಮ್ಮ ಮತ್ತಿತರರಿದ್ದರು.