ಗಂಗಾವತಿ ತಾತನ ಜಾತ್ರೆಗೆ ಕಾರಟಗಿ ಭಕ್ತರಿಂದ ೫ ಕ್ವಿಂಟಲ್ ಬೂಂದಿಲಾಡು

| Published : Jan 11 2025, 12:45 AM IST

ಗಂಗಾವತಿ ತಾತನ ಜಾತ್ರೆಗೆ ಕಾರಟಗಿ ಭಕ್ತರಿಂದ ೫ ಕ್ವಿಂಟಲ್ ಬೂಂದಿಲಾಡು
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ಶ್ರೀ ಚನ್ನಬಸವಸ್ವಾಮಿ ತಾತನ ಜಾತ್ರೆಗೆ ಕಾರಟಗಿ ಪಟ್ಟಣದ ಭಕ್ತರು ಸಂಗ್ರಹಿಸಿದ ದವಸ-ಧಾನ್ಯ, ಇತರ ಪದಾರ್ಥಗಳನ್ನು ಶ್ರೀಮಠಕ್ಕೆ ಗುರುವಾರ ಕಳುಹಿಸಿ ಕೊಡಲಾಯಿತು. ಈ ವರ್ಷ ೫ ಕ್ವಿಂಟಲ್ ೩೧ ಕೆಜಿ ಬೂಂದಿ ಲಾಡು, ೫೦೦ ರೊಟ್ಟಿ ಮತ್ತು ಬಾಳೆಹಣ್ಣಿನ ಗೊನೆ ಕಳುಹಿಸಲಾಗಿದೆ.

ಕಾರಟಗಿ: ಭತ್ತದ ಕಣಜದ ಜನರ ಆರಾಧ್ಯದೈವ ಗಂಗಾವತಿ ಶ್ರೀ ಚನ್ನಬಸವಸ್ವಾಮಿ ತಾತನ ಜಾತ್ರೆಗೆ ಪಟ್ಟಣದ ಸದ್ಭಕ್ತರಿಂದ ಸಂಗ್ರಹಿಸಿದ ದವಸ-ಧಾನ್ಯ, ಇತರ ಪದಾರ್ಥಗಳನ್ನು ಶ್ರೀಮಠಕ್ಕೆ ಗುರುವಾರ ಕಳುಹಿಸಿ ಕೊಡಲಾಯಿತು.

ಶ್ರೀ ಗುರುಶಿವಯೋಗಿ ಚನ್ನಬಸವಸ್ವಾಮಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ತಾತಾನ ಜಾತ್ರಾ ನಿಮಿತ್ತ ಕಟ್ಟಿದ ಜೋಳಿಗೆಯಿಂದ ರೊಟ್ಟಿ, ಇನ್ನಿತರ ಪದಾರ್ಥಗಳನ್ನು ಸಂಗ್ರಹಿಸಲಾಗಿತ್ತು.

ಈ ಕುರಿತು ಟ್ರಸ್ಟ್‌ನ ಅಧ್ಯಕ್ಷ ಶಿವಪ್ಪ ಮಸ್ಕಿ ಮಾತನಾಡಿ, ಗಂಗಾವತಿಯಲ್ಲಿ ಜ. ೧೧ರಂದು ಶ್ರೀ ಚನ್ನಬಸವ ತಾತನ ಜಾತ್ರೆ ನಡೆಯಲಿದೆ. ಗಂಗಾವತಿ ನಗರ ಸೇರಿದಂತೆ ತಾಲೂಕಿನ ಸಮಸ್ತ ಜನತೆಯ ಆರಾಧ್ಯ ದೈವವಾಗಿರುವ ಚನ್ನಬಸವ ತಾತನ ಜಾತ್ರೆಗೆ ಪಟ್ಟಣದ ಜನತೆ ಶ್ರದ್ಧೆ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಮತ್ತು ಜಾತ್ರೆ ದಿನ ಪಟ್ಟಣದಿಂದ ಪಾದಯಾತ್ರೆ ತೆರಳುತ್ತಾರೆ. ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಟ್ಟಿದ ಜೋಳಿಗೆಯಲ್ಲಿ ಜನರು ತಾತನಿಗೆ ದವಸ-ಧಾನ್ಯ ಇನ್ನಿತರ ಪದಾರ್ಥಗಳನ್ನು ಶ್ರದ್ಧಾಭಕ್ತಿಯಿಂದ ನೀಡಿದ್ದಾರೆ. ಪ್ರತಿ ವರ್ಷವೂ ಈ ಪದ್ಧತಿ ನಡೆದುಕೊಂಡು ಬಂದಿದ್ದು, ಈ ವರ್ಷ ೫ ಕ್ವಿಂಟಲ್ ೩೧ ಕೆಜಿ ಬೂಂದಿ ಲಾಡು, ೫೦೦ ರೊಟ್ಟಿ ಮತ್ತು ಬಾಳೆಹಣ್ಣಿನ ಗೊನೆ ಈ ಎಲ್ಲವನ್ನು ಮಠಕ್ಕೆ ಕಳುಹಿಸಲಾಗಿದೆ ಎಂದರು.

ಟ್ರಸ್ಟ್‌ನ ಪ್ರಮುಖರಾದ ಎಚ್. ಚಾಂದಸಿಂಗ್ ರಜಪೂತ, ಮಾರ್ಕೆಂಡೇಶ ಮರಳಿ, ಅಮರೇಶ್ ಪೊಲೀಸ್ ಪಾಟೀಲ್, ಬಸವರಾಜ್ ಚಿನಿವಾಲರ್, ಸುರೇಶ ಹಚ್ಚೊಳ್ಳಿ, ಚಂದ್ರಕಾಂತ ಸಜ್ಜನ್, ಗುಂಜಳ್ಳಿ ವೀರೇಶ, ವಿಶ್ವನಾಥ ಪಲ್ಲೆದ್. ಅಪ್ಪಾಜೀ ಕೊಟ್ರಪ್ಪಸಜ್ಜನ್, ಮುತ್ತಯ್ಯ ಸ್ವಾಮಿ ಹಿರೇಮಠ, ಮಾರ್ಕಂಡೇಶ ಸೋಮನಾಳ, ರಾಚಪ್ಪ ಬಳಿಗಾರ, ವೀರೇಶಪ್ಪ ಸಂಡೂರ್, ಮಲ್ಲಯ್ಯ ಸ್ವಾಮಿ, ಪಂಪಣ್ಣ ಕಂಬಿ ಮತ್ತಿತರು ಇದ್ದರು.

ಶ್ರೀ ಚನ್ನಬಸವ ಸ್ವಾಮಿ ಜಾತ್ರೆಗೆ 5179 ರೊಟ್ಟಿ:

ಗಂಗಾವತಿಯ ಶ್ರೀಚೆನ್ನಬಸವಸ್ವಾಮಿ ಜಾತ್ರೆ ಜ. 11ರಂದು ನಡೆಯಲಿದ್ದು, ಜಾತ್ರೆಗೆ ಬರುವ ಭಕ್ತರಿಗಾಗಿ ಸಿಬಿಎಸ್ ಮಹಿಳಾ ಸಂಘದಿಂದ 5179 ರೊಟ್ಟಿಗಳನ್ನು ಕಳುಹಿಸಿಕೊಡಲಾಗಿದೆ.79ನೇ ಜಾತ್ರೆಯ ನಿಮಿತ್ತವಾಗಿ ಸಿಬಿಎಸ್ ಮಹಿಳಾ ಸಂಘದಿಂದ ಸತತವಾಗಿ 5 ವರ್ಷದಿಂದ ರೊಟ್ಟಿ ಸೇವೆ ಮಾಡುತ್ತಿದ್ದು, ಈ ವರ್ಷವೂ ಒಂದೂವರೆ ಕ್ವಿಂಟಲ್ ಜೋಳದಿಂದ 5179 ರೊಟ್ಟಿಯನ್ನು ಸಂಘದ ಸದಸ್ಯರಾದ ಗೀತಾ, ಕವಿತಾ, ಶರಣಮ್ಮ, ಸುವರ್ಣಾ, ಅನ್ನಪೂರ್ಣಾ, ಶೈಲಾ, ಉಷಾ, ಉಮಾ, ವಿದ್ಯಾ, ಆಶಾ, ಅರ್ಚನಾ, ಗೀತಾ, ಗಂಗಮ್ಮ, ಶೋಭಮ್ಮ, ಜ್ಯೋತಿ, ಸಾವಿತ್ರಿ, ಶಾಲಿನಿ, ಜಯಶ್ರೀ ಸೇರಿ ರೊಟ್ಟಿಯನ್ನು ಮಠಕ್ಕೆ ಸಲ್ಲಿಸಿದ್ದಾರೆ. ಪುರಾಣಕ್ಕೆ ಬಂದ ಮುತ್ತೈದೆಯರಿಗೆ ಅರಿಶಿನ-ಕುಂಕುಮ, ಹೂ, ಬಳೆ ಹಾಗೂ 1000 ರವಾ ಉಂಡಿಯನ್ನು ಪ್ರಸಾದವಾಗಿ ನೀಡಿದ್ದಾರೆ.