ವಿಸಿ ನಾಲೆ ಆಧುನೀಕರಣಕ್ಕೆ 5 ಸಾವಿರ ಕೋಟಿ ರು. ಅನುದಾನ ನೀಡಿ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Oct 17 2024, 01:01 AM IST

ವಿಸಿ ನಾಲೆ ಆಧುನೀಕರಣಕ್ಕೆ 5 ಸಾವಿರ ಕೋಟಿ ರು. ಅನುದಾನ ನೀಡಿ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ 5ನೇ ಹಂತದ ಕುಡಿಯುವ ನೀರು ಯೋಜನೆ ಇಡೀ ನಾಡಿಗೆ ಸಮರ್ಪಣೆಯಾಗಿದ್ದು, ಇದರಿಂದ ಬೆಂಗಳೂರನ್ನು ಇಡೀ ಪ್ರಪಂಚವೇ ನೋಡುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದೆ ಎಂಬುದನ್ನು ಈ ಯೋಜನೆಯಿಂದ ಸಾಬೀತಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ/ಹಲಗೂರು

ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ನಾನಾ ಆಧುನೀಕರಣಕ್ಕೆ ಬಿಡಿಎ ವತಿಯಿಂದ 5 ಸಾವಿರ ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಿಎಂ, ಡಿಸಿಎಗೆ ಮನವಿ ಮಾಡಿದರು.

ತೊರೆಕಾಡನಹಳ್ಳಿಯ ಬೆಂಗಳೂರು ನೀರು ಸರಬರಾಜು ಮಂಡಳಿಯಲ್ಲಿ ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಿಂದ ಬೆಂಗಳೂರಿಗೆ ನೀರು ಕೊಡುತ್ತಿರುವುದರಿಂದ ಈ ಭಾಗ ರೈತರಿಗೆ ಅನುಕೂಲವಾಗುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರ ಕೋಟಿ ರು.ಗಳನ್ನು ವಿಸಿ ನಾಲೆ ಅಭಿವೃದ್ಧಿ ಬಿಡುಗಡೆ ಮಾಡುವಂತೆ ಕೋರಿದರು.

ಕಾವೇರಿ 5ನೇ ಹಂತದ ಕುಡಿಯುವ ನೀರು ಯೋಜನೆ ಇಡೀ ನಾಡಿಗೆ ಸಮರ್ಪಣೆಯಾಗಿದ್ದು, ಇದರಿಂದ ಬೆಂಗಳೂರನ್ನು ಇಡೀ ಪ್ರಪಂಚವೇ ನೋಡುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದೆ ಎಂಬುದನ್ನು ಈ ಯೋಜನೆಯಿಂದ ಸಾಬೀತಾಗಿದೆ ಎಂದು ಮಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಕೇವಲ ಭಾವನಾತ್ಮಕವಾಗಿ ಜನರ ಬಳಿ ಹೋಗಲ್ಲ. ನಾವು ಕೆಲಸ ಮಾಡುವ ಮೂಲಕ ಹೋಗುತ್ತೇವೆ. ಈ ಯೋಜನೆ 2014ರಲ್ಲಿ ಆರಂಭ ಮಾಡಲಾಗಿತ್ತು. ಇಂದು ಸಿಎಂ ಸಿದ್ದರಾಮಯ್ಯನವರೇ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಅವರಿಗೆ ಒಂದು ಬದ್ಧತೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ತುಂಗಾ ಭದ್ರ ಡ್ಯಾಂ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕೆ ಮಾಡಿದ್ದರು. ಆದರೆ, ಐದೇ ದಿನದಲ್ಲಿ ದುರಸ್ತಿ ಕಾರ್ಯ ಮಾಡಿ ಕೆಲಸದಲ್ಲಿ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ ಎಂದರು.