ಹಳದಿ ಮಾರ್ಗದಲ್ಲಿ 5ನೇ ರೈಲು ಓಡಾಟ ಆರಂಭ

| Published : Nov 02 2025, 03:00 AM IST

ಸಾರಾಂಶ

ಎಪ್ಪತ್ತನೇ ಕನ್ನಡ ರಾಜ್ಯೋತ್ಸವ ಆಚರಣೆ ದಿನವಾದ ಶನಿವಾರದಿಂದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲು ಸೇವೆ ಆರಂಭವಾಯಿತು. ಹೊಸ ರೈಲಿನ ಸೇರ್ಪಡೆಯೊಂದಿಗೆ, ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರದ ನಡುವಿನ ಅವಧಿ 19 ನಿಮಿಷದ ಬದಲಾಗಿ 15 ನಿಮಿಷಕ್ಕೆ ಇಳಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಪ್ಪತ್ತನೇ ಕನ್ನಡ ರಾಜ್ಯೋತ್ಸವ ಆಚರಣೆ ದಿನವಾದ ಶನಿವಾರದಿಂದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲು ಸೇವೆ ಆರಂಭವಾಯಿತು. ಹೊಸ ರೈಲಿನ ಸೇರ್ಪಡೆಯೊಂದಿಗೆ, ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರದ ನಡುವಿನ ಅವಧಿ 19 ನಿಮಿಷದ ಬದಲಾಗಿ 15 ನಿಮಿಷಕ್ಕೆ ಇಳಿಕೆಯಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಮೂಲಕ ಹಾದು ಹೋಗುವ ಆರ್‌. ವಿ. ರಸ್ತೆ - ಬೊಮ್ಮಸಂದ್ರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ರೈಲಿನಿಂದ ಅನುಕೂಲ ಆಗಲಿದೆ. ಆಗಸ್ಟ್‌ನಲ್ಲಿ ಹಳದಿ ಮಾರ್ಗ ಆರಂಭವಾದಾಗ ಮೂರು ರೈಲುಗಳು ಅರ್ಧಗಂಟೆಗೊಮ್ಮೆ ಸಂಚಾರ ಮಾಡುತ್ತಿದ್ದವು. ಅಕ್ಟೋಬರ್‌ನಲ್ಲಿ ನಾಲ್ಕನೇ ರೈಲು ಸೇರ್ಪಡೆ ಆಗಿತ್ತು. ಟರ್ಮಿನಲ್‌ಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಕೋಲ್ಕತ್ತಾದ ತೀತಾಗಢ್ ರೈಲ್‌ ಸಿಸ್ಟಂ ಆರನೇ ರೈಲುಸೆಟ್‌ನ್ನು ಇದೇ ತಿಂಗಳು ಬೆಂಗಳೂರಿಗೆ ಕಳಿಸುವ ನಿರೀಕ್ಷೆಯಿದೆ.