ಕಬ್ಬಿಗೆ ರಾಜ್ಯ ಸರ್ಕಾರ ಹೆಚ್ಚುವರಿ ನೂರು ರೂಪಾಯಿ ನಿಗದಿ ಮಾಡಿ ಸಕ್ಕರೆ ಕಾರ್ಖಾನೆಗಳು 50 ಸರ್ಕಾರದಿಂದ 50 ರೂಪಾಯಿ ಪಾವತಿಸಬೇಕು ಎಂದು ಆದೇಶದಂತೆ ಸರ್ಕಾರದ ಪಾಲಿನ 50 ರು. ಹಣವನ್ನು ಪಾವತಿಸಲು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯಲ್ಲಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಬ್ಬಿಗೆ ರಾಜ್ಯ ಸರ್ಕಾರ ಹೆಚ್ಚುವರಿ ನೂರು ರೂಪಾಯಿ ನಿಗದಿ ಮಾಡಿ ಸಕ್ಕರೆ ಕಾರ್ಖಾನೆಗಳು 50 ಸರ್ಕಾರದಿಂದ 50 ರೂಪಾಯಿ ಪಾವತಿಸಬೇಕು ಎಂದು ಆದೇಶದಂತೆ ಸರ್ಕಾರದ ಪಾಲಿನ 50 ರು. ಹಣವನ್ನು ಪಾವತಿಸಲು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯಲ್ಲಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟದವರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ಈ ಪ್ರಕರಣ ತೀರ್ಮಾನವಾಗುವವರಿಗೆ. ಹಣ ಪಾವತಿ ಸಾಧ್ಯವಿಲ್ಲ ಎಂದು ಕಾರ್ಖಾನೆಯವರು ತಿಳಿಸಿದ್ದಾರೆ. ಆದರೆ, ಸರ್ಕಾರದ ವತಿಯಿಂದ ಪಾವತಿಸಬೇಕಾದ ಟನಗೆ 50 ರು. ರೈತರ ಖಾತೆಗೆ 29ರ ಒಳಗಾಗಿ ಜಮೆ ಮಾಡಲಾಗುವುದು. ಚಳವಳಿ ಕೈ ಬಿಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಭರವಸೆ ನೀಡಿದ್ದರಿಂದ ಚಳವಳಿ ನಿಲ್ಲಿಸಲಾಯಿತು.

ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರದ ಎಲ್ಲಾ ಆದೇಶಗಳಿಗೂ ಕಾರ್ಖಾನೆಯವರು ತಡೆಯಾಜ್ಞೆ ತರುತ್ತಾರೆ. ಈ ರೀತಿ ಆದರೆ ರೈತರಿಗೆ ನ್ಯಾಯ ಹೇಗೆ ಸಿಗುತ್ತದೆ. ಹೈ ಕೋರ್ಟ್‌ ನಲ್ಲಿ ಒಬ್ಬರು ನ್ಯಾಯಾಧೀಶರು ಮೂರು ತಿಂಗಳ ಹಿಂದೆ ಇದೇ ಆದೇಶಕ್ಕೆ ಸಂಬಂಧಿಸಿದಂತೆ ತಡೆಯಜ್ಞೆ ನೀಡುವುದಿಲ್ಲ ಎಂದರು.

ಇದೇ ಹೈ ಕೋರ್ಟ್‌ಮತ್ತೊಬ್ಬ ನ್ಯಾಯಾಧೀಶರು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಈ ರೀತಿ ಆದರೆ ರೈತರಿಗೆ ನ್ಯಾಯ ಕೊಡುವವರು ಯಾರು ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಗುಜರಾತ್ ನಲ್ಲಿ ಒಂದು ಟನ್ ಕಬ್ಬಿಗೆ 5,000 ಪಾವತಿಸಿದ್ದಾರೆ ಆದರೆ ಇಲ್ಲಿ ಬಳ್ಳಾರಿ ಕಾರ್ಖಾನೆಯವರು 3400 ಕೊಡಲು ಕಷ್ಟ ಎಂದು ಹೇಳುತ್ತಾರೆ. ಇದು ರೈತರಿಗೆ ಮಾಡುವ ಮೋಸ ಅಲ್ಲವೇ ಎಂದು ಪ್ರಶ್ನಿಸಿದರು.

ಎಲ್ಲರೂ ರೈತರ ಪರ ಎಂದು ಹೇಳುತ್ತಾರೆ. ಆದರೆ ಕಾನೂನಿನ ಅಡಿಯಲ್ಲಿ ರೈತರನ್ನ ನುರಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಕೆಂಡಗಣಪ್ಪ, ಪ್ರಸಾದ್ ನಾಯಕ, ಮಹದೇವಸ್ವಾಮಿ, ನಾಗೇಶ್, ಬಸವರಾಜ, ಮಹಾದೇವು, ನಾಗೇಂದ್ರ, ಅಂಬಳೆ ಮಂಜುನಾಥ್, ಸುನೀಲ್, ಜಯರಾಮು, ನಂಜುಂಡಸ್ವಾಮಿ, ಶಿವಣ್ಣ, ಬಾಲು, ಸತೀಶ್, ಕಮಲಮ್ಮ ಮೊದಲಾದವರು ಇದ್ದರು.