ಬಂಡೆಯ ಕೆಳಗೆ 50 ಮರಿ, ಮೂವತ್ತಕ್ಕೂ ಹೆಚ್ಚು ಹಾವಿನ ಮೊಟ್ಟೆ ಪತ್ತೆ: ಆತಂಕ

| Published : Mar 24 2025, 12:32 AM IST

ಬಂಡೆಯ ಕೆಳಗೆ 50 ಮರಿ, ಮೂವತ್ತಕ್ಕೂ ಹೆಚ್ಚು ಹಾವಿನ ಮೊಟ್ಟೆ ಪತ್ತೆ: ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗೆ ಹೋಗುವ ಮುಖ್ಯದ್ವಾರದ ಬಳಿ ಹಾಗೂ ಹಾಸ್ಟೆಲ್ ಸಮೀಪದಲ್ಲಿರುವ ಮೂಲೆಯ ಬಂಡೆ ಕೆಳಗೆ ಸುಮಾರು 50ಕ್ಕೂ ಹೆಚ್ಚು ಹಾವಿನ ಮರಿಗಳು, ಮೂವತ್ತಕ್ಕೂ ಹೆಚ್ಚು ಹಾವಿನ ಮೊಟ್ಟೆಗಳ ಜೊತೆಗೆ ಹಾವೊಂದು ವಾಸವಾಗಿರುವ ದೃಶ್ಯ ತಾಲೂಕಿನ ಬಣವಿಕಲ್ಲು ಗ್ರಾಮದ ಕಸ್ತೂರಬಾ ವಸತಿ ಶಾಲೆಯಲ್ಲಿ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಶಾಲೆಗೆ ಹೋಗುವ ಮುಖ್ಯದ್ವಾರದ ಬಳಿ ಹಾಗೂ ಹಾಸ್ಟೆಲ್ ಸಮೀಪದಲ್ಲಿರುವ ಮೂಲೆಯ ಬಂಡೆ ಕೆಳಗೆ ಸುಮಾರು 50ಕ್ಕೂ ಹೆಚ್ಚು ಹಾವಿನ ಮರಿಗಳು, ಮೂವತ್ತಕ್ಕೂ ಹೆಚ್ಚು ಹಾವಿನ ಮೊಟ್ಟೆಗಳ ಜೊತೆಗೆ ಹಾವೊಂದು ವಾಸವಾಗಿರುವ ದೃಶ್ಯ ತಾಲೂಕಿನ ಬಣವಿಕಲ್ಲು ಗ್ರಾಮದ ಕಸ್ತೂರಬಾ ವಸತಿ ಶಾಲೆಯಲ್ಲಿ ಕಂಡುಬಂದಿದೆ.

ಹಾವಿನ ಮರಿ ನೋಡಿದ ಶಾಲಾ ವಿದ್ಯಾರ್ಥಿಗಳು ಜೊತೆಗೆ ಅಲ್ಲಿನ ಶಿಕ್ಷಕರು, ಸಿಬ್ಬಂದಿ ಸಹ ಭಯಗೊಂಡಿದ್ದಾರೆ. ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡಲಾಗಿತ್ತು. ನಂತರ ಸಂಜೆ ಕಸ್ತೂರ ಬಾ ವಸತಿ ಶಾಲೆಯ ಓರ್ವ ವಿದ್ಯಾರ್ಥಿನಿಯೊಬ್ಬರು ಶಾಲೆಯ ಮುಖ್ಯದ್ವಾರದ ಬಳಿ ನಿಂತಿದ್ದಾಗ ಒಂದೆರಡು ಹಾವಿನ ಮರಿ ಅಲ್ಲಿದ್ದ ಬಂಡೆಯ ಕೆಳಗಿಂದ ಮೇಲೆ ಬಂದಿದ್ದನ್ನು ಕಂಡು ಅಲ್ಲೇ ಇದ್ದ ಅಡುಗೆ ಸಹಾಯಕಿ ಅಕ್ಕಮ್ಮಗೆ ವಿಷಯ ತಿಳಿಸಿದ್ದಾಳೆ. ಅಷ್ಟರಲ್ಲಿ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಮತ್ತು ಕಸ್ತೂರಿ ಬಾ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಸೇರಿದ್ದಾರೆ. ಕಡಪ ಬಂಡೆ ಎತ್ತಿ ಹಾವು ಮರಿ ಕಂಡ ಸ್ಥಳದಲ್ಲಿ ನೋಡಿದಾಗ 50ಕ್ಕೂ ಹೆಚ್ಚು ಹಾವಿನ ಮರಿ ಕಂಡಿವೆ. ತಕ್ಷಣವೇ ಮಕ್ಕಳು, ಶಿಕ್ಷಕರು ಭಯಭೀತರಾಗಿದ್ದಾರೆ. ನಂತರ ಅಲ್ಲೇ ಪಕ್ಕದಲ್ಲಿ ಸುಮಾರು 30ಕ್ಕೂ ಹೆಚ್ಚು ಹಾವಿನ ಮೊಟ್ಟೆಗಳನ್ನು ನೋಡಿದ ಶಾಲೆಯ ಶಿಕ್ಷಕರು ಗ್ರಾಮದ ಕೆಲವರನ್ನು ಕರೆಸಿ ಸುತ್ತಮುತ್ತಲ ನೆಲ ಅಗೆದಿದ್ದಾರೆ. ಆಗ ದೊಡ್ಡ ಹಾವು ಸಹ ಕಂಡಿದೆ ನಂತರ ಗ್ರಾಮದ ಕೆಲವರು ಹಾವು ಮತ್ತು ಹಾವಿನಮರಿಗಳನ್ನು ಹಿಡಿದು ಮೊಟ್ಟೆಗಳ ಸಮೇತ ದೂರದ ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.