ಸಾರಾಂಶ
ಶಿಗ್ಗಾಂವಿ: ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ್ ಸಮಾಜದವರಿಗೆ ಸಭಾಭವನ ನಿರ್ಮಾಣಕ್ಕಾಗಿ ₹೫೦ ಲಕ್ಷ ನೀಡಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಭರವಸೆ ನೀಡಿದರು.ಪಟ್ಟಣದ ಸೀತಾರಾಮ ಲೇಔಟ್‌ನಲ್ಲಿ ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ್ ಸಮಾಜ ಹಾಗೂ ಸೂರ್ಯವಂಶ ಕ್ಷತ್ರೀಯ ಕಲಾಲ್ ಖಾಟಿಕ್ ಯುವಕ ಮಂಡಳದ ಆಶ್ರಯದಲ್ಲಿ ರಥಸಪ್ತಮಿ ಪ್ರಯುಕ್ತ ಹಮ್ಮಿಕೊಂಡ ಭಗವಾನ್ ಸೂರ್ಯನಾರಾಯಣ ಜಯಂತಿ ಹಾಗೂ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.ಕಲಾಲ್ ಸಮುದಾಯವನ್ನು ಎಸ್‌ಸಿ ಸಮುದಾಯಕ್ಕೆ ಸೇರಿಸುವ ಬೇಡಿಕೆ ಇದೆ. ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸಮುದಾಯದ ಜತೆ ಸದಾ ಇರುತ್ತೇನೆ ಎಂದರು.ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸಣ್ಣ ಸಣ್ಣ ಸಮಾಜಗಳೆಂದು ಕೂತರೆ ಸಾಲದು. ಚಾಣಾಕ್ಷತನ, ಚಾಕಚಕ್ಯತೆಯಿಂದ ಮುಂದೆ ಬರಬೇಕಿದೆ. ಸಮುದಾಯಗಳು ಸಂಕೋಚ ಮನೋಭಾವದಿಂದ ಹೊರಬರಬೇಕು. ಸಂವಿಧಾನ ಎಲ್ಲರಿಗೂ ಅವಕಾಶ ನೀಡಿದೆ. ಆತ್ಮವಿಶ್ವಾಸವಿದ್ದರೆ ಎಲ್ಲವೂ ಸಾಧ್ಯವಿದೆ. ನನ್ನ ದುಡಿಮೆಯ ಸ್ವಂತ ಹಣದಲ್ಲಿ ₹೧.11 ಲಕ್ಷವನ್ನು ಸಭಾಭವನದ ಕಟ್ಟಡಕ್ಕೆ ನೀಡುತ್ತೇನೆ ಎಂದು ಘೋಷಿಸಿದರು.ಗಂಜಿಗಟ್ಟಿ ಮಠದ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಬ್ರಿಟಿಷರ ಒಡೆದಾಳುವ ನೀತಿಯು ಕೆಲ ರಾಜಕಾರಣಿಗಳು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಸಮಾಜದಲ್ಲಿ ಒಗ್ಗಟ್ಟು ಕಡಿಮೆ ಆಗಿದೆ. ನಾವು ಮೊದಲು ವಿಚಾರವಂತರಾಗಬೇಕು ಎಂದರು.ಶಿಗ್ಗಾಂವಿಯ ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೂರ್ಯವಂಶ ಕ್ಷತ್ರಿಯ ಕಲಾಲ್ ಸಮಾಜದ ರಾಜ್ಯಾದ್ಯಕ್ಷ ಲಕ್ಷ್ಮಣ ಗಂಡಗಾಳೆ, ಮುಖಂಡ ಲಕ್ಷ್ಮಿಕಾಂತ ಮಿರಜಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾಧ್ಯಕ್ಷ ಚನ್ನಪ್ಪ ಕಲಾಲ, ತಾಲೂಕಾಧ್ಯಕ್ಷ ಕೇಷ್ಣಾಜಿ ಕಲಾಲ, ಹಿರಿಯ ವಕೀಲ ರಾಮಚಂದ್ರ ಕಲಾಲ, ಮುಖಂಡರಾದ ಸದಾನಂದ ಕಜೂರಕರ, ಯಲ್ಲಪ್ಪ ಮಹೇಂದ್ರಕರ, ಚಂದ್ರು ಕೊಡ್ಲಿವಾಡ, ನಾಗರಾಜ ಜೋರಾಪುರ, ರಾಮಚಂದ್ರ ಕಲಾಲ, ಪಿ.ಡಿ. ಕಲಾಲ್, ಅನೀಲ ಕೋಟೆಕರ, ಕೃಷ್ಣಾಜಿ ಕೋಳೆಕಾರ, ಗಿರೀಶ ಕಲಾಲ, ಶಶಿಕಲಾ ಮಿರಜಕರ, ಮೋಹನ್ ಮಿರಜಕರ, ರಾಮಕೃಷ್ಣ ಪರಾಂಡೆಕರ, ಬಾಬು ಕಲಾಲ, ಚೇತನ ಕಲಾಲ, ಕುಮಾರ ಮಿರಜಕರ, ವಿಶ್ವನಾಥ ಮಿರಜಕರ ಸೇರಿದಂತೆ ಕಲಾಲ್ ಸಮಾಜದ ಮುಖಂಡರು ಇದ್ದರು.ಒಣ, ಹಸಿ ಕಸ ವಿಂಗಡಿಸಿರಾಣಿಬೆನ್ನೂರು: ಒಣ ಹಾಗೂ ಹಸಿ ಕಸವನ್ನು ವಿಂಗಡಣೆ ಮಾಡಿ ಪ್ರತಿದಿನ ಗ್ರಾಮ ಪಂಚಾಯಿತಿಯ ಸ್ವಚ್ಟತಾ ವಾಹಿನಿಗೆ ನೀಡಿದರೆ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಡಲು ಸಾಧ್ಯವಿದೆ ಎಂದು ತಾಪಂ ಇಒ ಪರಮೇಶ್ ತಿಳಿಸಿದರು.ತಾಲೂಕಿನ ಗುಡ್ಡದಆನ್ವೇರಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಗ್ರಾಮದಲ್ಲಿ ಒಣಕಸ ಹಾಗೂ ಹಸಿಕಸ ಸಂಗ್ರಹಣ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಸಮುದಾಯದ ಸ್ವಚ್ಛತೆಯಿದ್ದರೆ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದರು.
ಪಿಡಿಒ ರಾಜೀವ್ ಪಾಟೀಲ ಮಾತನಾಡಿ, ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಒಣ ಹಾಗೂ ಹಸಿಕಸ, ನೀರಿನ ಮಿತವಾದ ಬಳಕೆ ಕುರಿತು ಮಹಿಳಾ ಸಂಘದ ಪ್ರತಿನಿಧಿಗಳು ಜನಪ್ರತಿನಿಧಿಗಳ ತಂಡದೊಂದಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದರು.ಗ್ರಾಪಂ ಅಧ್ಯಕ್ಷೆ ಬಸವ್ವ ತಳವಾರ, ಉಪಾಧ್ಯಕ್ಷೆ ಲಕ್ಷ್ಮಿ ಚಟ್ನಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಮಹಿಳಾ ಸಂಘದ ಪ್ರತಿನಿಧಿಗಳು, ಎನ್ಆರ್ ಎಲ್‌ಎಂ ಸಂಚಾಲಕ ಹನುಮಂತಪ್ಪ ಸಾರಥಿ, ಬಿಎಫ್‌ಟಿ ಹನುಮಂತ, ಅಂಗನವಾಡಿ ಕಾರ್ಯಕರ್ತೆರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.