50 ಲಕ್ಷ ರು. ಗಳ ವೆಚ್ಚದ ಗುರುಭವನ ಕಾಮಗಾರಿ ವೀಕ್ಷಣೆ

| Published : Dec 04 2024, 12:31 AM IST

ಸಾರಾಂಶ

50 lakhs. Observation of Guru Bhavan work at a cost of Rs

-ಶೀಘ್ರ ಗುರುಭವನ ಕಾಮಗಾರಿ ಪೂರ್ಣ: ಸಚಿವ ದರ್ಶನಾಪುರ

-----

ಕನ್ನಡಪ್ರಭ ವಾರ್ತೆ ಶಹಾಪುರ

ಶಿಕ್ಷಕರ ಅನುಕೂಲಕ್ಕಾಗಿ ಹಲವು ದಿನಗಳ ಶಿಕ್ಷಕರ ಬೇಡಿಕೆ ಆದ ಗುರುಭವನ ಕಟ್ಟಡ 50 ಲಕ್ಷ ರು.ಗಳ ಅನುದಾನದಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ಬಾಲಕಿಯರ ಪ್ರೌಢಶಾಲಾ ಬಳಿ ನಿರ್ಮಾಣವಾಗುತ್ತಿರುವ ಗುರುಭವನ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾತನಾಡಿ, ಶಿಕ್ಷಕರ ಕಾರ್ಯಕ್ರಮಗಳು ಮತ್ತು ಇತರ ಸಮಾರಂಭಗಳಿಗೆ ಗುರುಭವನ ಕಟ್ಟಡವು ಸದ್ಬಳಕೆಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಕದ ಕಟ್ಟಡದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಟ್ಟಡ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಾವೀದ ಬೇಗಂ, ಬಿ.ಆರ್.ಸಿ. ರೇಣುಕಾ ಪಾಟೀಲ್, ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ್, ಬಿ.ಆರ್. ಸಿ ಮಲ್ಲಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.

----

ಫೋಟೊ:ಶಹಾಪುರ ನಗರದ ಬಾಲಕಿಯರ ಪ್ರೌಢಶಾಲಾ ಹತ್ತಿರದಲ್ಲಿ 50 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗುರುಭವನ ಕಟ್ಟಡ ಕಾಮಗಾರಿಯನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ವೀಕ್ಷಿಸಿದರು.

-----

3ವೈಡಿಆರ್9