500 ಕೋಟಿ ಮಹಿಳೆಯರು ಸಂಚರಿಸಿದ್ದು ಸಾಧನೆ

| Published : Jul 15 2025, 01:00 AM IST

ಸಾರಾಂಶ

ಬಡ ಜನರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಶಕ್ತಿ ಯೋಜನೆ ಉಪಯುಕ್ತವಾಗಿದೆ. ಇಲ್ಲಿಯವರೆಗೆ ಸುಮಾರು 500 ಕೋಟಿ ಮಹಿಳೆಯರು ಸಂಚಾರ ಮಾಡಿದ್ದು ಸಾಧನೆಯಾಗಿದೆ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಾತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಲು ತುಂಬಾ ಅನುಕೂಲವಾಗಿದ್ದು ಶಕ್ತಿ ಯೋಜನೆಯು ಸಾಧನೆಯ ಗರಿಮೆದಾಟಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡ ಶಕ್ತಿ ಯೋಜನೆ ಸಾಧನಾ ಸಂಭ್ರಮ ಕಾರ್ಯಕ್ರಮವನ್ನು ಬಸ್ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಬಡ ಜನರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಶಕ್ತಿ ಯೋಜನೆ ಉಪಯುಕ್ತವಾಗಿದೆ. ಇಲ್ಲಿಯವರೆಗೆ ಸುಮಾರು 500 ಕೋಟಿ ಮಹಿಳೆಯರು ಸಂಚಾರ ಮಾಡಿದ್ದು ಸಾಧನೆಯಾಗಿದೆ ಎಂದರು.

ತಾಲೂಕುಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ ಮಾತನಾಡಿ, ಸಾರಿಗೆ ಇಲಾಖೆಯ ಶಕ್ತಿ ಯೋಜನೆಯು ಮಹಿಳೆಯರಿಗೆ ವರದಾನವಾಗಿದೆ. ಪ್ರಯಾಣದ ಸಂಭ್ರಮದಲ್ಲಿ ಯಾವುದೇ ಅವಘಡ ಆಗದಂತೆ ಫಲಾನುಭವಿಗಳು ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಹಿರಿಯ ನಾಗರಿಕರು, ಅಂಗವಿಕಲರು, ಸೇರಿದಂತೆ ಮಕ್ಕಳಿಗೆ ಸಂಚಾರದಲ್ಲಿ ಅನುಕೂಲ ಒದಗಿಸಿ ಸಹಕಾರ ನೀಡಬೇಕೆಂದರು.

ತಾಪಂ ಇಒ ಸಂಜೀವ ಜುನ್ನೂರ, ಸಿಡಿಪಿಒ ಅರುಣಕುಮಾರ ಎಸ್.ಬಿ, ಘಟಕ ವ್ಯವಸ್ಥಾಪಕ ಮಹೇಶ ತಿರಕನ್ನವರ, ಸಂಚಾರ ಅಧಿಕ್ಷಕ ವೈ.ಎಸ್.ಗುಡದಪ್ಪಗೋಳ, ಎಟಿಎಸ್ ಮಲ್ಲಪ್ಪ ಕೆಂಚರಾಮನಹಾಳ, ಮಾಜಿ ತಾಪಂ ಸದಸ್ಯ ಶ್ರೀಕಾಂತ ಸುಂಕದ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಪರಂಡಿ, ಟಿಐ ಬಿ.ಜಿ.ಪುಡಕಲಕಟ್ಟಿ, ಜೆಎ. ವ್ಹಿ.ಜಿ.ಹೂಗಾರ, ಆರ್.ಎಸ್.ಹುಲಕುಂದ, ಕಾಂಗ್ರೆಸ್‌ ಧುರೀಣ ಉಮೇಶ ಬೋಳೆತ್ತಿನ, ಹಸನ ಗೊರವನಕೊಳ್ಳ, ಸಂಚಾರ ನಿಯಂತ್ರಕ ಸಿ.ಯು.ಹಿರೇಮಠ, ಪುರಸಭೆ ಸದಸ್ಯ ಅಂಬಿಕಾ ಕೊಟಬಾಗಿ, ಚಾಲಕ ಅಜಾದ್ ಬಹದ್ದೂರ, ನಿರ್ವಾಹಕ ಮೆಹಬೂಬ್ ಬುಕ್ಕಟಕಿ ಉಪಸ್ಥಿತರಿದ್ದರು. ತಾಲೂಕುಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಬಸ್‌ನಲ್ಲಿ ಕುಳಿತ ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್‌ಗಳನ್ನು ಸಾಂಕೇತಿಕವಾಗಿ ಶಾಸಕರು ಇದೇ ಸಂದರ್ಭದಲ್ಲಿ ವಿತರಿಸಿದರು.