ಹಾರಂಗಿ ಜಲಾಶಯದಿಂದ ಅಣೆಕಟ್ಟು ಅಚ್ಚು ಕಟ್ಟು ವ್ಯಾಪ್ತಿಯ ಕಾಲುವೆಗೆ ಬುಧವಾರ 500 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗಿದೆ. ಅಣೆಕಟ್ಟು ಸಮೀಪದ ಕಾಲುವೆಯ ಮುಖ್ಯ ಗೇಟ್ ಗಳಿಗೆ ಪೂಜೆ ಸಲ್ಲಿಸಿದ ಅಧಿಕಾರಿಗಳು ನೀರು ಬಿಡುಗಡೆಗೆ ಕ್ರಮ ಕೈಗೊಂಡರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹಾರಂಗಿ ಜಲಾಶಯದಿಂದ ಅಣೆಕಟ್ಟು ಅಚ್ಚು ಕಟ್ಟು ವ್ಯಾಪ್ತಿಯ ಕಾಲುವೆಗೆ ಬುಧವಾರ 500 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗಿದೆ. ಅಣೆಕಟ್ಟು ಸಮೀಪದ ಕಾಲುವೆಯ ಮುಖ್ಯ ಗೇಟ್ ಗಳಿಗೆ ಪೂಜೆ ಸಲ್ಲಿಸಿದ ಅಧಿಕಾರಿಗಳು ನೀರು ಬಿಡುಗಡೆಗೆ ಕ್ರಮ ಕೈಗೊಂಡರು.

ಜಲಾಶಯಕ್ಕೆ ಪ್ರಸಕ್ತ 5931 ಕ್ಯುಸೆಕ್ಸ್ ಪ್ರಮಾಣ ನೀರು ಹರಿದು ಬರುತ್ತಿದ್ದು, ನದಿಗೆ ಒಟ್ಟು 3900 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗುತ್ತಿದೆ. ಜಲಾಶಯದಲ್ಲಿ ಎಂಟು ಟಿಎಂಸಿ ನೀರಿನ ಸಂಗ್ರಹ ಇರುವುದಾಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.

ನಡುವೆ ಅಣೆಕಟ್ಟು ಆವರಣದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ಜಲಾಶಯದಿಂದ ನೀರು ಹಾಯಿಸಿ ಎರಡು ಘಟಕಗಳ ಮೂಲಕ ಒಟ್ಟು 15 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದು ನಂತರ ಈ ನೀರನ್ನು ನದಿಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ.