ಬೀದರ್‌ನಲ್ಲಿ 500 ಗಿಡಗಳ ನೆಟ್ಟು ಪೋಷಣೆ: ಪುನೀತ್‌ ಸಿಂಗ್‌

| Published : Jul 16 2024, 12:43 AM IST

ಸಾರಾಂಶ

ಬೀದರ್‌ ನಗರದ ಹೊಸ ಬಸ್ ನಿಲ್ದಾಣ ಸಮೀಪ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಹಸಿರೆ ಉಸಿರು ಎಂಬ ಧ್ಯೇಯದೊಂದಿಗೆ ನಗರದಲ್ಲಿ 500 ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್‌ನಲ್ಲಿ ಕೂಡ ಉತ್ತಮ ಹಸಿರು ವಾತಾವರಣ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ನಾವು ಬೀದರ್ ನಗರದಲ್ಲಿ ಒಟ್ಟು 500 ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತೇವೆ ಎಂದು ಕ್ಲಬ್‌ನ ಅಧ್ಯಕ್ಷರಾದ ಸರದಾರ್ ಪುನೀತ್ ಸಿಂಗ್ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣ ಸಮೀಪ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಹಸಿರೆ ಉಸಿರು ಎಂಬ ಧ್ಯೇಯದೊಂದಿಗೆ ನಗರದಲ್ಲಿ 500 ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.ಈ ವೇಳೆ ಅವರು ಮಾತನಾಡಿದರು.

ಕ್ಲಬ್‌ನ ಸಲಹೆಗಾರರಾದ ಬಸವರಾಜ್ ಧನ್ನೂರು ಮಾತನಾಡಿ, ಬೀದರ್ ಕೂಡ ಬೆಂಗಳೂರು ಮಾದರಿಯಲ್ಲಿ ಹಸಿರುಮಯವಾಗಬೇಕು. ಅದಕ್ಕಾಗಿ ನಮ್ಮ ಸಿಲ್ವರ್ ಸ್ಟಾರ್‌ಗಳು ಒಂದು ಮಹತ್ತರ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಬೀದರ್‌ನಲ್ಲಿ 500ಕ್ಕೂ ಅಧಿಕ ಸಸ್ಯಗಳನ್ನು ನೆಟ್ಟು ಘೋಷಣೆ ಮಾಡುತ್ತೇವೆ ಅಂತ ಸಂಕಲ್ಪ ಕೂಡ ಮಾಡಿದ್ದಾರೆ, ಇದು ಪ್ರಶಂಸನೀಯ ಎಂದರು.

ಜಿಲ್ಲಾ ಗವರ್ನರ್ ಸಾಧು ಗೋಪಾಲ ಕೃಷ್ಣ, ಬೀದರ್ ನಗರ ಸಭೆಯ ಅಧ್ಯಕ್ಷ ಮಹಮ್ಮದ್ ಗೌಸ್ ಅವರು ರೋಟರಿ ಕ್ಲಬ್ ಆಫ್ ಬೀದರ್‌ನ ಸಿಲ್ವರ್ ಸ್ಟಾರ್ ಮಾಡುತ್ತಿರುವಂತಹ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಬ್ ನ ಜಿಲ್ಲಾ ಕಾರ್ಯದರ್ಶಿ ಬಿ. ಶಿವರಾಮಿ ರೆಡ್ಡಿ, ಸಹಾಯಕ ಗವರ್ನರ್, ಕಲ್ಯಾಣ ವಲಯ ಸೂರ್ಯಕಾಂತ ರಾಮಶೆಟ್ಟಿ, ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್‌ ಸ್ಟಾರ್ ಉಪಾಧ್ಯಕ್ಷ ಅಧೀಶ್ ಆರ್.ವಾಲಿ,ಪೂಜಾ ಜಾರ್ಜ್ ಸ್ಯಾಮ್ಯುಯೆಲ್ - ಕಾರ್ಯದರ್ಶಿ ,ಸ್ಫೂರ್ತಿ ಧನ್ನೂರು - ಜಂಟಿ ಕಾರ್ಯದರ್ಶಿ, ಯೋಜನಾ ಸಂಯೋಜಕ: ಆನಂದ ಕುಲಕರ್ಣಿ, ಮಂಜುನಾಥ ಹೂಗಾರ, ಸಂಗಮೇಶ ವಡಗಾವೆ ನಿರ್ದೇಶಕರು ಸಹನಾ ಪಾಟೀಲ್, ಗುರು ಸಿಂದೋಲ್, ಕೀರ್ತಿ ವಾಲೆ, ಭಾವೇಶ್ ಪಟೇಲ್, ಲವನೀತ್ ಸಿಂಗ್ ಮತ್ತಿತರಿದ್ದರು.