ಬಸವೇಶ್ವರ ವೃತ್ತ ಅಭಿವೃದ್ಧಿಗೆ ₹೫೨.೭೮ ಲಕ್ಷ ಅನುದಾನ

| Published : Mar 28 2025, 12:32 AM IST

ಬಸವೇಶ್ವರ ವೃತ್ತ ಅಭಿವೃದ್ಧಿಗೆ ₹೫೨.೭೮ ಲಕ್ಷ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಸವೇಶ್ವರ ಪುತ್ಥಳಿಗೆ ಶಿಲಾಮಂಟಪ, ಮುಂಭಾಗದಲ್ಲಿ ಉದ್ಯಾನ, ಬೆಳಕಿನ ವ್ಯವಸ್ಥೆ ಸೇರಿ ಒಟ್ಟು ₹೫೨.೭೮ ಲಕ್ಷ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಬಸವೇಶ್ವರ ವೃತ್ತಕ್ಕೆ ಹೊಸರೂಪ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಬಸವೇಶ್ವರ ಪುತ್ಥಳಿಗೆ ಶಿಲಾಮಂಟಪ, ಮುಂಭಾಗದಲ್ಲಿ ಉದ್ಯಾನ, ಬೆಳಕಿನ ವ್ಯವಸ್ಥೆ ಸೇರಿ ಒಟ್ಟು ₹೫೨.೭೮ ಲಕ್ಷ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಬಸವೇಶ್ವರ ವೃತ್ತಕ್ಕೆ ಹೊಸರೂಪ ನೀಡಲಾಗುವುದು ಎಂದು ಶಾಸಕ ಕೆ.ನೇಮರಾಜ ನಾಯ್ಕ ತಿಳಿಸಿದರು.

ಪಟ್ಟಣದಲ್ಲಿ ಬಸವೇಶ್ವರ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಸವೇಶ್ವರ ವೃತ್ತ ಪಟ್ಟಣದ ಮುಖ್ಯ ವೃತ್ತವಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಅಭಿವೃದ್ಧಿಪಡಿಸಲಾಗುವುದು. ಪಟ್ಟಣದ ಲಕ್ಷ್ಮೀ ನಾರಾಯಣ ಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಕೇವಲ ೨.೫ ತಿಂಗಳಲ್ಲಿ ಶಿಲಾಮಂಟಪ ನಿರ್ಮಿಸಲಾಗಿದೆ. ಮರಿಯಮ್ಮನಹಳ್ಳಿಯ ೧೮ ವಾರ್ಡ್‌ಗಳಿಗೆ ತಲಾ ₹೫೦ ಲಕ್ಷ ಅನುದಾನ ಒದಗಿಸಿದೆ. ಮಠಾಧೀಶರು ಅಭಿವೃದ್ಧಿಗೆ ಸಾಥ್ ನೀಡುತ್ತಿದ್ದಾರೆ. ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ, ಕನಕದಾಸರು, ವಾಲ್ಮೀಕಿ, ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಿಸುವುದಾಗಿ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಶೀಘ್ರದಲ್ಲಿಯೇ ಪುತ್ಥಳಿಗಳನ್ನು ಆಯಾ ವೃತ್ತದಲ್ಲಿ ಕೂರಿಸಲಾಗುವುದು ಎಂದರು.

ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್ ಮಾತನಾಡಿ, ಮೇ ೮ರಂದು ಬೃಹತ್ ಮಟ್ಟದಲ್ಲಿ ಬಸವ ಜಯಂತ್ಯುತ್ಸವ ಆಚರಿಸಲಾಗುವುದು ಎಂದರು.

ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯ, ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯ, ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಗಂಗಾಧರ, ಪುರಸಭೆ ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಮುಖಂಡರಾದ ಬ್ಯಾಟಿ ನಾಗರಾಜ, ವೈ.ಮಲ್ಲಿಕಾರ್ಜುನ, ಬಡಿಗೇರ ಬಸವರಾಜ, ಹನಸಿ ಶಿವಕುಮಾರಗೌಡ, ನಾಗಯ್ಯ ಸ್ವಾಮಿ, ಚಿತ್ತವಾಡಗಿ ಪ್ರಕಾಶ್, ಕಿನ್ನಾಳ್ ಸುಭಾಷ್, ಅಂಬಳಿ ರವೀಂದ್ರಗೌಡ, ಹೊಟೇಲ್ ಸಿದ್ದರಾಜು, ಬುಲೆಟ್ ಬಸವರಾಜ, ಚಂದ್ರಶೇಖರ ಕನ್ನಿಹಳ್ಳಿ, ಭರ್ಮಣ್ಣ ನಾಯಕ, ಜಗದೀಶ್‌ಸ್ವಾಮಿ ಇತರರಿದ್ದರು.