ನಿಮಿಷಾಂಬ ದೇಗುಲ ಹುಂಡಿಯಲ್ಲಿ 53,98,437 ರು. ಸಂಗ್ರಹ

| Published : Jan 09 2025, 12:48 AM IST

ಸಾರಾಂಶ

ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದ ಇಒ ಕೃಷ್ಣ ನೇತೃತ್ವದಲ್ಲಿ ನಡೆದ ಏಣಿಕೆಯಲ್ಲಿ, ದೇವಾಲಯದ 19 ಹುಂಡಿಗಳನ್ನು ತೆರೆದು ಏಣಿಕೆ ಮಾಡಲಾಯಿತು. ಎಲ್ಲಾ ಹುಂಡಿಗಳಿಂದ ಒಟ್ಟು 53,38,437 ರು. ಹಣ ಸಂಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಸಮೀಪದ ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದ ಭಕ್ತರ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆಯಿತು.

ದೇವಾಲಯದ ಇಒ ಕೃಷ್ಣ ನೇತೃತ್ವದಲ್ಲಿ ನಡೆದ ಏಣಿಕೆಯಲ್ಲಿ, ದೇವಾಲಯದ 19 ಹುಂಡಿಗಳನ್ನು ತೆರೆದು ಏಣಿಕೆ ಮಾಡಲಾಯಿತು. ಎಲ್ಲಾ ಹುಂಡಿಗಳಿಂದ ಒಟ್ಟು 53,38,437 ರು. ಹಣ ಸಂಗ್ರಹವಾಗಿದೆ.

ಕಳೆದ ಸೆ.30 ರಂದು ಹುಂಡಿ ಏಣಿಕೆ ನಡೆದಿತ್ತು. ಮೂರು ತಿಂಗಳಿಗೆ ನಡೆಸಲಾದ ಈ ಎಣಿಕೆಯಲ್ಲಿ ಹಣ ಜೊತೆಗೆ ಭಕ್ತರಿಂದ 121 ಗ್ರಾಂ ಚಿನ್ನ ಹಾಗೂ 381 ಗ್ರಾಂ ಬೆಳ್ಳಿ ದೊರೆತಿದೆ. ಪಟ್ಟಣದ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ದೇವಾಲಯದ ಸಮಿತಿ ಕಚೇರಿ ಪರಿವೀಕ್ಷಕ ಕೆ.ಪಿ.ಚಂದ್ರಮೋಹನ್, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಇತರರು ಇದ್ದರು. ಹುಂಡಿ ಎಣಿಕೆ ನಡೆಯುವ ವೇಳೆ ನಾಲ್ಕು ಭಾಗಗಳಲ್ಲಿ ವಿಡಿಯೊ ಕ್ಯಾಮೆರಾಗಳ ಅಳವಡಿಸಿ ಚಿತ್ರಿಕರಿಸಲಾಯಿತು.

ನಾಳೆ 10ನೇ ವರ್ಷದ ವೈಕುಂಠ ಏಕಾದಶಿ ಪೂಜೆ ಮಹೋತ್ಸವ

ಮಂಡ್ಯ:

ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕು ಹೊಳಲು ಗ್ರಾಮದಲ್ಲಿ ಶ್ರೀವಿನಾಯಕ ಗೆಳೆಯರ ಬಳಗದಿಂದ ಶ್ರೀ ಕೇಶವರಾಯಸ್ವಾಮಿ ದೇವಸ್ಥಾನದಲ್ಲಿ 10 ವರ್ಷದ ವೈಕುಂಠ ಏಕಾದಶಿ ಪೂಜೆ ಮಹೋತ್ಸವ ಅಂಗವಾಗಿ ಬೆಳಗ್ಗೆ 6 ಗಂಟೆಯಿಂದ ಶ್ರೀದೇವಿ ಭೂದೇವಿ, ಸಮೇತ ಶ್ರೀಕೇಶವ ನಾರಾಯಣಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಸುಪ್ರಭಾತ ಸೇವೆ, ಮಹಾಮಂಗಳಾರತಿ, ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಲಾಡು ಪ್ರಸಾದ ವಿನಿಯೋಗವಿದೆ ಎಂದು ಬಳಗದ ನವೀನ್ ಗೌಡ ತಿಳಿಸಿದ್ದಾರೆ.